ಪ್ರಚೋದನಾ ಕಾರಿ ಹೇಳಿಕೆ ನೀಡಿದವರ ವಿರುದ್ದ ಸರ್ಕಾರ ಕ್ರಮ ಕೈಗೊಳ್ಳಲಿ: ಛಲವಾದಿ ನಾರಾಯಣ ಸ್ವಾಮಿ

ಶಿವಮೊಗ್ಗದಲ್ಲಿ  ಆಗುತ್ತಿರುವ  ಫ್ಲೆಕ್ಸ್ ಫೈಟ್ ಬಗ್ಗೆ ಪ್ರತಿಕ್ರಿಯಿಸಿದ ಛಲವಾದಿ ನಾರಾಯಣ್ ಸ್ವಾಮಿ ಯಾರು  ಪ್ರಚೋದನಾಕಾರಿ ಹೇಳಿಕೆ ಯಾರು ನೀಡುತ್ತಾರೋ ಅವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸರಕಾರಕ್ಕೆ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಕಿಡಿಗೇಡಿಗಳು ಜನರನ್ನ ಎತ್ತಿಕಟ್ಟಿ ಗೊಂದಲ ಸೃಷ್ಟಿಸಲು ಹೊರಟಿದ್ದಾರೆ. 60 ವರ್ಷಗಳಿಂದ ನೆಹರು   ಬಗ್ಗೆ ಜನರಿಗೆ ವಾಂತಿ ಬರುವಷ್ಟು ಕಾಂಗ್ರೆಸ್ ಪ್ರಚಾರ ಮಾಡಿದೆ. ನೆಹರು ಒಬ್ಬರೇ ಸ್ವಾತಂತ್ರ್ಯ ಹೋರಾಟ ಮಾಡಿಲ್ಲ, ಉಳಿದವರನ್ನ ಕಾಂಗ್ರೆಸ್ ನಿರ್ಲಕ್ಷ್ಯ ಮಾಡಿದೆ. ಕತ್ತಲೆಯಲ್ಲಿದ್ದವರನ್ನ ಬಿಜೆಪಿ ಸರ್ಕಾರ ಗುರ್ತಿಸಿದೆ, ನೆಹರು ಪೋಟೊ ಇದ್ದರು ವಿನಾಕಾರಣ ಆರೋಪ ಮಾಡಲಾಗಿದೆ. ಬೇಕಂತಲೇ ಸಾವರ್ಕರ್ ಚರಿತ್ರೆಯನ್ನು ಮುಚ್ಚಿಹಾಕಿದ್ದಾರೆ, ನೆಹರು ಇಷ್ಟಪಡುವರಿಗೆ ಬೇಸರ ಆಗಿದೆ ಅಷ್ಟೆ ಎಂಬುವುದಾಗಿ ಕೋಲಾರದ ಸಾಯಿಧಾಮ್ ಹೊಟೆಲ್ ನಲ್ಲಿ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ನೀಡಿದ್ದಾರೆ.

ಹಿಂದೂಗಳನ್ನು ರಕ್ಷಣೆ ಮಾಡಲಾಗದಿದ್ದರೆ ರಿಸೈನ್ ಮಾಡಿ ಮನೆಗೆ ಹೋಗಿ: ಪ್ರಮೋದ್ ಮುತಾಲಿಕ್

ಈ ಕಿತ್ತಾಟ ನಿಲ್ಲಿಸಲಾಗದೆ ಕೈಲಾಡುವ ಗೊಂಬೆಯಂತೆ ‘ಮ್ಯಾನೇಜ್’ ಮಾಡುತ್ತಿದ್ದಾರೆ ಸಿಎಂ – ಕಾಂಗ್ರೆಸ್

ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆಗೆ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ – ಸಿಎಂ ಬಸವರಾಜ ಬೊಮ್ಮಾಯಿ

About The Author