Kolar News:
ದೈವವಾಣಿಯನ್ನು ನಂಬಿ ಜೀವನ ನಡೆಸುವಂತಿದ್ದರೆ ವಿಜ್ಞಾನ, ತಾಂತ್ರಿಕತೆಯ ಅವಷ್ಯಕತೆ ಏನಿದೆ , ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದ ಉದ್ದಕ್ಕೂ ಯಾವುದೇ ಮೌಡ್ಯತೆಗಳನ್ನು ನಂಬಿದವರು ಅಲ್ಲ , ಅವರು ಒಂದೇ ಮಾತಿನಲ್ಲಿ ಹೇಳಿದ್ದಾರೆ ಕೋಲಾರ ಒಂದೇ ಕ್ಷೇತ್ರದಲ್ಲಿ ಮಾತ್ರ ನಿಲ್ಲುತ್ತೇನೆ ಎಂದು ಬೇರೆ ವಿಚಾರಗಳು ಇಲ್ಲಿ ನಗಣ್ಯ ಎಂದು ಸಿದ್ದರಾಮಯ್ಯ ದೈವ ವಾಣಿ ನುಡಿಯಂತೆ ಎರಡು ಕಡೆ ಚುನಾವಣೆಗೆ ನಿಲ್ಲುವ ವಿಚಾರವಾಗಿ ಎಮ್ ಎಲ್ ಸಿ ಅನಿಲ್ ಕುಮಾರ್ ಹೇಳಿಕೆ ನೀಡಿದ್ದಾರೆ .
ಕೋಲಾರದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅನಿಲ್ ಕುಮಾರ್ ಸಿದ್ದರಾಮಯ್ಯ ಕೋಲಾರದಲ್ಲಿ ಮಾತ್ರ ಸ್ಪರ್ದೆ ಮಾಡುತ್ತಾರೆ ಅವರಿಗೆ ಮೂಡ ನಂಬಿಕೆಗಳಿಗಿಂತ ಕೆಲಸದ ಮೇಲೆ ಹೆಚ್ವು ನಂಬಿಕೆ ಇದೆ ಕೋಲಾರದ ಪಕ್ಷದ ಕಾರ್ಯಕರ್ತರನ್ನು ನಂಬುತ್ತಾರೆ , ಸಿದ್ದರಾಮಯ್ಯ ರವರಿಗೆ ಎಲ್ಲಿ ನಿಲ್ಲಬೇಕು ಎಂಬುದು ಗೊತ್ತಿದೆ ಕಳೆದ ಕೋಲಾರ ಪ್ರವಾಸದ ವೇಳೆಯಲ್ಲಿ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ , ದೇವರು ಪ್ರತ್ಯೇಕವಾಗಿ ಬಂದು ಹೇಳಿದರೆ ನಂಬೋಣ ಅದು ಬಿಟ್ಟು ಯಾರೋ ಏನೋ ಹೇಳಿದರು ಎಂದು ಅದರ ಬಗ್ಗೆ ಚರ್ಚೆ ಮಾಡಿ ಗೊಂದಲ ಮಾಡುವುದು ಸರಿಯಲ್ಲ ಎಂದು ಹೇಳಿಕೆ ನೀಡಿದ್ದಾರೆ .
ಸಿದ್ದರಾಮಯ್ಯ ಎಚ್ಚರಿಕೆಯಿಂದ ಹೆಜ್ಜೆ ಇಟ್ಟರೆ ಒಳ್ಳೆಯದು..!: ಸಚಿವ ಮುನಿರತ್ನಂ ನಾಯ್ಡು
ಕೋಲಾರ: ಜಿಲ್ಲಾ ತೋಟಗಾರಿಕೆ ನರ್ಸರಿಯಲ್ಲಿ ಸಿರಿದಾನ್ಯ ಹಾಗೂ ಫಲಪುಷ್ಪ ಪ್ರದರ್ಶನ