ಕೋಲಾರ : ಪ್ರೊಫೆಸರ್ ಭಗವಾನ್ ಅವರು ಒಕ್ಕಲಿಗ ಸಮುದಾಯದ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ್ದುಈಗ ಈ ಸಮುದಾಯ ಭಗವಾನ್ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಕೋಲಾರದ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ಮಾಡಿ ಭಗವಾನ್ ಅವರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿದರು.
ಭಗವಾನ್ ಅವರು ಹಲವಾರು ಬಾರಿ ಜಾತಿ ಬಗ್ಗೆ ಹೇಳಿಕೆ ನೀಡಿದ್ದಾರೆ. ಆದರೆ ಯಾರು ಸಹ ಇದುವರೆಗೂ ಗಂಭೀರವಾಗಿ ಪರಿಗಣಿಸಿರಲಿಲ್ಲ ಆದರೆ ಈಗ ಒಕ್ಕಲಿಗ ಸಮುದಾಯದ ವಿರುದ್ದ ಹೇಳಿಕೆ ನೀಡಿದ್ದು ಕೋಲಾರದಲ್ಲಿ ಸಮುದಾಯದವರು ಪ್ರತಿಭಟನೆ ಕೈಗೊಂಡರು. ಒಕ್ಕಲಿಗ ಸಮುದಾಯವನ್ನು ಸಂಸ್ಕೃತಿಹೀನರು ಎಂದು ಕರೆದಿರುವ ಭಗವಾನ್ ವಿರುದ್ದ ಕಿಡಿಕಾರಿರುವ ಒಕ್ಕಲಿಗರು ಧಾರ್ಮಿಕ ಭಾವನೆಗಳನ್ನು ಕದಡಿದ ಭಗವಾನ್ ರನ್ನು ಕೂಡಲೇ ಬಂದಿಸುವಂತೆ ಆಗ್ರಹಿಸಿದರು.
ನಗರದ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ಮಾಡಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ನಂತರ ಕೋಲಾರದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿಗೆ ತೆರಳಿ ದೂರು ಸಲ್ಲಿಸಿ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಆಗ್ರಹಿಸಿದರು.
ರಜಾಕ್ ಕವಲಗೇರಿ ಹತ್ಯೆ ಪ್ರಕರಣ ನಾಲ್ವರನ್ನು ಬಂಧಿಸಿದ ಶಹರ ಠಾಣೆ ಪೊಲೀಸರು
Siddaramaiah : ಏನಿದು ದಸರಾ ರಜೆ ವಿವಾದ? ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶಿಕ್ಷಕರು ಬರೆದ ಪತ್ರದಲ್ಲಿ ಏನಿದೆ?
BJP Protest; ಚಿತ್ರದುರ್ಗದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರ ಬೃಹತ್ ಪ್ರತಿಭಟನೆ..!