ಹಾಸನ: ಈ ವರ್ಷ ಮಳೆ ಕಂಡಮಂಡಲವಾಗಲಿದೆ. ಮುಂಗಾರು ಮಳೆ ಚೆನ್ನಾಗಿ ಆಗುತ್ತದೆ. ಹಿಂಗಾರು ಮಳೆ ಸ್ವಲ್ಪ ಕಡಿಮೆಯಾಗಲಿದೆ. ಅಶಾಂತಿ ಉಂಟಾಗಲಿದೆ. ಮತೀಯ ಗಲಭೆ ಉಂಟಗಾಲಿದೆ. ದೊಂಬಿ, ಸಾವು-ನೋವುಗಳು, ಕೊಲೆಗಳು ನಡೆಯಲಿವೆ ಎಂಬುದಾಗಿ ಸ್ಪೋಟಕ ಭವಿಷ್ಯವನ್ನು ಕೋಡಿಮಠ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ಇಂದು ವಾರ್ಷಿಕ ಭವಿಷ್ಯ ನುಡಿದಂತ ಅವರು, ವಿಶೇಷವಾಗಿ ಈ ವರ್ಷ ಎಲೆಕ್ಟ್ರಿಕ್ ನಿಂದ ಅಪಾಯವಿದೆ. ಸುಂದರವಾದಂತ ಹೆಣ್ಣುಮಕ್ಕಳ ಅಂಗಾಂಗಗಳನ್ನು ಕಿತ್ತು ತಿನ್ನುವ ಪರಿಸ್ಥಿತಿ ಉಂಟಾಗಲಿದೆ. ರಾಜಕೀಯ ವಿಫಲವಾಗುತ್ತದೆ. ರಾಜಕೀಯದಲ್ಲಿ ಗುಂಪುಗಳಾಗಲಿವೆ. ಬೆಂಕಿಯ ಅನಾಹುತ ಜಾಸ್ತಿಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಗಾಳಿ, ಗುಡುಗು, ಸಿಡಿಲು ವಿಪರೀತ ಉಂಟಾಗಲಿದೆ. ಒಂದು ಇಲ್ಲಿಯವರೆಗೂ ಕಂಡು, ಕೇಳಿರದಂತ ಬಹುದೊಡ್ಡ ಆಘಾತ ಭಾರತದಲ್ಲಿ ಆಗಲಿದೆ. ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳಲಿದ್ದಾರೆ. ಆದಲ್ಲಿ ಆಯ್ತು, ಹೋದಲ್ಲಿ ಹೋಯ್ತು ಎನ್ನುವಂತೆ ಸಾವು-ನೋವುಗಳು ಹೆಚ್ಚಾಗಲಿವೆ ಎಂದರು.
ಮಲೆನಾಡು ಬಯಲು ಸೀಮೆಯಾಗಲಿದೆ. ಬಯಲುಸೀಮೆ ಮಲೆನಾಡು ಆಗಲಿದೆ ಆ ರೀತಿಯಾಗಿ ಮಳೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂಬುದಾಗಿ ಸ್ಪೋಟಕ ಭವಿಷ್ಯ ನುಡಿದರು.

