Monday, December 23, 2024

Latest Posts

ಕೊವಿಡ್ ಸೋಂಕು, ವಾರದಲ್ಲಿ 2,623 ಪ್ರಕರಣ!

- Advertisement -

ಬೆಂಗಳೂರು: ನಗರದಲ್ಲಿ ಒಂದು ವಾರದಲ್ಲಿ 2,623 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 3,496 ಕ್ಕೆ ಏರಿಕೆಯಾಗಿದೆ.

ದೈನಂದಿನ ಸೋಂಕಿತರ ಸಂಖ್ಯೆ ಏಪ್ರಿಲ್, ಮೇ ತಿಂಗಳಲ್ಲಿ 50ರ ಆಸು ಪಾಸಿನಲ್ಲಿತ್ತು. ಈ ತಿಂಗಳ ಹೊಸ ಪ್ರಕರಣಗಳ ಸಂಖ್ಯೆ ಮತ್ತೆ ಏರುಗತಿ ಪಡೆದಿದೆ. ವಾರದಲ್ಲಿ 1,455 ಮಂದಿ ಚೇತರಿಸಿಕೊಂಡಿದ್ದು, ಮರಣ ಪ್ರಕರಣ ಹೊಸದಾಗಿ ವರದಿಯಾಗಿಲ್ಲ. ಸೋಂಕು ದೃಢಪ್ರಮಾಣ ಶೇಕಡಾ 2.15ರಷ್ಟಿದೆ. ಕೋವಿಡ್ ಪೀಡಿತರ ಸಂಖ್ಯೆ 17.91 ಲಕ್ಷ ದಾಟಿದೆ. ಅವರಲ್ಲಿ 17.71 ಲಕ್ಷಕ್ಕೂ ಅಧಿಕ ಮಂದಿ ಚೇತರಿಸಿಕೊಂಡಿದ್ದಾರೆ.

ಭಾನುವಾರ 11 ಜಿಲ್ಲೆಗಳಲ್ಲಿ ಪ್ರಕರಣ ಪತ್ತೆಯಾಗಿದ್ದು, 464 ಮಂದಿ ಸೋಂಕಿತರಾಗಿದ್ದಾರೆ. ಬೆಂಗಳೂರಿನಲ್ಲಿ 429 ಪ್ರಕರಣಗಳು ವರದಿಯಾಗಿದೆ.

 

 

- Advertisement -

Latest Posts

Don't Miss