ಕೋಲಾರ : ಜಿಲ್ಲೆಯಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಗರದ ಕ್ಲಾಕ್ ಟವರ್ ನಲ್ಲಿ ಧ್ವಜಾರೋಹಣ ಮಾಡಲಾಯಿತು. ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಂಸದ ಎಸ್. ಮುನಿಸ್ವಾಮಿ ಮತ್ತು ಜಿಲ್ಲಾಧಿಕಾರಿ ಅಕ್ರಂ ಪಾಷಾ ಮತ್ತು ಎಸ್.ಪಿ ನಾರಾಯಣ ಹಾಜರಾಗಿದ್ದರು.
ಕಳೆದ 60 ವರ್ಷಗಳಿಂದ ವಿವಾದದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಕ್ಲಾಕ್ ಟವರ್ ಮೇಲೆ ಇಂದು ಜಿಲ್ಲಾಡಳಿತದ ವತಿಯಿಂದ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸಿ ಸಂಭ್ರಮಿಸಿದರು. ಹಸಿರು ಬಣ್ಣದಿಂದ ಕೂಡಿದ್ದ ಕ್ಲಾಕ್ ಟವರ್ ಅನ್ನು ಸಂಸದ ಎಸ್ ಮುನಿಸ್ವಾಮಿಯವರು ಭಾರತ ಧ್ವಜ ಬಣ್ಣಕ್ಕೆ ತಿರುಗಿಸಿದರು ಸ್ವಾತಂತ್ರ್ಯ ದಿನದಂದು ಎರಡನೇಯ ಬಾರಿ ಕ್ಲಾಕ್ ಟವರ್ ಮೇಲೆ ರಾಷ್ಟ್ರ ದ್ವಜ ಹಾರಿಸಿದರು.
ಇದು ಕ್ಲಾಕ್ ಟವರ್ ಕಳೆದ 60 ವರ್ಷಗಳಿಂದ ವಿವಾದಿತ ಸ್ಥಳವಾಗಿದ್ದರಿಂದ ಯಾವುದೇ ಅಹಿತಕಾರಿ ಘಟನೆ ನಡೆಯಬಾರದು ಎಂಬ ಉದ್ದೇಶದಿಂದ ಸ್ಥಳದಲ್ಲಿ ಜಿಲ್ಲಾಡಳಿತದ ವತಿಯಿಂದ ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
Siddaramaiah: ಬ್ರಿಟಿಷರು ಕೈಗಳಿಗೆ ನಿರುದ್ಯೋಗವನ್ನು, ಹೊಟ್ಟೆಗೆ ಹಸಿವನ್ನು ಬಳುವಳಿಯಾಗಿ ಬಿಟ್ಟು ಹೋಗಿದ್ದಾರೆ..!
Independence Day: ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
Laxmi hebbakar: ಪ್ರವಾಸೋದ್ಯಮ ಹಾಗೂ ಮೀನುಗಾರಿಕಾ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ: