ಹಾಸನ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಭೆ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸುರೇಶ್‌ಗೆ ಕ್ಲಾಸ್ ತೆಗೆದುಕೊಂಡ ಸಚಿವ ರಾಜಣ್ಣ
ಯಾವ ಊರು ನಿಂದು, ನೀನು ಎಲ್ಲಿ ವಾಸವಾಗಿದ್ದೀಯಾ ನೀನ್ನನ್ನು ನೋಡಿದ್ರೆ ಕೆಲಸ ಮಾಡವನ ತರ ಕಾಣ್ತಿಲ್ಲಾ ಏನ್ ಮಾಡ್ತಿದಿಯಾ ನಿನ್ ತಲೆ ನೀನು ಎಲ್ಲಿ ವಾಸ ಮಾಡ್ತಿದ್ದಿಯಾ ಸುಳ್ಳು ಹೇಳಿದ್ರೆ ಅಮಾನತಿಗೆ ಬರಿತಿನಿ ಎಲ್ಲಿದೆ ನಿಮ್ಮ ಮನೆ ಯಾರಾದ್ರು ಪೊಲೀಸ್ ಕಳುಹಿಸಿ ಚೆಕ್ ಮಾಡಿಸಿ ಮೊಟ್ಟೆ ಕೇಸು ನಿಂದೆ, ನೀವು ಅಲರ್ಟ್ ಆಗಿದ್ರೆ ದೂರುಗಳು ಯಾಕೆ ಬರ್ತಾವೆ
ಸಮರ್ಥ ಏಜೆನ್ಸಿಯವರು ಮೊಟ್ಟೆ ಪೂರೈಕೆ ಮಾಡುತ್ತಿದ್ದಾರೆ ಎಂದು ಉತ್ತರ ಸಿಇಓ ಪೂರ್ಣಿಮಾ ಯಾವನದಾದ್ರು ಏಜೆನ್ಸಿ ಇರಲಿ ಅವನ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು ಅವನು ತಪ್ಪು ಮಾಡಿದ್ದಕ್ಕೆ ಮೊಟ್ಟೆ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದೀರಿ ಅದು ಸರಿಯಾದ ಶಿಕ್ಷೆಯಲ್ಲ ಅವನ ಮೇಲೆ ಕ್ರಿಮಿನಲ್ ಕೇಸ್ ಹಾಕಲೇಬೇಕು ನೀವೆಲ್ಲಾ ಏನು ಮಾಡ್ತಿದ್ದೀರಿ, ದಿನ ಅದನ್ನೆಲ್ಲಾ ಪರಿಶೀಲನೆ ಮಾಡಬೇಕಲ್ವಾಬ್ಲಾಕ್ ಲಿಸ್ಟ್‌ಗೆ ಹಾಕುವುದು ಶಿಕ್ಷೆ ಅಲ್ಲಾ ಅಧಿಕಾರಿಗೆ ವಿರುದ್ಧ ಗರಂ ಆದ ಸಚಿವರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಶಾಸಕ ಕೆ.ಎಂ.ಶಿವಲಿಂಗೇಗೌಡ ,ಅಂಗನವಾಡಿ ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ನೀಡುತ್ತಿದ್ದಾರೆ. ಮಕ್ಕಳು ತಿನ್ನಲು ಆಗದೆ ಕೈಯಲ್ಲಿ ಹಿಡಿದುಕೊಂಡು ರಸ್ತೆಯಲ್ಲಿ ಎಸೆದುಕೊಂಡು ಹೋಗುತ್ತಿರುತ್ತಾರೆ. ಅಂತಹ ಕಳಪೆ ಗುಣಮಟ್ಟದ ಆಹಾರ ನೀಡುತ್ತಿದ್ದಾರೆ.
Village visit: ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಸಂತೋಷ್ ಲಾಡ್