- Advertisement -
Kolara news:
ಕೋಲಾರ: ಇಂದು ಶ್ರಾವಣ ಮಾಸದ 4 ನೇ ಶನಿವಾರ ಹಿನ್ನಲೆ, ಕೋಲಾರ ಜಿಲ್ಲೆಯ ಮಾಲೂರಿನ ಚಿಕ್ಕ ತಿರುಪತಿ ಕ್ಷೇತ್ರಕ್ಕೆ ಭಕ್ತಸಾಗರವೇ ಹರಿದುಬಂದಿದೆ, ಚಿಕ್ಕತಿರುಪತಿ ಗ್ರಾಮದ ಪ್ರಸನ್ನ ವೆಂಕಟೇಶ್ವರ ದೇಗುಲ ಚಿಕ್ಕ ತಿರುಪತಿ ಕ್ಷೇತ್ರ ಎಂದು ಹೆಸರುವಾಸಿಯಾಗಿದ್ದು, ಇಂದು ಬೆಳಗ್ಗೆಯಿಂದಲೇ ತಿಮ್ಮಪ್ಪನ ದರ್ಶನಕ್ಕೆ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಕಾದು ನಿಂತಿದ್ದರು, ಭಕ್ತರ ಅನುಕೂಲಕ್ಕಾಗಿ 100 ರೂ ವಿಶೇಷ ಟಿಕೆಟ್ ದರ್ಶನದ ವ್ಯವಸ್ತೆಯು ಮಾಡಲಾಗಿತ್ತು, ನಾಲ್ಕನೇ ಶನಿವಾರ ಪ್ರಯುಕ್ತ ವಿಶೇಷ ಹೂವಿನ ಅಲಂಕಾರ ಭಕ್ತರ ಕಣ್ಮನ ಸೆಳೆಯಿತು, ದೇವರ ದರ್ಶನಕ್ಕಾಗಿ ಬೆಂಗಳೂರು, ಕೋಲಾರ, ತಮಿಳುನಾಡು ಭಾಗದಿಂದ ಭಕ್ತರು ಆಗಮಿಸಿದ್ದು, ಭಕ್ತರ ಅನುಕೂಲಕ್ಕಾಗಿ ಸಮಾಜಸೇವಕ ಹೂಡಿ ವಿಜಯ್ ಕುಮಾರ್, ನೀರು ಹಾಗು ಹಾಲಿನ ವ್ಯವಸ್ತೆ ಮಾಡಿದ್ದರು. ಹಾಲು ಮತ್ತು ನೀರಿನ ಅನುಕೂಲ ಮಾಡಿದ್ದಕ್ಕೆ ಭಕ್ತರು ಧನ್ಯವಾದ ತಿಳಿಸಿದ್ದಾರೆ.
- Advertisement -