Kodagu news:
ಮೊಟ್ಟೆ ಮಹಾಯುದ್ಧ ಇದೀಗ ತಾರಕಕ್ಕೇರಿದೆ.ಕೊಡಗು ಇದೀಗ ರಾಜಕೀಯದ ಕೆಂಗಣ್ಣಿಗೆ ಗುರಿಯಾಗಿದೆ.ಆದ್ದರಿಂದ ಅವಮಾನವಾದಲ್ಲೇ ಆರ್ಭಟ ನಡೆಸೋಕೆ ಕಾಂಗ್ರೆಸ್ ಸಜ್ಜಾಗಿದೆ.ಜೊತೆಗೆ ಬಿಜೆಪಿಗರು ಅದಕ್ಕೆ ಕೌಂಟರ್ ಕೊಡಲು ಸಿದ್ಧರಾಗಿ ಪ್ರಚಾರ ಕಾರ್ಯ ನಡೆಸಲು ಕೊಡಗು ಸಮಾವೇಶ ಮಾಡಲು ನಿರ್ಧರಿಸಿದ್ದಾರೆ ಈ ಎಲ್ಲಾ ಕಾರಣದಿಂದ ಶಾಂತಿ ಕಾಪಾಡಲು ಕೊಡಗಿನಲ್ಲಿ ನಿಷೇದಾಜ್ಞೆ ಹೇರಲಾಗಿದೆ.
ಆ.26ರಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಮತ್ತೊಂದು ಕಡೆ ಬಿಜೆಪಿಯಿಂದ ಜನಜಾಗೃತಿ ಸಮಾವೇಶ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಆ.24 ಬೆಳಗ್ಗೆ 6 ಗಂಟೆಯಿಂದ ಆ.27 ಸಂಜೆ 6 ಗಂಟೆ ವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಡಾ. ಸತೀಶ್ ಆದೇಶ ಹೊರಡಿಸಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಯ್ಯಪ್ಪ ಅವರ ಮನವಿಯ ಮೇರೆಗೆ ಜಿಲ್ಲಾಧಿಕಾರಿಗಳು ಈ ಆದೇಶ ಮಾಡಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಬಿಜೆಪಿ ಪಕ್ಷದ ಕಾರ್ಯಕರ್ತರು, ಕಪ್ಪು ಬಾವುಟ ತೋರಿಸಿ, ಘೋಷಣೆ ಕೂಗಿ, ಸಾವರ್ಕರ್ ಚಿತ್ರ ತೋರಿಸಿ, ಮೊಟ್ಟೆಎಸೆದಿರುವ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ವತಿಯಿಂದ ಆ.26ರಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ನಿರ್ಧರಿಸಲಾಗಿದೆ. ಪ್ರತಿಭಟನೆ ಸುಮಾರು ಲಕ್ಷ ಜನರು ಸೇರಿಸುವುದಾಗಿ ತಿಳಿಸಿದ್ದಾರೆ. ಇತರೆ ಜಿಲ್ಲೆಗಳಿಂದ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ತಂಡ ತಂಡವಾಗಿ ಆಗಮಿಸುವ ಮಾಹಿತಿಯಿದೆ.
ಕೈ ಕಮಲದ ಮೊಟ್ಟೆ ಮಹಾಯುದ್ಧದ ಪರಿಣಾಮವಾಗಿ ಮಡಿಕೇರಿ ಚಲೋ ಹಾಗು ಬಿಜೆಪಿಯವರ ಕಾರ್ಯಕ್ರಮದ ನಿಮಿತ್ತ ಶಾಂತಿ ಕಾಪಾಡುವ ಸಲುವಾಗಿ ಈ ನಿರ್ಧಾರ ಮಾಡಲಾಗಿದೆ.
ಮತದಾರ ಪಟ್ಟಿಯ ದತ್ತಾಂಶದೊಂದಿಗೆ ಆಧಾರ್ ಸಂಖ್ಯೆಯ ಜೋಡಣೆಯು ಕಡ್ಡಾಯವಲ್ಲ – ಚುನಾವಣಾ ಆಯೋಗ