ಮಾವಿನ ಹಣ್ಣು ಯಾರಿಗೆ ತಾನೇ ಇಷ್ಟ ಆಗಲ್ಲ. ಮಾವಿನ ಹಣ್ಣನ್ನು ಎಲ್ಲರೂ ಕೂಡ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಆಯುರ್ವೇದದಲ್ಲಿ ಮಾವಿನ ಮರಕ್ಕೆ ಮತ್ತು ಮಾವಿನ ಎಲೆಗೆ ಹೇಗೆ ತುಂಬಾ ಪ್ರಾಮುಖ್ಯತೆ ಇದೆಯೋ ಹಾಗೆಯೇ ಮಾವಿನ ಹಣ್ಣಿನ ಗೊರಟೆಗೂ ಅಷ್ಟೇ ಪ್ರಾಮುಖ್ಯತೆ ಇದೆ. ಮಾವಿನ ಹಣ್ಣನ್ನು ತಿಂದು ಅದರ ಗೊರಟೆಯನ್ನ ಎಸೆದು ಬಿಡುತ್ತೇವೆ. ಆದರೆ ಇದರಿಂದ ಅನೇಕ ಉಪಯೋಗಗಳಿವೆ. ಅದರ ಬಗ್ಗೆ ನಿಮಗೆ ತಿಳಿಸಿಕೊಡುತ್ತೇನೆ.
ಮೊದಲಿಗೆ ನೀವು ಈ ಗೊರಟೆ ಇಂದ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ನಿಮಗೆ ಏನಾದರೂ ಹೊಟ್ಟೆ ಸಮಸ್ಯೆ ಇದ್ದರೆ ಮತ್ತು ಕೂದಲು ಚೆನ್ನಾಗಿ ಬೆಳೆಯುವುದಕ್ಕೆ ಹಾಗೂ ಕೂದಲು ಬಿಳಿ ಇದ್ದರೆ ಅದನ್ನು ಕಪ್ಪುಬಣ್ಣಕ್ಕೆ ತರಲು ಈ ಗೊರಟೆ ತುಂಬಾ ಸಹಾಯ ಮಾಡುತ್ತದೆ. ಮಾವಿನ ಹಣ್ಣಿನಿಂದ ಆರೋಗ್ಯಕ್ಕೆ ಅನೇಕ ಉಪಯೋಗಗಳಿದ್ದು, ಇದರಲ್ಲಿ ವಿಟಮಿನ್, ಕ್ಯಾಲ್ಸಿಯಂ, ಐರನ್, ಫೈಬರ್, ಪೊಟ್ಯಾಸಿಯಮ್, ಮೆಗ್ನೀಸಿಯಮ್, ರಂಜಕ ಮತ್ತು ಸೋಡಿಯಂ ಇದೆ. ಅಲ್ಲದೆ ಮಾವಿನ ಹಣ್ಣಿನ ಸೇವನೆಯಿಂದ ಕ್ಯಾನ್ಸರ್, ಕೆಟ್ಟ ಕೊಲೆಸ್ಟ್ರಾಲ್‌ಗಳ ನಾಶ, ಕಣ್ಣಿನ ಸಮಸ್ಯೆಗಳನ್ನು ನಿವಾರಿಸಬಹುದು.
ಅಷ್ಟೇ ಅಲ್ಲದೆ ಮಾವಿನ ಹಣ್ಣಿನ ಗೊರಟೆಯನ್ನ ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿಕೊಂಡು ಪ್ರತಿನಿತ್ಯ ತಿನ್ನುವುದರಿಂದ ಹೊಟ್ಟೆನೋವು ಮತ್ತು ಹೃದಯ ಸಂಬಂಧಿ ಕಾಯಿಲೆಗಳು ದೂರವಾಗುತ್ತವೆ. ಹಾಗೂ ನಿಮ್ಮ ಹಲ್ಲುಗಳು ಚೆನ್ನಾಗಿರಬೇಕು ಅಂದರೆ ಈ ಪುಡಿಯನ್ನು ಬಳಸಬಹುದು. ಹಾಗೆಯೇ ನಿಮ್ಮ ತುಟಿಗಳು ಏನಾದರೂ ಹೊಡೆದು ಹೋಗಿದ್ದರೆ ಈ ಪುಡಿಯನ್ನ ಬಳಸಿದರೆ ಎಲ್ಲ ಸಮಸ್ಯೆಗಳು ದೂರವಾಗುತ್ತದೆ.
ಮಾವಿನ ಹಣ್ಣಿನ ಒಣಗಿದ ಗೊರಟೆಯನ್ನು ಬಿಡಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಂಡು ಇಟ್ಟುಕೊಂಡು, ಅತಿಸಾರದ ಸಮಸ್ಯೆ ಕಾಣಿಸಿಕೊಂಡಾಗ ಮಾವಿನ ಗೊರಟೆಯ 1 ಚಮಚ ಪುಡಿಯನ್ನು ನೀರಿಗೆ ಹಾಕಿ ಅದಕ್ಕೆ ಅರ್ಧ ಚಮಚ ಜೇನುತುಪ್ಪವನ್ನು ಸೇರಿಸಿ ಸೇವಿಸಿ್ದಾರೆ ಉತ್ತಮ. ಆದರೆ ಇದನ್ನ ನೀವು ನೆನಪಿಡಲೇ ಬೇಕು, ಏನೆಂದರೆ ಗೊರಟೆಯ ಪುಡಿಯನ್ನು 1 ಗ್ರಾಂಗಿಂತ ಹೆಚ್ಚಿನದನ್ನು ಸೇವಿಸಬಾರದು.
ಇನ್ನು ಪ್ರತಿ ದಿನ ಬೆಳಗ್ಗೆ ತಪ್ಪದೆ ಖಾಲಿ ಹೊಟ್ಟೆಗೆ ಮಾವಿನ ಗೊರಟೆಯ ಪುಡಿಯನ್ನು ಒಂದು ಲೋಟ ನೀರಿಗೆ ಹಾಕಿಕೊಂಡು ಸೇವಿಸಿ, ನಂತರ ಒಂದು ಲೋಟ ಬಿಸಿ ನೀರನ್ನು ಸೇವಿಸಿ್ದರೆ ಇದು ನಿಮ್ಮ ದೇಹದಲ್ಲಿರೋ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ