ಕೋಲಾರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಇಂದು ಕೋಲಾರ ನಗರ ಬಂದ್ ಗೆ ಕರೆ ನೀಡಿವೆ. ನಗರದ ಹಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಬಂದ್ ಮಾಡಲಾಗುತ್ತಿದೆ. ರಸ್ತೆ, ಬೀದಿ ದೀಪ, ಕಸ ವಿಲೇವಾರಿ, ಬೀದಿನಾಯಿ ಹಾವಳಿ ಸೇರಿ ಹಲವು ಸಮಸ್ಯೆಗಳಿಗೆ ಜಿಲ್ಲಾಡಳಿತ, ಸರ್ಕಾರ ಸ್ಪಂದಿಸದ ಹಿನ್ನೆಲೆ ಬಂದ್ ಮಾಡಿ, ಇದಕ್ಕೆ ಬೆಂಬಲಿಸುವಂತೆ ಆಗ್ರಹಿಸಿ ಬೈಕ್ ರ‍್ಯಾಲಿಯನ್ನು ನಡೆಸಲಾಗುತ್ತದೆ.
ಚರ್ಮಗಂಟು ರೋಗಕ್ಕೆ ಸೂಕ್ತ ಚಿಕಿತ್ಸೆ ಒದಗಿಸಿ: ಕೆ.ಗೋಪಾಲಯ್ಯ
ನಗರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಂದೋಬಸ್ತ್ ಮಾಡಲಾಗಿದ್ದು, ಬಲವಂತವಾಗಿ ಬಂದ್ ಮಾಡದಂತೆ ಎಸ್ ಪಿ ದೇವರಾಜ್ ಸಂಘಟನೆಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನು ಶಾಲಾ, ಕಾಲೇಜುಗಳಿಗೆ ರಜೆಯನ್ನು ನೀಡಿಲ್ಲ, ವಿವಿಧ ಸಂಘಟನೆಗಳ ಹೋರಾಟಗಾರರು ರಸ್ತೆಗಿಳಿದು ಬಸ್ ನಿಲ್ದಾಣದ ಬಳಿ ಪ್ರತಿಭಟನೆ ಮಾಡುತ್ತಿದ್ದಾರೆ.
ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯಶಿಕ್ಷಕನ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚನೆ : ಸಚಿವ ಕೆ. ಗೋಪಾಲಯ್ಯ