kolar News:
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕರಿಪಲ್ಲಿ ಗ್ರಾಮದ ಸರ್ಕಾರಿ ಶಾಲಾ ಕಟ್ಟಡ ಕಳಪೆ ಆರೋಪ ಕೇಳಿ ಬಂದಿದೆ. ಕೇವಲ 4 ತಿಂಗಳ ಹಿಂದೆಯಷ್ಟೇ ನಿರ್ಮಾಣವಾಗಿದ್ದ ಹೊಸ ಕೊಠಡಿ ಇದಾಗಿದೆ. ಈಗ ಈ ಶಾಲಾ ಕಟ್ಟಡ ಬಿರುಕು ಬಿಟ್ಟಿದೆ. ಕೊಠಡಿ ಮೇಲ್ಚಾವಣಿಯಲ್ಲಿ ಸಿಮೆಂಟ್ ಕಿತ್ತು ಬರುತ್ತಿದೆ. ಮಳೆ ಬಂದರೆ ಸಂಪೂರ್ಣ ವಾಗಿ ಕಟ್ಟಡ ಸೋರುವುದು ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಜಿಲ್ಲಾ ಪಂಚಾಯತಿ ವತಿಯಿಂದ 10.60 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶಾಲೆ ಕಟ್ಟಡ ಇದಾಗಿದೆ. ಇದೀಗ ಕಟ್ಟಡದ ಕಳಪೆ ಕಾಮಗಾರಿಯಿಂದ ತೊಂದರೆ ಅನುಭವಿಸುತ್ತಿರುವ ಗ್ರಾಮಸ್ಥರು ಹಾಗು ಮಕ್ಕಳು ಗುತ್ತಿಗೆದಾರರು ಹಾಗು ಇಂಜಿನಿಯರ್ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನೇನ್ ರೇಪ್ ಮಾಡಿದ್ನಾ ಎಂದು ಅರವಿಂದ ಲಿಂಬಾವಳಿ ಉದ್ಧಟತನ: ಇದು ಬಿಜೆಪಿ ಸಂಸ್ಕೃತಿಗೆ ಹಿಡಿದ ಕನ್ನಡಿ ಎಂದ ಕಾಂಗ್ರೆಸ್
ಆ.31ರವರೆಗೆ ವಿದ್ಯಾರ್ಥಿಗಳಿಗೆ KSRTC ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ