ಕೊಪ್ಪಳ: ಜಿಲ್ಲೆಯಲ್ಲಿಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಕಾರ್ಯಕ್ರಮ ನಡೆಯುತ್ತಿದ್ದು, ಪಕ್ಷದ ಹೊಸ ಕಾರ್ಯಲಯದ ಕಟ್ಟಡವನ್ನು ಉದ್ಘಾಟಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆಗಮಿಸಲಿದ್ದಾರೆ. ವಿಜಯಪುರ, ರಾಯಚೂರು, ಬಳ್ಳಾರಿ, ಬಾಗಲಕೋಟೆ, ಚಾಮರಾಜನಗರ, ಕೋಲಾರ, ಹಾವೇರಿ, ಮತ್ತು ಗದಗ, ಜಿಲ್ಲೆಗಳಲ್ಲಿ ನಿರ್ಮಾಣಗೊಂಡ ಪಕ್ಷದ ಕಚೇರಿಯ ಕಟ್ಟಡಗಳನ್ನು ವರ್ಚುವಲ್ ಮೂಲಕ ಉದ್ಘಾಟನೆ ಮಾಡಲಿದ್ದಾರೆ. ನಂತರ ನಗರದಲ್ಲಿ ಆಯೋಜನೆಯಾಗಿರುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಹೈದರಾಬಾದ್ ಗೆ ತೆರಳಲಿದ್ದಾರೆ.
ನಾಳೆ ನಡೆಯುವ ಜೆಪಿ ನಡ್ಡಾ ಕಾರ್ಯಕ್ರಮಕ್ಕೆ ಬಿಎಸ್ ವೈಗೆ ಅಧಿಕೃತ ಆಹ್ವಾನವಿಲ್ಲ
ಇನ್ನು ನಡ್ಡಾ ಅವರು ಆಗಮಿಸುತ್ತಿರುವ ಹಿನ್ನೆಲೆ, ವೇದಿಕೆಯಲ್ಲಿ ಬಾಂಬ್ ನಿಷ್ಕ್ರೀಯ ದಳ, ಶ್ವಾನದಳದಿಂದ ಪರಿಶೀಲನೆ ನಡೆಸಲಾಗುತ್ತಿದೆ. ಸಮಾವೇಶ ನಡೆಯುವ ತಾಲೂಕು ಕ್ರೀಡಾಂಗಣದ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಕೊಪ್ಪಳ ಎಸ್.ಪಿ. ಅರುಣಾಂಶುಗಿರಿ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಮಾಡಲಾಗಿದೆ. ಮೂವರು ಡಿವೈಎಸ್ ಪಿ ಸೇರಿ 600 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಮಕ್ಕಳಿಗೆ ಹಬ್ಬದ ದಿನ, ವಿಶೇಷ ಸಂದರ್ಭದಲ್ಲಿ ವಿಶೇಷ ಭೋಜನ : ಶಿಕ್ಷಣ ಇಲಾಖೆ ಸುತ್ತೋಲೆ




