Sunday, October 5, 2025

Latest Posts

Samyukta Hegde : ಕಿರಿಕ್ ಬೆಡಗಿಯ ಕಥೆ  ಏನು..?! ಭಾವುಕ ಪೋಸ್ಟ್ ಹಿನ್ನೆಲೆ ಇದು….!

- Advertisement -

Film News : ಆಕೆ   ಕಿರಿಕ್  ಪಾರ್ಟಿ  ಹುಡುಗಿ ಪಟಪಟ ಅಂತಾ ಮಾತಾಡಿ ಸಿನಿಮಾ ದಲ್ಲಿ ನಟನೆಗೆ ಸೈ ಎನಿಸಿಕೊಂಡಿದ್ದಾಕೆ ಸಿನಿಮಾ  ಗಿಂತಲೂ ವಿವಾದಗಳಲ್ಲೇ ಟ್ರೋಲ್ ಆಗಿದ್ದೇ ಜಾಸ್ತಿ.  ಮತ್ತೆ  ಇದೀಗ ಕಿರಿಕ್  ಬೆಡಗಿ  ಇನ್ಸ್ಟಾ ಗ್ರಾಂ ಖಾತೆಯಲ್ಲಿ ಒಂದು  ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅದರಲ್ಲಿ ಕರಾಳ ದಿನದ ಸತ್ಯವನ್ನೂ ಬಿಚ್ಚಿಟ್ಟಿದ್ದಾರೆ. ಹಾಗಿದ್ರೆ ಏನದು ಪೋಸ್ಟ್ ಇಲ್ಲಿದೆ  ನೋಡಿ ಕಂಪ್ಲೀಟ್ ಡೀಟೈಲ್ಸ್……..

ಆಕೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಕಿರಿಕ್ ಮೂಲಕವೇ ಮೆಚ್ಚುಗೆ ಪಡೆದಾಕೆ  ಸಿನಿಮಾಗಿಂತಲೂ ವಿವಾದದಲ್ಲೇ ಹೆಚ್ಚು ಟ್ರೋಲ್ ಆಗಿರೋ ನಟಿ ಸಂಯುಕ್ತಾ ಗೌಡ  ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಅದು ಯಾವುದೋ ಸಿನಿಮಾ ಅಪ್ ಡೇಟ್ ಅಲ್ಲ ಬದಲಾಗಿ ಸಿನಿಮಾ ಶೂಟಿಂಗ್ ನ ವೇಳೆ ಯಲ್ಲಾದ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ.

ಕಳೆದ ವರ್ಷ ನನ್ನ ಜೀವನದಲ್ಲಿ ಅತೀ ವ ಕಷ್ಟವನ್ನು ಅನುಭವಿಸಿದ್ದೇನೆ ಅದು  ನನ್ನ ಹೋರಾಟದ  ದಿನಗಳು ಎಂಬುವುದಾಗಿ ಕರಾಳ ವಿಚಾರವನ್ನು ಹೇಳಿದ್ದಾರೆ. ಹೀಗೆ  ಶೂಟಿಂಗ್ ವೇಳೆಯಲ್ಲಿ ಅವರಿಗೆ ಆಗಿದ್ದ ಗಾಯದ  ಬಗ್ಗೆ ಹೇಳಿಕೊಂಡಿದ್ದಾರೆ. ಶೂಟಿಂಗ್ ವೇಳೆ ಸಂಯುಕ್ತಾ ಗೆ ಕಾಲಿಗೆ  ಗಾಯ ಆಗಿತ್ತು. ಅವರ ಚೇತರಿಕೆಗೆ ಒಂದು  ವರುಷಗಳೇ ಬೇಕಾಯಿತು. ಈ ಬಗ್ಗೆ ತನ್ನ ಇನ್ಸ್ರಾ ಗ್ರಾಂ ಖಾತೆಯಲ್ಲಿ ಎಳೆ ಎಳೆಯಾಗಿ  ವಿಚಾರ ಬಿಚ್ಚಿಟ್ಟಿದ್ದಾರೆ.

ನನ್ನ ಜೀವನದಲ್ಲಿ ಅನಿಶ್ಚಿತೆ ಮೂಡಿತು. ಅದರಲ್ಲಿಯೂ ನನ್ನ ನೃತ್ಯದ ಬಗ್ಗೆ ಹೆಚ್ಚಿನ  ಅನಿಶ್ಚಿತತೆ ಉಂಟಾಗಿತ್ತು. ನಾನು ಸುಲಭವಾಗಿ ಚೇತರಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಆದರೂ ಇದ್ದ ಎಲ್ಲಾ ಧೈರ್ಯವನ್ನು ಒಟ್ಟುಗೂಡಿಸಿಕೊಂಡಿದ್ದೆ. ಬೇಗನೇ ಹುಷಾರಾಗಲು ಅಚಲ ಬದ್ಧತೆ ತೋರಿ ಮುನ್ನುಗ್ಗುವ ಇಚ್ಛೆಯನ್ನು ಹೊಂದಿದ್ದೆ.  ಆದರೂ ಹುಷಾರಾಗುತ್ತೇನೋ ಇಲ್ಲವೋ ಎನ್ನುವ ನೋವು ಕಾಡಿತ್ತು. ಆದ್ದರಿಂದ ಈ ಸಮಯದಲ್ಲಿ ಸಾಕಷ್ಟು ರೋಗಿಗಳನ್ನು ಭೇಟಿಯಾದೆ. ಅಲ್ಲಿದ್ದ ರೋಗಿಗಳಲ್ಲಿ ಒಬ್ಬರೂ ಸಂಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ. ಇದನ್ನು ನೋಡಿ ನನಗೆ ತುಂಬಾ ನಿರಾಸೆಯಾಯಿತು. ಆದರೆ ನಿರಾಸೆಗೊಳ್ಳಲು ನನಗೆ ಇಷ್ಟವಿರಲಿಲ್ಲ. ಛಲವನ್ನು ಬಿಡಲಿಲ್ಲ ಎಂದು ನಟಿ ಹೇಳಿದ್ದಾರೆ.

ನೋವನ್ನು ಒಪ್ಪಿಕೊಳ್ಳುವುದರಿಂದ ದುಬರ್ಲತೆ ಆವರಿಸುತ್ತದೆ ಎಂದು ನನಗೆ ಅರಿವಾಯಿತು. ಆದ್ದರಿಂದ  ಸವಾಲನ್ನು ಮೆಟ್ಟಿನಿಂತು ಅದರಿಂದ ಹೊರಬರುವ ಆತ್ಮಬಲವನ್ನು ಅಳವಡಿಸಿಕೊಂಡೆ. ನನಗಾಗುತ್ತಿರುವ  ಪ್ರತಿ ಹಿನ್ನಡೆಯನ್ನು ಬೆಳವಣಿಗೆಯ ಅವಕಾಶ ಎಂದೇ ಅಂದುಕೊಂಡು ಜೀವನವನ್ನು ಇದ್ದಹಾಗೆ  ಸ್ವೀಕರಿಸಿದೆ.

ವಾರಗಳು ತಿಂಗಳುಗಳಾಗಿ ಮಾರ್ಪಟ್ಟಂತೆ, ನನ್ನೊಳಗೆ ನಡೆಯುತ್ತಿರುವ ಬದಲಾವಣೆಯನ್ನು ನಾನು ನೋಡಲಾರಂಭಿಸಿದೆ. ಈಗ ವರ್ಷಗಳೇ ಉರುಳಿವೆ. ಇಷ್ಟೆಲ್ಲ ಪ್ರಯತ್ನದಿಂದಾಗಿ ಹಿಂದೆಂದಿಗಿಂತಲೂ ವಿಜಯಶಾಲಿ ಮತ್ತು ಬಲಶಾಲಿಯಾಗಿ ನಾನಿಂದು ನಿಮ್ಮ ಮುಂದೆ ನಿಂತಿದ್ದೇನೆ ಎಂದಿದ್ದಾರೆ. ಆದರೂ ತಮ್ಮ  ದೇಹ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ನನ್ನ ಆತ್ಮಬಲದಿಂದ ಮಹತ್ವದ ಬದಲಾವಣೆ ಆಗಿದೆ. ಈಗ ನಾನು ಯಾವುದೇ ಸವಾಲುಗಳನ್ನು ಎದುರಿಸಲು ಸಿದ್ಧಳಾಗಿದ್ದೇನೆ. ಅಂತಹ ನಂಬಿಕೆ ನನ್ನಲ್ಲಿ ಬೆಳೆದಿದೆ. ಇನ್ನು ಕೆಲವೇ ದಿನಗಳಲ್ಲಿ ಸಂಪೂರ್ಣ ಗುಣವಾಗುತ್ತೇನೆ ಎಂಬ ನಂಬಿಕೆ ಇದೆ ಎಂದಿದ್ದಾರೆ ಸಂಯುಕ್ತಾ.

ನಾನು ನನ್ನ ಈ ಕಥೆಯನ್ನು ಹಂಚಿಕೊಳ್ಳುವುದು ನನ್ನ ಹೆಗ್ಗಳಿಕೆಗಾಗಿ ಅಲ್ಲ. ಇದರ ಬದಲಾಗಿ ತಮ್ಮದೇ ಆದ ಜೀವನದ ಹೋರಾಟಗಳನ್ನು ಎದುರಿಸುತ್ತಿರುವ ಯಾರನ್ನಾದರೂ ಪ್ರೇರೇಪಿಸಲು ನಾನಿದನ್ನು ಹೇಳುತ್ತಿದ್ದೇನೆ ಎಂದಿದ್ದಾರೆ ನಟಿ ಸಂಯುಕ್ತಾ.

Dharshan : ವಿದೇಶದಲ್ಲಿ ಸ್ನೇಹಿತರ ಜೊತೆ ಜಾಲಿ ಮೂಡ್ ನಲ್ಲಿರುವ  ದಚ್ಚು …..!

Prabas: ಮತ್ತೆ ಒಂದಾಗಿ ಸಿನಿಮಾ ಮಾಡಲಿದ್ದಾರಾ ಅನುಷ್ಕಾ ಪ್ರಭಾಸ್ ?

Kiccha Sudeep : ತಿರುಪತಿಯಲ್ಲಿ ಕಿಚ್ಚ …! ವಿವಾದದ ನಡುವೆ ನಿರಾಳತೆಯ ನಡೆ..!

 

 

- Advertisement -

Latest Posts

Don't Miss