ಮುಂದಿನ ವರ್ಷವು ಹಾಲಿನ ದರದ ಏರಿಕೆಯ ಬಗ್ಗೆ ಪ್ರಸ್ತಾವನೆ ಬಂದಿದ್ದು, ಸಂಕ್ರಾಂತಿ ಹಬ್ಬದ ಬಳಿಕ ಹಾಲಿನ ದರದ ಪರಿಷ್ಕರಣೆ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹೇಳಿದ್ದಾರೆ.ಸುದ್ದಿಗೋಷ್ಠಿ ನಡೆಸಿದ ಅವರು, ಬುಧವಾರ ನಡೆದ ಹಾಲಿನ ಒಕ್ಕೂಟದ ಸಭೆಯಲ್ಲಿ 5 ರೂ. ದರ ಏರಿಕೆಗೆ ಪ್ರಸ್ತಾವನೆ ಬಂದಿದೆ. ಈ ಬಗ್ಗೆ ನಾವು ಪರಿಶೀಲಿಸುತ್ತೇವೆ. ಇನ್ನೂ ನಂದಿನಿ ಹಾಲಿನಲ್ಲಿ 50 ಎಂಎಲ್ ಹೆಚ್ಚುವರಿ ನೀಡಿ, 2 ರೂ. ಹೆಚ್ಚಳ ಮಾಡಲಾಗಿತ್ತು. ಈ ಹೆಚ್ಚುವರಿ ಹಾಲು ವಾಪಸ್‍ಗೆ ನಿರ್ಧಾರ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಐದು ವರ್ಷದಲ್ಲಿ ಏಕಾಏಕಿ ಹಾಲಿನ ಉತ್ಪಾದನೆ ಹೆಚ್ಚಾಗಿತ್ತು. ಹೀಗಾಗಿ ಕೆಎಂಎಫ್ 50 ಎಂಎಲ್ ಹಾಲನ್ನು ಹೆಚ್ಚುವರಿಯಾಗಿ ಸೇರಿಸಿ 2 ರೂ. ಹೆಚ್ಚು ಮಾಡಿತ್ತು. ಆದರೆ ಈಗ ಹಾಲಿನ ಉತ್ಪಾದನೆ ಯಥಾಸ್ಥಿತಿಗೆ ಬಂದಿದೆ. ಹೀಗಾಗಿ ಹೆಚ್ಚುವರಿ ಹಾಲು 50 ಎಂಎಲ್‍ನ್ನು ಕಡಿತ ಮಾಡಿ ಈ ಹಿಂದಿನಂತೆ ಸರಬರಾಜು ಮಾಡಲು ನಿರ್ಧಾರ ಮಾಡಲಾಗಿದೆ.
ಇಂದಿನಿಂದ ಇಡೀ ಬೆಂಗಳೂರು ನಗರದಲ್ಲಿ ಇಡ್ಲಿ ದೋಸೆ ಹಿಟ್ಟು ನೀಡಿದ್ದೇವೆ. ಖಾಸಗಿಯವರು ದೋಸೆ ಹಿಟ್ಟು/ಇಡ್ಲಿ ಹಿಟ್ಟು ಎಷ್ಟು ಮಾರ್ಕೆಟಿಂಗ್ ಮಾಡ್ತಾರೋ ಅದರ 20% ನಷ್ಟು ನಾವು ನೀಡುತ್ತೇವೆ. ಅಂದರೆ 5 ಸಾವಿರ ಮೆಟ್ರಿಕ್ ಟನ್ ನೀಡಲಿದ್ದೇವೆ. 15-20% ನಷ್ಟು ಸದ್ಯಕ್ಕೆ ನೀಡಲಿದ್ದೇವೆ. ಈಗ ಖಾಸಗಿಯವರು 30 ಸಾವಿರ ಮೆಟ್ರಿಕ್ ಟನ್ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.ಎಲ್ಲರಿಗೂ ಪ್ರೋಟಿನ್ ಬೇಕು. ಹೀಗಾಗಿ ಗುಣಮಟ್ಟದ ಹಿಟ್ಟು ನೀಡುತ್ತೇವೆ. ಇದು ನಂದಿನಿ, ಪಾರ್ಲರ್ ಆನ್‍ಲೈನ್‍ನಲ್ಲಿಯೂ ಸಿಗಲಿದೆ. ಬೆಂಗಳೂರಿನಲ್ಲಿ ಆರಂಭಿಕ ದಿನದಲ್ಲಿ ಮಾರ್ಕೆಟಿಂಗ್ ಮಾಡುತ್ತೇವೆ. ಶೀಘ್ರದಲ್ಲೇ ಬೇರೆ ಕಡೆಯೂ ಆರಂಭಿಸಲಿದ್ದೇವೆ ಎಂದು ಮಾಹಿತಿ ನಿಡಿದ್ದಾರೆ.