Tuesday, October 14, 2025

Latest Posts

Kolkata Doctor Rape-Murder: ಅಪರಾಧಿ ನಾನಲ್ಲ.. ನನಗೇನೂ ಗೊತ್ತಿಲ್ಲ..: ಕೋಲ್ಕತ್ತಾ ಕೀಚಕ ಸಂಜಯ್ ಹೊಸ ಹೈಡ್ರಾಮಾ!

- Advertisement -

ಕೋಲ್ಕತ್ತಾ: ಆರ್.ಜಿ ಕಾರ್ ಆಸ್ಪತ್ರೆ (RG Kar Medical College and Hospital)ಯಲ್ಲಿ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ. ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾಗಿ ಸಿಸಿಬಿ ಅಧಿಕಾರಿಗಳ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದ ಆರೋಪಿ ಸಂಜಯ್ ರಾಯ್ (Accused Sanjay Roy) ಇದೀಗ ಹೊಸ ವರಸೆ ಶುರು ಮಾಡಿಕೊಂಡಿದ್ದಾನೆ. ನಾನು ನಿರಪರಾಧಿ.. ನಾನು ಯಾವುದೇ ಅತ್ಯಾಚಾರ, ಕೊಲೆ ಮಾಡಿಲ್ಲ ಎಂದು ಪಾಲಿಗ್ರಾಫ್ ಪರೀಕ್ಷೆ (Polygraph Test) ವೇಳೆ ಆರೋಪಿ ಯೂಟರ್ನ್ ಹೊಡೆದಿದ್ದಾನೆ.

ಕೋಲ್ಕತ್ತಾದ ಪ್ರೆಸಿಡೆನ್ಸಿ ಜೈಲಿನಲ್ಲಿ ಸಿಬಿಐ ಅಧಿಕಾರಿಗಳು ಆರೋಪಿ ಸಂಜಯ್ ರಾಯ್ ಪಾಲಿಗ್ರಾಫ್ ಪರೀಕ್ಷೆಯನ್ನು ನಡೆಸಿದ್ದರು. ಸುಳ್ಳು ಪತ್ತೆ ಪರೀಕ್ಷೆ ವೇಳೆ ಕೀಚಕ ಸಂಜಯ್ ಆತಂಕಗೊಂಡಿದ್ದ. ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ನನಗೇನೂ. ನಾನು ನಿರಪರಾಧಿ. ನಾನು ಸೆಮಿನಾರ್ ಹಾಲ್​ಗೆ ಹೋಗುವ ಮೊದಲೇ ಆಕೆ ಸಾವನ್ನಪ್ಪಿದ್ದಳು ಎಂದು ಸಾಬೀತುಪಡಿಸಲು ಪಾಲಿಗ್ರಾಫ್ ಪರೀಕ್ಷೆಗೆ ಒಪ್ಪಿಕೊಂಡೆ ಎಂದು ಆರೋಪಿ ಹೇಳಿದ್ದಾನೆ.

 

ಪಾಲಿಗ್ರಾಫ್ ಟೆಸ್ಟ್​ ವೇಳೆ ಸಿಬಿಐ ಅಧಿಕಾರಿಗಳು ಹಲವು ಸಾಕ್ಷ್ಯಗಳನ್ನು ಮುಂದಿಟ್ಟರೂ ಸಹ ಸಂಜಯ್ ರಾಯ್​ ಪದೇ ಪದೇ ನಾನು ನಿರಪರಾಧಿ ಎಂದು ಹೇಳಿದ್ದಾನೆ. ತನಿಖಾಧಿಕಾರಿಗಳನ್ನು ದಾರಿ ತಪ್ಪಿಸುತ್ತಿರುವ ಆರೋಪಿಯು, ಆತನ ಮುಖದ ಮೇಲಿನ ಗಾಯಗಳು ಹಾಗೂ ಅಪರಾಧ ನಡೆದ ಸಮಯದಲ್ಲಿ ಆತ ಸ್ಥಳದಲ್ಲಿದ್ದ ಬಗ್ಗೆ ಸಂಜಯ್​ ರಾಯ್​ ಯಾವುದೇ ತೃಪ್ತಿಕರ ಉತ್ತರವನ್ನು ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವ ಆರೋಪಿ ಸಂಜಯ್ ರಾಯ್ ಇದೀಗ ಏಕಾಏಕಿ ಯೂಟರ್ನ್​ ಹೊಡೆದಿದ್ದು, ಆತನ ಮಾನಸಿಕ ಸ್ಥಿತಿ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ.

 

ಆಗಸ್ಟ್ 9ರಂದು ಕೋಲ್ಕತ್ತಾದ ಆರ್‌.ಜಿ ಕಾರ್ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಸ್ನಾತಕೋತ್ತರ ಮಹಿಳಾ ಟ್ರೈನಿ ವೈದ್ಯರೊಬ್ಬರು ಶವವಾಗಿ ಪತ್ತೆಯಾಗಿದ್ದರು. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಮಹಿಳಾ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದಿರುವುದು ದೃಢಪಟ್ಟಿತ್ತು. ಆಕೆಯ ಮೃತದೇಹದ ಬಳಿ ಆರೋಪಿ ಸಂಜಯ್ ರಾಯ್​ ಬ್ಲೂಟೂತ್ ಕೂಡ​ ಪತ್ತೆಯಾಗಿತ್ತು.

- Advertisement -

Latest Posts

Don't Miss