Thursday, December 12, 2024

Latest Posts

ಒಂಬತ್ತು ಗ್ರಾಮಗಳ ಬಗ್ಗೆ ತಪ್ಪು ಮಾಹಿತಿ ರವಾನೆ: ಊರು ಬಿಡುವ ಆತಂಕದಲ್ಲಿ ಜನರು..!

- Advertisement -

ಬೆಳಗಾವಿ: ಜಿಲ್ಲೆಯ ಕಿತ್ತೂರು ತಾಲೂಕಿನ ಕುಲವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ 9 ಗ್ರಾಮಗಳಲ್ಲಿ 1957 ರಿಂದ ಜನ ವಾಸ ಮಾಡುತ್ತಿದ್ದರು ಆದರೆ ಈಗ ಅಧಿಕಾರಿಗಳ ಎಡವಟ್ಟಿನಿಂದ ಜನ ಊರುಗಳನ್ನೇ ತೊರೆಯುವ ಭೀತಿ ಎದುರಾಗಿದೆ. ಅಷ್ಟಕ್ಕೂ ಈ ಅಧಿಕಾರಿಗಳು ಮಾಡಿದ ಎಡವಟ್ಟು ಏನು ಅಂತೀರಾ ನಾವ್ ಹೇಳ್ತಿವಿ ಕೇಳಿ.

1957 ಕುಲವಳ್ಳಿ ಗ್ರಾಮ ಪಂ ವ್ಯಾಪ್ತಿಗೆ ಬರುವ ಒಂಬತ್ತು ಗ್ರಾಮಗಳಾದ ಕಿತ್ತೂರು ತಾಲೂಕಿನ ಕುಲವಳ್ಳಿ, ಮಾಚಿ, ಕತ್ರಿದಡ್ಡಿ, ಗಲಗಿನಮಡ, ಸಾಗರ, ನಿಂಗಾಪೂರ,ದಿಂಡಕಲಕೊಪ್ಪ, ಗಂಗ್ಯಾನಟ್ಟಿ, ಪ್ಲಾಂಟೆಂಶನ್ ಗ್ರಾಮಸ್ಥರು ಈಗ ಊರು ಬಿಡುವ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಪೋಷಕರು ನಾಳೆಯಿಂದ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸದಿರಲು ನಿರ್ಧರಿಸಿದ್ದಾರೆ. 08 ಹಿರಿಯ-ಕಿರಿಯ ಪ್ರಾಥಮಿಕ ಶಾಲೆ, 01 ಪ್ರೌಢ ಶಾಲೆಗಳಿದ್ದು ಸುಮಾರು 1000 ಕ್ಕೂ ಅಧಿಕ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ , 05ಕಂದಾಯ ಗ್ರಾಮಗಳು 2600 ಕುಟುಂಬಗಳು ವಾಸ, 08 ಅಂಗನವಾಡಿಗಳು ಇದ್ದರೂ ಜನರಹಿತ ಪ್ರದೇಶವೆಂದು ಅಧಿಕಾರಿಗಳಿಂದ ತಪ್ಪು ಮಾಹಿತಿ ರವಾನೆಯಾಗಿದೆ.

ಅಷ್ಟಕ್ಕೂ ಈ ಗ್ರಾಮಗಳ ಇತಿಹಾಸ ನೋಡುವುದಾದರೆ ?

ಬ್ರಿಟೀಷರ ಎದೆಯನ್ನು ತನ್ನ ಖಡ್ಗದ ವರಸೆಯಿಂದ ನಡುಗಿಸಿದ್ದ ಕೆಚ್ಚೆದೆಯ ಕನ್ನಡಿಗ ಕಿತ್ತೂರಿನ ಸೈನಿಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಬಲಿದಾನ ಮಾಡಿದ ಮಹಾವೀರ ಜನಿಸಿದ ನಾಡು ಈ ಕಿತ್ತೂರು. ಹಿಂದೆ ರಾಯಣ್ಣನಿಂದ ಭಯಗೊಂಡ ಬ್ರಿಟೀಷರು ಅವರನ್ನು ಹೇಗಾದರೂ ಮಾಡಿ ಸದೆಬಡೆಯಬೇಕು ಎನ್ನುವ ದೃಷ್ಟಿಯಿಂದ ಸಂಚು ರೂಪಿಸಿದ್ದರು. ಅದೇವೇಲೆ ಖೋದಾನಪುರ ಇನಾಂದಾರ್ ಮನೆತನದವರು ಬ್ರಿಟೀಷರಿಗೆ ರಾಯಣ್ಣನನ್ನು ಹಿಡಿದುಕೊಡುತ್ತಾರೆ. ರಾಯಣ್ಣನನ್ನು ಹಿಡಿದುಕೊಟ್ಟಿದ್ದಕ್ಕೆ ಬ್ರಿಟೀಷರಿಂದ 11 ಸಾವಿರ ಎಕರೆ ಜಮೀನನ್ನು ಘಾತಕ್ ಇನಾಂ ಎನ್ನುವ ಹೆಸರಲ್ಲಿ ಪಡೆದುಕೊಂಡಿರುತ್ತಾರೆ.

ಆದರೆ ಬೈಲಹೊಂಗಲ ತಾಲೂಕಿನ ಖೋದಾನಪೂರ ಗ್ರಾಮದ ಬಾಪುಸಾಬ್ ಬಾಳಾಸಾಬ್ ಇನಾಂದಾರ್ ಎನ್ನುವವರಿಂದ ಇನಾಂ ರದ್ದತಿ ಖಾಯ್ದೆ, ಮತ್ತು ಭೂ ಸುಧಾರಣೆ ಕಾಯ್ದೆಯನ್ನು ಇದರ ಜೊತೆಗೆ ಅಧಿಕಾರಿಗಳ ಜೊತೆ ಸೇರಿ ಸುಳ್ಳು ದಾಖಲೆ ಸೃಷ್ಠಿಸಿ  ಜಮೀನನ್ನು ಕಬ್ಜಾ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

ಕೋರ್ಟ್ ನಲ್ಲಿ 2700ಎಕರೆ ಜಮೀನಿಗೆ ಸಂಬಂಧಿಸಿದಂತೆ ಇನಾಂ ರದ್ದತಿ ಆದ್ಮೇಲೆ ಕೇಸ್ ದಾಖಲಾಗಿದ್ದು ಆಗ ಸುಪ್ರೀಂ ಕೋರ್ಟ್ ನಲ್ಲಿ ಬಾಪುಸಾಬ್ ಇನಾಮಂದಾರ ಪರವಾಗಿ ಕೋರ್ಟ್ ತೀರ್ಪು ನೀಡಿತ್ತು. ಭೂ ನ್ಯಾಯ ಮಂಡಳಿಯಲ್ಲಿ ಕೇಸ್ ಇತ್ಯರ್ಥ ಪಡಿಸಿಕೊಳ್ಳುವಂತೆ ಕೋರ್ಟ್ ನಿರ್ದೇಶನ ಮಾಡಿತ್ತು. ಆದರೆ ಆಗ ಅಧಿಕಾರಿಗಳು ಒಂಬತ್ತು ಗ್ರಾಮಗಳಲ್ಲಿ ಜನವಸತಿ ಇರುವುದಿಲ್ಲ ಯಾರು ಸಹ ಇಲ್ಲಿಯವರೆಗೂ ವಾಸವಿಲ್ಲ ಹಾಗು ಯಾವುದೇ ರೀತಿಯ ಮೂಲಭೂತ ಸೌಕರ್ಯಗಳಿಲ್ಲ ಅದು ಬರಿ ಗುಡ್ಡಗಾಡು ಪ್ರದೇಶ ಅಂತ ಅಧಿಕಾರಿಗಳ ಪ್ರದೇಶದ ಬಗ್ಗೆ ತಪ್ಪು ಮಾಹಿತಿಯನ್ನು ಭೂ ನ್ಯಾಯಮಂಡಳಿಗೆ ವರದಿ ಸಲ್ಲಿಸಿರುತ್ತಾರೆ. ಅಧಿಕಾರಿಗಳ ವರದಿ ಗಮನಿಸಿದ ಭೂ ನ್ಯಾಯ ಮಂಡಳಿ ಸದ್ಯ ಬಾಪುಸಾಬ್ ಇನಾಮಂದಾರಗೆ ಮಾಲೀಕ ಹಕ್ಕನ್ನ ನೀಡಿದೆ.

Puneeth Rajkumar : ರಾತ್ರಿ ಬೆಳಗಾಗೋದ್ರೊಳಗೆ ಅಪ್ಪು ಪ್ರತಿಮೆ ಅನಾವರಣ…!

Hubli Dharawad; ಉಗ್ರನ ಪತ್ನಿಯ ಜಾಡು ಹಿಡಿದ ದೆಹಲಿಯ ಪೊಲೀಸರು

Social media: ಅಪ್ರಾಪ್ತರ ಅಶ್ಲೀಲ ವೀಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿ ಸ್ಥಳಿಯರಿಂದ ಬಂಧನ..!

- Advertisement -

Latest Posts

Don't Miss