- Advertisement -
ಕೊಪ್ಪಳ: ತಾಲ್ಲೂಕಿನ ದನಕನಕೊಡ್ಡಿ, ಕೂಕನಪಳ್ಳಿ, ಕಾಮನೂರು, ಕೆರಳ್ಳಿ, ಗ್ರಾಮಗಳಲ್ಲಿ ಹೆಚ್ಚು ಜಾನುವಾರಗಳು ಮೃತಪಟ್ಟಿದ್ದು, ಕಳೆದ 15 ದಿನಗಳಿಂದ 50ಕ್ಕೂ ಹೆಚ್ಚು ಜಾನುವಾರಗಳು ತಿರುಗಿತಿರುಗಿ ಸಾಯುತ್ತಿವೆ. ಜಾನುವಾರಗಳಿಗೆ ವಿಚಿತ್ರ ಕಾಯಿಲೆಯೊಂದು ಕಾಡುತ್ತಿದ್ದು, ಕಾಯಿಲೆ ಹೆಸರು, ಚಿಕಿತ್ಸಾ ವಿಧಾನದ ಬಗ್ಗೆ ಮಾಹಿತಿ ಸಿಗದೆ ರೈತರು ಕಂಗಾಲಾಗಿದ್ದಾರೆ.
ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ರೈತ
ಕೊಪ್ಪಳದ ಜಿಲ್ಲಾಡಳಿತ ಭವನದ ಮುಂದೆ ಕೆಲಕಾಲ ರೈತರು ಪ್ರತಿಭಟನೆ ನಡೆಸಿ ಜಾನುವಾರಗಳು ವಿಚಿತ್ರ ಕಾಯಿಲೆಯಿಂದ ಸಾವನ್ನಪ್ಪುತ್ತಿವೆ ಎಂದು ಮಾಹಿತಿ ನೀಡಿದ್ದಾರೆ. ಜಾನುವಾರಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಮಾಹಿತಿ ನೀಡಿದರೂ ಚಿಕಿತ್ಸೆ ನೀಡಲು ಪಶುವೈದ್ಯರು ಗ್ರಾಮಗಳಿಗೆ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
- Advertisement -