ಕೊಡಗು ಜಿಲ್ಲೆ:
ಅರಣ್ಯ ಪ್ರದೇಶಗಳಲ್ಲಿನ ಗ್ರಾಮಗಳಲಲ್ಲಿ ಆನೆಗಳ ಹಾವಳಿ ಜಾಸ್ತಿಯಾಗಿದ್ದು ಇದರಿಂದ ಮುಕ್ತಿ ಮಕ್ತಿಪಡೆಯಲು ಹೊಸ ಮಾರ್ಗವನನ್ನು ಕಂಡುಕೊಂಡಿದೆ ಅರಣ್ಯ ಇಲಾಖೆ
ಕೊಡಗುಜಿಲ್ಲೆಯ ಶನಿವಾರಸಂತೆ ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಹಿರಿಕರ ಗ್ರಾಮದಲ್ಲಿ ಪದೇ ಪದೇ ಆನೆಗಳು ಮಾನವನ ಮೇಲೆ ದಾಳಿ ಮಾಡಿ ಮನುಷ್ಯರಿಗೆ ಪ್ರಾಣಕ್ಕೆ ಹಾನಿಯುಂಟುಮಾಡುತಿದ್ದವು ಈಗ ಆನೆಗಳ ದಾಳಿಯಿಂದ ಮಾನವನನ್ನು ರಕ್ಷಿಸಲು ಅರಣ್ಯ ಇಲಾಖೆ ಕಾಂಕ್ರಿಟ್ ತಡೆಗೋಡೆಯನ್ನು ನಿರ್ಮಿಸಿದ್ದು ಈ ತಡೆಗೋಡೆ ಯಶಸ್ವಿಯಾಗಿದೆ. ಈ ತಡೆಗೋಡೆಯು ಸುಮಾರು 16 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಿದ್ದು 2.25 ಮೀಟರ್ ಎತ್ತರ ಹಾಗೂ 75 ಮೀಟರ್ ಉದ್ದವಿದೆ. ಒಂದು ತಿಂಗಳಿನ ಹಿಂದೆ ಈ ತಡೆಗೋಡೆಯನ್ನು ನಿರ್ಮಾಣ ಮಾಡಿದ್ದು ಈಲ್ಲಿಯವರೆಗೂ ಯಾವ ಆನೆಯೂ ಕೂಡಾ ಗ್ರಾಮದೊಳಕ್ಕೆ ನನುಸುಳಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ ಅರಣ್ಯ ಈ ಹೊಸ ಪ್ರಯೋಗ ಯಶಸ್ವಿಯಾಗಿದ್ದರ ಪರಿಣಾಮ ಇಲಾಖೆಯ ಅಧಿಕಾರಿಗಳು ಖುಷಿಯನ್ನು ಹಂಚಿಕೊಂಡಿದ್ದಾರೆ.
ಈ ಹಿಂದೆ ಹಲವಾರು ರೀತಿಯಲ್ಲಿ ಆನೆಗಳ ಹಾವಳಿಯನ್ನು ತಪ್ಪಿಸಲು ಅರಣ್ಯ ಇಲಾಖೆ ಸೋಲಾರ್ ಬೇಲಿ, ಟ್ರೆಂಚ್ಗಳನ್ನು ನಿರ್ಮಾಣ ಮಾಡಿದ್ದುಇದು ಕೆಲಸ ಮಾಡದೆ ಸಂಪೂರ್ಣ ವಿಫಲವಾಗಿತ್ತು. ಆದರೆ ಈ ವಿನೂತನ ಪ್ರಯತ್ನ ಯಶಸ್ವಿಯಾಗಿವೆ
ಕೊಡಗಿನ ಕಾಡಂಚಿನ ಪ್ರದೇಶಗಳಲ್ಲಿ ನಿರ್ಮಾಣ ಹಂತದಲ್ಲಿರುವ ತಡೆಗೋಡೆಗಳು ಕಾಣಸಿಗುತಿದ್ದು ನಿರ್ಮಾಣದಲ್ಲಿರುವ ಕಟ್ಟಡಗಳಂತೆ ಬಾಸವಾಗುತ್ತಿವೆ.ಇದರಿಂದಾಗಿ ಗಜರಾಜನ ಜೊತೆಗಿನ ಮನುಷ್ಯನ ಕಾಳಗಕ್ಕೆ ಬ್ರೇಕ್ ಸಿಕ್ಕಿದೆ.
ಕಳ್ಳರಿಂದ ವಶಪಡಿಸಿಕೊಂಡ ವಸ್ತುಗಳನ್ನು ಮಾಲೀಕರಿಗೆ ಹಸ್ತಾಂತರಿಸಿದ ಪೊಲೀಸರು