ರಾಜ್ಯ ರಾಜಕಾರಣದ ಸ್ಫೋಟಕ ಬೆಳವಣಿಗೆಗಳು, ಧರ್ಮಸ್ಥಳದಲ್ಲಿನ ನಿಗೂಢ ಸಾವುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೋಡಿ ಮಠದ ಶ್ರೀಗಳು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. 2 ತಿಂಗಳ ಹಿಂದೆ ಅರಸರ ಅರಮನೆಗೆ ಕಾರ್ಮೋಡ ಕವಿದೀತು ಅಂತಾ, ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯ ನುಡಿದ್ರು. ಅದೀಗ ನಿಜವಾಗಿದೆ. ರಾಜಣ್ಣ ತಲೆದಂಡದಿಂದ ಸಿದ್ದು ಅಕ್ಷರಶಃ ಚಿಂತಿತರಾಗಿದ್ದಾರೆ.
ಇದೇ ವಿಚಾರವಾಗಿ ಗದಗ್‌ನಲ್ಲಿ ಕೋಡಿ ಮಠದ ಶ್ರೀಗಳು, ಮಾತನಾಡಿದ್ದಾರೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಾಯಕರಿಗೆ ಸಂಕಷ್ಟದ ಸೂಚನೆಯಾಗಿದೆ. ಅರಸನ ಅರಮನೆಗೆ ಕಾರ್ಮೋಡ ಕವಿದೀತು. ಕೇಂದ್ರದಲ್ಲಿ ಉಪರಾಷ್ಟ್ರಪತಿಗಳು ರಾಜೀನಾಮೆ ನೀಡಿದ್ರೆ, ಇಲ್ಲಿ ರಾಜಣ್ಣ ಅವರು ರಾಜೀನಾಮೆ ನೀಡಿದ್ದಾರೆ. ನಾವು ಯುಗಾದಿ ಮತ್ತು ಸಂಕ್ರಾಂತಿಯಲ್ಲಿ ಭವಿಷ್ಯ ನುಡಿಯುತ್ತೇವೆ. ಯುಗಾದಿ ಭವಿಷ್ಯದಲ್ಲಿ, ಮಳೆ, ಬೆಳೆ, ಪಾಕೃತಿಕವಾಗಿ, ಜನಜೀವನ ಆರೋಗ್ಯದ ಬಗ್ಗೆ ಹೇಳ್ತೀವಿ. ಸಂಕ್ರಾಂತಿ ಭವಿಷ್ಯದಲ್ಲಿ ರಾಜರದ್ದು, ದೊಡ್ಡ ದೊಡ್ಡ ವ್ಯಾಪಾರಸ್ಥರ ಬಗ್ಗೆ ಹೇಳ್ತೇವೆ.
ಇದು ರಾಜಕೀಯ ಅನಿಶ್ಚಿತತೆಯನ್ನು ಸೂಚಿಸುತ್ತೆ ಎಂದಿದ್ದಾರೆ. ಸಿದ್ದರಾಮಯ್ಯ ಈ ಹಿಂದೆ 5 ವರ್ಷ ಸರ್ಕಾರ ಆಳಿದ್ರು. ಈ ಬಾರಿಯೂ ಸಿಎಂ ಆಗಿದ್ದಾರೆ. ಹೀಗಾಗಿ ಹಾಲು ಕೆಟ್ಟರೂ ಹಾಲಮತ ಕೆಡುವುದಿಲ್ಲ. ಅವರಾಗೇ ಬಿಡಬೇಕೇ ಹೊರತು, ಬಿಡಿಸುವುದು ಕಷ್ಟ. ಈ ಬಾರಿಯೂ ಆಗೇ ಆಗಲಿದೆ. ರಾಜ್ಯ ಮತ್ತು ಕೇಂದ್ರದ ಬಗ್ಗೆ ಸಂಕ್ರಾಂತಿವರೆಗೆ ಕಾದು ನೋಡಬೇಕಿದೆ.
ಧರ್ಮಸ್ಥಳದ ವಿಚಾರವಾಗಿಯೂ ಕೋಡಿ ಮಠದ ಶ್ರೀಗಳು ಮಾತನಾಡಿದ್ದಾರೆ. ಸಮಾಚಾರ, ಪ್ರಚಾರ, ವಿಚಾರ, ಅಪಪ್ರಚಾರ. ಇವುಗಳಲ್ಲಿ ಅಪಪ್ರಚಾರವೇ ಪ್ರಬಲವಾಗಿದೆ. ಅಪಪ್ರಚಾರ ಕೊನೆಗೆ ಬರಬೇಕು. ಆದರೆ ಇದೇ ಮೊದಲಿಗೆ ಬಂದಿದೆ. ಸತ್ಯ ಹೊರಬರಲು ಕಾಲಾವಕಾಶ ಬೇಕು. ಅಳುಕು ಹೃದಯದವನಿಗೆ ಅಪಪ್ರಚಾರವೇ ಆಯುಧವಾಗಿದೆ. ಸತ್ಯವನ್ನು ಒಪ್ಪಿಕೊಳ್ಳಲು ಧೈರ್ಯ ಬೇಕು.
ಒಳ್ಳೆಯ ದೇವರ ಗುಡಿಗಳ ಪೂಜೆ ನಿಂತು ಬಿಡುತ್ತದೆ. ಹಣೆಗೆ ವಿಭೂತಿ ಇಟ್ಟುಕೊಂಡು, ಹಣೆಯನ್ನೇ ಕೆತ್ತಿಕೊಳ್ಳುವವರು ಇದ್ದಾರೆ. ನಾಮವಿಟ್ಟರೇ ಅಳಿಸ್ಯಾರು. ಧರ್ಮಕ್ಕೆ ಅವಮಾನ ಮಾಡುವ ಕಾಲ ಸಮೀಪಿಸುತ್ತಿದೆ. ಆದರೆ, ಧೈರ್ಯದಿಂದ ಎದುರಿಸಿದ್ರೆ, ಧರ್ಮವನ್ನು ಕಾಪಾಡಿಕೊಳ್ಳಬಹುದು. ಹೀಗಂತ ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಪ್ರಪಂಚಕ್ಕೂ ಗಂಡಾಂತರ ಕಾದಿದೆಯಂತೆ. ಭಾರೀ ಮಳೆ, ಭೂಕಂಪ ಸಾಧ್ಯತೆ ಇದೆ. ಯುದ್ಧವೂ ಕೂಡ ಆಗುವ ಲಕ್ಷಣಗಳು ಇವೆ ಅಂತಾ ಹೇಳಿದ್ದಾರೆ.