ಟಿಪ್ಪು ಸುಲ್ತಾನ್ ಗೆ ಹೆದರದ ಕೊಡಗಿನವರು ಇನ್ನು ಸಿದ್ದು ಸುಲ್ತಾನ್ ಗೆ ಹೆದರುತ್ತಾರಾ…?

Kodagu News:

ಮಡಿಕೇರಿ: ಕೊಡಗಿನ ಕಡೆಗೆ ಸಿದ್ದು ನಡಿಗೆಯ ವಿಚಾರವಾಗಿ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ. ಕೊಡಗಿಗೆ ಟಿಪ್ಪು ಸುಲ್ತಾನ್ ಬಂದಾಗಲೇ ಕೊಡವರು ಹೆದರಲಿಲ್ಲ. ಇನ್ನು ಸಿದ್ದು ಸುಲ್ತಾನ್ ಬಂದರೆ ಹೆದರುತ್ತೀವಾ? ಎಂದು ಮೈಸೂರಿನಲ್ಲಿ ಸಂಸದ ಪ್ರತಾಪಸಿಂಹ ಪ್ರಶ್ನೆ ಮಾಡಿದರು. ಸಿದ್ದರಾಮಯ್ಯ ಮೈಸೂರು, ಮಂಡ್ಯ, ಹಾಸನ‌ ಮಾತ್ರವಲ್ಲ ಪಕ್ಕದ ಕೇರಳದ ನಿಮ್ಮ ಸಾಕು ಮಕ್ಕಳನ್ನು ಕರೆದುಕೊಂಡು ಬನ್ನಿ. ಮಾಂಸ ತಿಂದು ದೇವಸ್ಥಾನಕ್ಕೆ ಬರಬೇಡಿ ಅಂತಾ ದೇವರು ಹೇಳಿದ್ದಾರಾ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಸಂಸದ ಪ್ರತಾಪಸಿಂಹ ತಿರುಗೇಟು ನೀಡಿದ್ದು, ನಿಮ್ಮ ಶ್ರೀಮತಿ ಚಾಮುಂಡೇಶ್ವರಿ ಭಕ್ತೆ ಅವರು ಮಾಂಸ ತಿಂದು ದೇವಸ್ಥಾನಕ್ಕೆ ಬರುತ್ತಾರಾ ಕೇಳಿ. ಅವರು ಆ ರೀತಿ ಹೇಳಿದರೆ ಬಂದು ಸಾರ್ವಜನಿಕವಾಗಿ ಹೇಳಿ. ಆಗ ನಾವು ಒಪ್ಪಿಕೊಳ್ಳುತ್ತೇವೆ. ಹಂದಿ ಮಾಂಸ ಕೂಡ ಒಂದು ಆಹಾರ ಪದ್ಧತಿ. ಹಂದಿ ಮಾಂಸ ತಿನ್ನಬೇಡಿ ಎಂದು ಯಾವ ದೇವರು ಹೇಳಿಲ್ಲ. ಹಂದಿ ಮಾಂಸ ತಿನ್ನಲು ನಿಮ್ಮ ಜಮೀರ್​, ಬೆಂಬಲಿಗರಿಗೆ ಹೇಳಿ. ಅದನ್ನ ಹೇಳುವುದಕ್ಕೆ ನಿಮಗೆ ಧೈರ್ಯ ಇಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.

ಕೊಡಗಿನಲ್ಲಿ ಶಾಂತಿ ಕದಡಿದರೆ ಅದಕ್ಕೆ ಸಿದ್ದರಾಮಯ್ಯ ನೇರ ಹೊಣೆ ಎಂಬುವುದಾಗಿ ಸಿಂಹ ಕಿಡಿ ಕಾರಿದರು. ಸಿದ್ದರಾಮಯ್ಯ ವಿರುದ್ದ ಕೊಡಗಿನ ಜನರಿಗೆ ಆಕ್ರೋಶವಿದೆ. ಸಿದ್ದರಾಮಯ್ಯ ಪದೇ ಪದೇ ಕೊಡಗಿನ ಜನರಿಗೆ ನೋವು ನೀಡಿದ್ದಾರೆ. ಕೊಡವರನ್ನು ಕೊಂದ ಟಿಪ್ಪು ಜಯಂತಿ ಮಾಡಿದ್ದಾರೆ. ಕೊಡಗಿನಲ್ಲಿ ಶಾಂತಿ ಕದಡಿದ್ದು ಸಿದ್ದರಾಮಯ್ಯ. ಈಗ ಮತ್ತೆ ಕೊಡಗಿಗೆ ದಂಡೆತ್ತಿ ಬರುತ್ತಿದ್ದಾರೆ. ಈ ಮೂಲಕ ಕೊಡಗಿನಲ್ಲಿ ಶಾಂತಿ ಕದಡಿದರೆ ಅದಕ್ಕೆ ಸಿದ್ದರಾಮಯ್ಯ ನೇರ ಹೊಣೆ ಎಂದು  ಸಂಸದ ಪ್ರತಾಪಸಿಂಹ ಹೇಳಿಕೆ ನೀಡಿದರು.

 

‘ಸಿದ್ದರಾಮಯ್ಯನವರಿಗೆ ಪಶ್ಚಾತ್ತಾಪವಾಗಿದ್ದರೆ ಸ್ವಾಗತ’-ಬಿಎಸ್‌ವೈ

ಕೊಡಗು: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಆರೋಪಿಯ ಬಂಧನ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ: ಆಗಸ್ಟ್ 25 ರಂದು ಮತದಾರರ ಪಟ್ಟಿಯ ಕರಡು ಪ್ರಕಟ

About The Author