Monday, December 23, 2024

Latest Posts

ಕೋಲಾರ: ಜಿಲ್ಲಾ ತೋಟಗಾರಿಕೆ ನರ್ಸರಿಯಲ್ಲಿ ಸಿರಿದಾನ್ಯ ಹಾಗೂ ಫಲಪುಷ್ಪ ಪ್ರದರ್ಶನ

- Advertisement -

Kolar news:

ನೊಡುಗರ ಕಣ್ಮನ ಸೆಳೆದ ಜಿಲ್ಲಾ ಮಟ್ಟದ ಸಾವಯವ ಸಿರಿದಾನ್ಯ ಮೇಳ ಹಾಗೂ ಫಲಪುಷ್ಪ ಪ್ರದರ್ಶನ, ಹೂ ಮತ್ತು ತರಕಾರಿಗಳಿಂದ ಅಲಂಕರಿಸಿದ ವಿವಿದ ಕಲಾಕೃತಿಗಳು ಹಾಗೂ ರೈತರ ಹಳ್ಳಿಸೊಗಡಿನ ಕಲಾಕೃತಿ ಮಾದರಿಗಳು ಹಳ್ಳಿ ಜೀವನವನ್ನು ಕಣ್ಣಿಗೆ ಕಟ್ಟುವಂತೆ ತೋರಿಸುತ್ತಿವೆ , ಎಲ್ಲಿ ಅಂತಿರಾ ಈ ಸುದ್ದಿ ನೋಡಿ .

ಕೋಲಾರ ಜಿಲ್ಲೆಯ ಜಿಲ್ಲಾ ತೋಟಗಾರಿಕೆ ನರ್ಸರಿಯಲ್ಲಿ ಸಿರಿದಾನ್ಯ ಹಾಗೂ ಫಲಪುಷ್ಪ ಪ್ರದರ್ಶನ ವನ್ನು ಜಿಲ್ಲಾಡಳಿತ, ಜಿಲ್ಲಾಪಂಚಾಯಿತ್ , ಕೃಷಿ ಇಲಾಖೆ , ತೋಟಗಾರಿಕೆ ಇಲಾಖೆ ಹಾಗೂ ಕೃಷಿಕ ಸಮಾಜದ ಸಹಯೋಗದಲ್ಲಿ ಏರ್ಪಡಿಸಲಾಗಿದ್ದು  ತೋಟಗಾರಿಕೆ ಸಚಿವ ಮುನಿರತ್ನ ಹಾಗೂ ಸಂಸದ ಎಸ್ ಮುನಿಸ್ವಾಮಿ ರವರು ಚಾಲನೆ ನೀಡಿದ್ದಾರೆ . ಶನಿವಾರ , ಭಾನುವಾರ ಫಲ ಪುಷ್ಪ ಮೇಳ ಪ್ರದರ್ಶನ ಗೊಳ್ಳಲಿದ್ದು ವಾರಾಂತ್ಯದಲ್ಲಿ ಸಾವಿರಾರು ಪ್ರಕೃತಿ ಪ್ರಿಯರು ಆಹ್ವಾದಿಸಲು ಅವಕಾಶ ನೀಡಲಾಗಿದೆ .

ಕೋಲಾರ ಜಿಲ್ಲಾ ತೋಟಗಾರಿಕಾ ನರ್ಸರಿಯಲ್ಲಿ ಆಯೋಜಿಸಿರುವ ಪಲಪುಷ್ಪ ಪ್ರದರ್ಶನ ದಲ್ಲಿ ಮೊದಲಿಗೆ ಕಾಣುವುದು ಬಣ್ಣದ ಹೂಗಳಿಂದ ಅಲಂಕೃತವಾದ ಬೃಹದಾಕಾರದ ಗಣೇಶನ ಪ್ರತಿಕೃತಿ, ನಂತರ ಕಾಣಸಿಗುವ ಪರಿಸರ ದೈವ ಕಾಂತಾರ ನೋಡುಗರ ಕಣ್ಮನ ಸೂರೆಗೊಳ್ಳುತ್ತಿದ್ದು ನೋಡುಗರ ಆಕರ್ಷಣೆ ಬಿಂದುವಾಗಿದೆ , ಇನ್ನು ಕಸದಿಂದ ಮಾಡಿರುವ ಕಲಾಕೃತಿಗಳು ನೋಡುಗರಿಗೆ ಸ್ಪೂರ್ತಿದಾಯಕ ವಾಗಿದ್ದು ಕಲ್ಲಂಗಡಿ ಹಣ್ಣಿನಿಂದ ಮೂಡಿರುವ ಕವಿಗಳ ಹಾಗೂ ಪುನಿತ್ ರಾಜ್ ಕುಮಾರ್ ಭಾವ ಚಿತ್ರಗಳು ನೋಡುಗರನ್ನು ಅಚ್ಚರಿಗೊಳಿಸುತ್ತಿವೆ ಜೊತೆಗೆ ಹತ್ತಾರು ವಿವಿಧ ಬಗೆಯ ಮೀನುಗಳು ನೋಡುಗರಿಗೆ ಮುದನೀಡುತ್ತಿವೆ . ಹೂವಿನಿಂದ ರಚಿಸಲಾಗಿರುವ ಜಿರಾಫೆ ಮೇಳದ ಕೇಂದ್ರ ಬಿಂದುವಾಗಿದೆ.

ಹೂಗಳಿಂದಲೇ ಅಲಂಕೃತ ಗೊಂಡಿರುವ ವೀಣೆ ಮತ್ತು ಮೃದಂಗ ನೋಡುಗರಿಗೆ ಮತ್ತಷ್ಟು ಆಹ್ಲಾದ ನೀಡುತ್ತಿದ್ದು ಹಳಿ ಸೊಗಡಿನ ಹಳ್ಳಿ ಮನೆಗಳ ಪ್ರತಿಕೃತಿ ಗಳು ಹಾಗೂ ಹಳ್ಳಿ ಜೀವನದ ಕೃಷಿ ಪರಿಕರಗಳು ಗ್ರಾಮೀಣ ರೈತರ ಸೊಗಡನ್ನು ಪರಿಚಯಿಸುವಂತಿದೆ , ಇನ್ನು ವಿವಿಧ ಬಗೆಯ ಔಷಧಿ ಗಿಡ ಮರಗಳು ಸೇರಿದಂತ  ಕಾಡಿನ ಮರಗಳ ಪರಿಚಯ ಮಕ್ಕಳಿಗೆ ಉಪಯೋಗವಾಗಲಿದೆ, ಇನ್ನು ಸಿರಿದಾನ್ಯ ಸೇರಿದಂತೆ ವಿವಿಧ ಬಗೆಯ ಮಳಿಗೆಗಳು ಸಹ ಮೇಳದಲ್ಲಿ ಇದ್ದು ಮುದ್ದಾದ ಜೋಡೆತ್ತುಗಳನ್ನು ಸಹ ಮೇಳದಲ್ಲಿ ನೋಡಬಹುದಾಗಿದೆ .

ಭಯಾನಕ ಭವಿಷ್ಯ ನುಡಿದ ಕೋಡಿ ಮಠದ ಶ್ರೀಗಳು..?!

“ಕಾಂಗ್ರೆಸ್ ಸುಳ್ಳು ಹೇಳುತ್ತಿದೆ”:ಸುನೀಲ್ ಕುಮಾರ್

ಸಿಎಂ ಮನೆ ಮುಂದೆ ಪಂಚಮಸಾಲಿಗಳ ಪ್ರತಿಭಟನೆ..!

- Advertisement -

Latest Posts

Don't Miss