Thursday, December 4, 2025

Latest Posts

ಧರ್ಮಾಧಿಕಾರಿಗಳ ಬಗ್ಗೆ ಕೋಡಿಶ್ರೀ ಭವಿಷ್ಯ!

- Advertisement -

ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಬಗ್ಗೆ, ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದ್ದಾರೆ. ನಿನಗಾಗಿ ಪಶ್ಚಿಮದಲ್ಲಿ ಸೂರ್ಯ ಮೂಡುತ್ತಾನಾ? ಶಕ್ತಿ ಇದ್ದರೆ ಗೆಲ್ಲು, ಇಲ್ಲದಿದ್ದರೆ ಒದಿಸಿಕೋ ಅಂತಾ ಮಾರ್ಮಿಕ ಮಾತುಗಳನ್ನಾಡಿದ್ದಾರೆ.

ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಕುಟುಂಬದ ವಿರುದ್ಧ ಭಾರೀ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ವೀರೇಂದ್ರ ಹೆಗ್ಗಡೆಯವ್ರು ಕೂಡ ಪ್ರತಿಕ್ರಿಯಿಸಿದ್ದು, ಆರೋಪ ನಿರಾಧಾರ ಅಂತಾ ಹೇಳಿದ್ರು. ಪ್ರತಿ ಬಾರಿಯೂ ರಾಜಕೀಯ, ಪ್ರಕೃತಿ ವಿಕೋಪಗಳ ಬಗ್ಗೆ ಹೇಳ್ತಿದ್ದ ಕೋಡಿ ಮಠದ ಶ್ರೀಗಳು, ಈ ಹಿಂದೆ ಧರ್ಮಸ್ಥಳದ ಬಗ್ಗೆಯೂ ಭವಿಷ್ಯ ನುಡಿದಿದ್ರು.

ಪ್ರಚಾರ, ವಿಚಾರ, ಸಮಾಚಾರ, ಅಪಪ್ರಚಾರ ಹೀಗೆ ಬರಬೇಕಾಗಿತ್ತು. ಆದರೆ, ಅಪಪ್ರಚಾರ ಮೊದಲೇ ಬಂದಿದೆ ಅಂತಾ ಹೇಳಿದ್ರು. ಈಗ ವೀರೇಂದ್ರ ಹೆಗ್ಗಡೆಯವರಿಗೆ ಅನ್ವಯಿಸುವಂತೆ ಭವಿಷ್ಯ ನುಡಿದಿದ್ದಾರೆ.

ಬೆಳಕು ಬಂದ ಮೇಲೆ ಕತ್ತಲು ಹೋಗುತ್ತದೆ ಇದು ವಿಧಿ ನಿಯಮ. ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಒಳ್ಳೊಳ್ಳೆ ಗುಡಿಗಳ ಪೂಜೆಗಳು ನಿಲ್ಲುತ್ತಾ ಬರುತ್ತವೆ ಎಂದು ಕಾಲಜ್ಞಾನದಲ್ಲಿ ಹೇಳಲಾಗಿದೆ. ಎಲ್ಲಿ ನಿಧಿಯಿರುತ್ತೋ ಅಲ್ಲಿ ವಿಧಿಯಾಟವೂ ಜೋರಾಗಿ ಇರುತ್ತದೆ ಅಂತಾ, ಹೇಳಿದ್ದಾರೆ.

ಇನ್ನು, ರಾಜ್ಯ-ಕೇಂದ್ರದಲ್ಲಿನ ರಾಜಕೀಯ ಪರಿಸ್ಥಿತಿಗಳ ಬಗ್ಗೆಯೂ ಕೋಡಿ ಶ್ರೀ ಹೇಳಿದ್ದಾರೆ. ದ್ವೇಷ, ಅಸೂಯೆ, ಮತ್ಸರ ಜಾಗತಿಕವಾಗಿ ತಾಂಡವಾಡುತ್ತದೆ. ಜನ ಸತ್ಯವನ್ನು ಸ್ವೀಕರಿಸುತ್ತಿಲ್ಲ. ಅರಸನ ಅರಮನೆಗೆ ಕಾರ್ಮೋಡ ಕವಿದೀತು ಅಂತಾ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

- Advertisement -

Latest Posts

Don't Miss