Sunday, September 8, 2024

Latest Posts

KMF-ಹಾಲಿನ ದರ ಪರಿಷ್ಕರಣೆ

- Advertisement -

ಬೆಂಗಳೂರು:ದೇಶದಲ್ಲಿ ಪ್ರಿಯೊಂದರ ಬೆಲೆಯೂ ತಿಂಗಳಿಗೆ ಎರಡುತಿಂಗಳಿಗೆಮ್ಮೆ ಜಾಸ್ತಿ ಮಾಡ್ತಾನೆ ಇರ್ತಾರೆ ಆದರೆ ಪ್ರತಿದಿನ  ಬೆಳಿಗ್ಗೆ ಎದ್ದ ತಕ್ಷಣ ಬೇಕಾಗಿರುವುದು ಹಾಲು ಆದರೆ ಈ ಹಾಲಿನ ಬೆಲೆ ಮಾತ್ರ ಕಳೆದೆರೆಡು ವರ್ಷಗಳಿಂದ ಪರಿಷ್ಕರಣೆಯಾಗಿಲ್ಲ

ಇಂಧನ ಬೆಲೆ ಏರಿಕೆಯಿಂದಾಗಿ ಎಲ್ಲದರ ಬೆಲೆ ಜಾಸ್ತಿಯಾದ ಕಾರಣ ಹಾಲಿನ ಧರದಲ್ಲಿ ಏರಿಕೆ ಮಾಡಲು ಮುಂದಾಗಿದ್ದಾರೆ15 ಒಕ್ಕೂಟಗಳು ನಷ್ಟದ ಪರಿಸ್ಥಿತಿಯಲ್ಲಿವೆ. ಸದ್ಯ ಹಾಲು ಮಾರಾಟ ಪ್ರತಿ ಲೀಟರ್ 39 ರೂಪಾಯಿ ಇದೆ ಇದರಲ್ಲಿ ಹಾಲು ಉತ್ಪಾದಕರ ಸಂಘಕ್ಕೆ 35.50 ಪೈಸೆ ಹೋಗುತ್ತಿದೆ. ಮಾರಾಟಗಾರರಿಗೆ ಪ್ರತಿ ಲೀಟರ್ ಗೆ 2 ರೂ ಕಮೀಷನ್. ಉಳಿದ 1.50 ಪೈಸೆ ಲಾಭದಿಂದ ವ್ಯವಹಾರ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದು ಒಕ್ಕೂಟಗಳ ಮಾತು.

ಪ್ರತಿದಿನ ಬೆಂಗಳೂರಿಗೆ 13 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ಇದರಿಂದ ಪ್ರತಿದಿನ 15 ರಿಂದ 16 ಲಕ್ಷ ಪ್ರತಿನಿತ್ಯ ನಷ್ಟವಾಗುತ್ತೆ. ಪ್ರತಿ ಲೀ ಗೆ ಮಾರಾಟ ದರದ ಮೇಲೆ 5 ರುಪಾಯಿ ಹೆಚ್ಚಳ ಮಾಡಲು ಅವಕಾಶ ಕೊಡಬೇಕು. ಹೆಚ್ಚಳ ಮಾಡದಿದ್ದರೆ ಒಕ್ಕೂಟಗಳು ಸಾಲದ ಸುಳಿಯಲ್ಲಿ ಸಿಲುಕುತ್ತವೆ. ಹೀಗಾಗಿ ಈ ಬಾರಿ ಹಾಲಿನ ದರ ಪರಿಷ್ಕರಣೆ ಮಾಡುವಂತೆ ಒಕ್ಕೂಟಗಳು ಸರ್ಕಾರಕ್ಕೆ ಒತ್ತಾಯ ಮಾಡಿವೆ.

ಪ್ರತೀ ಲೀಟರ್ ಗೆ ಕನಿಷ್ಠ 5 ರೂ ಏರಿಕೆಗೆ ಪ್ರಸ್ತಾವನೆ ಇಟ್ಟಿರುವ ಬಗ್ಗೆ ಕೆಎಂಎಫ್​ ಅಧ್ಯಕ್ಷ ಭೀಮಾ ನಾಯಕ್ ಹಾಗೂ ಎಲ್ಲ ಮಹಾಮಂಡಳಿಯ  ನಿರ್ದೇಶಕರ ಜೊತೆ ಸಿದ್ದರಾಮಯ್ಯ ಸಭೆ ನಡೆಸಲಿದ್ದು, ಸಿಎಂ ಸಭೆ ಬಳಿಕ ಹಾಲಿನ ದರ ಏರಿಕೆ  ತಳಿಯಲಿದೆ.

Dowry- ವರದಕ್ಷಣೆ ಕಿರುಕುಳ ನೀಡಿ ಕೊಲೆ ಮಾಡಿದ ಆರೋಪ

Water tanker- ನೀರಿನ ಟ್ಯಾಂಕರ್ ಪಲ್ಟಿ ರಾಯಚೂರಿನ ಓರ್ವ ಸಾವು

Anganavadi center-ಅಂಗನವಾಡಿ ಕೇಂದ್ರಗಳಲ್ಲಿ ಕೊಳೆತ ಮೊಟ್ಟೆ ವಿತರಣೆ

- Advertisement -

Latest Posts

Don't Miss