ಕರ್ನಾಟಕ ಟಿವಿ : ಇನ್ನು ಮೂರು ತಿಂಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಎದುರಾಗಲಿದೆ ಅಂತ ಕೋಡಿಮಠದ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ನಾನು ಈ ಮೊದಲೇ ಭವಿಷ್ಯ ಹೇಳಿದ್ದೇನೆ ಈ ಬಾರಿಯ ವಿಧಾನಸಭೆ 18 ತಿಂಗಳು ಮಾತ್ರ ಬರುತ್ತೆ. ಈಗಾಗಲೇ 14 ತಿಂಗಳು ಕುಮಾರಸ್ವಾಮಿ ಅಧಿಕಾರ ಅನುಭವಿಸಿದ್ದಾರೆ. ಉಳಿದ ನಾಲ್ಕು ತಿಂಗಳನ್ನ ಯಡಿಯೂರಪ್ಪ ಅನುಭವಿಸುತ್ತಿದ್ದಾರೆ. ಇನ್ನು ಮೂರು ತಿಂಗಳಲ್ಲಿ ಚುನಾವಣೆ ನಡೆಯಲಿದೆ ಅಂತ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಶ್ರೀಗಳು ಹೇಳಿದ್ದು ಸತ್ಯವಾಗುತ್ತಾ..?
ಸದ್ಯದ ಪರಿಸ್ಥಿತಿ ನೋಡ್ತಿದ್ರೆ ಅಮಿತ್ ಶಾ – ಮೋದಿ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಮಾಡಲು ಉತ್ಸುಕರಾಗಿದ್ದಾರೆ. ಸಿದ್ದರಾಮಯ್ಯ, ದೇವೇಗೌಡ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರಲಿದೆ ಅಂತಾನೆ ತಯಾರಿ ಮಾಡಿಕೊಳ್ತಿದ್ದಾರೆ. ಇದೆಲ್ಲಾವನ್ನ ಗಮನಿಸಿದ್ರೆ ಕೋಡಿಮಠದ ಭವಿಷ್ಯ ನಿಜವಾಗುವ ಲಕ್ಷಣ ಗೋಚರಿಸುತ್ತಿದೆ.
ಮೋದಿ ವಿಷಯದಲ್ಲಿ ಸುಳ್ಳಾಗಿತ್ತು ಕೋಡಿಶ್ರೀ ಭವಿಷ್ಯ..!
2014ರಲ್ಲಿ ಎನ್ ಡಿಎ ಅಧಿಕಾರಕ್ಕೆ ಬರೋದು ಡೌಟು, ಬಂದರೂ ಮೋದಿ ಪ್ರಧಾನಿಯಾಗಲ್ಲ ಅಂತ ಕೋಡಿ ಶ್ರೀ ಭವಿಷ್ಯ ಹೇಳಿದ್ರು. ಆದ್ರೆ ಮೋದಿ ಪ್ರಧಾನಿಯಾದ ನಂತರ ನಾನು ಮೊದಲೇ ಹೇಳಿದ್ದೇ ಮೋದಿ ಭಾರೀ ಬಹುಮತದೊಂದಿಗೆ ಪ್ರಧಾನಿಯಾಗ್ತಾರೆ ಅಂತ ಉಲ್ಟಾ ಹೊಡೆದ್ರು.
ಯಸ್ ವೀಕ್ಷಕರೇ ಕೋಡಿ ಶ್ರೀ ಭವಿಷ್ಯದ ಪ್ರಕಾರ ರಾಜ್ಯದಲ್ಲಿ ಶೀಘ್ರವೇ ಮಧ್ಯಂತರ ಚುನಾವಣೆ ಬರುತ್ತಾ..? ಕಾಮೆಂಟ್ ಮಾಡಿ