ಬೆಂಗಳೂರು: ನಾನು ಆ ಸಚಿವರ ಬಗ್ಗೆ ಮಾತನಾಡ್ತೀನಿ ಅಂತ ನನಗೂ ಕಾಲ್ ಬರುತ್ತಿವೆ. ಅಣ್ಣ ಅವರ ಬಗ್ಗೆ ಮಾತನಾಡಬೇಡಿ ಅವರು ಈ ಬಾರಿ ಸಿಎಂ ಆಗಿ ಬಿಡ್ತಾರೆ ಅವರ ಬಗ್ಗೆ ಮಾತನಾಡಿ ತೊಂದರೆ ಮಾಡಬೇಡಿ ಅಂತ ಯಾರ್ಯಾರೋ ಕಾಲ್ ಮಾಡಿದ್ದರು. ಮಂಡ್ಯದಿಂದ ಒಬ್ಬರು ಅಧ್ಯಕ್ಷರು ಕಾಲ್ ಮಾಡಿದ್ದರು, ಅವರು ಸಿಎಂ ರೇಸ್ ನಲ್ಲಿ ಇದ್ದಾರೆ ಸಿಎಂ ಆಗ್ಬಿಡ್ತಾರೆ ಅಣ್ಣ ಅಂತ ಹೇಳಿದರು. ಮಧ್ಯಮಗಳಲ್ಲಿ ಬರುತ್ತಿದೆ ನೀವ್ಯಾಕೆ ಹೆಸರು ಹೇಳೋಕೆ ಹೋಗ್ತಿರಾ..?ರಕ್ಷಣೆ ಮಾಡಿ ಅಂದ್ರು ಎಂಬುದಾಗಿ ಹೊಸ ಬಾಂಬ್ ಅನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಿಡಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ಮಾತನಾಡಿದಕ್ಕೆ ಸಿಎಂ ಏನ್ ಹೇಳಿದ್ರು? ನಾನು ಕಠಿಣ ಆಡಳಿತ ಮಾಡಿದ್ರೆ ಶಿವಕುಮಾರ್ ಗೆ ಉಸಿರೇ ನಿಂತೋಗ್ತದೆ ಅಂದ್ರು, ನಮಗೆ ಭಯ ಆಗ್ತಾ ಇದೆ, ಇನ್ನೊಬ್ಬ ಮಂತ್ರಿ ನಾವು ಗಂಡಸರಲ್ಲ ಅಂತಾರೆ, ನಾವು ಗಂಡಸರಲ್ಲ, ಅವರೊಬ್ಬರೇ ಗಂಡಸರು. ಪಿಎಸ್ಐ ಅಕ್ರಮದಲ್ಲಿ ಭಾಗಿಯಾಗಿರೋದು ಆ ಮಂತ್ರಿಯ ತಮ್ಮ ಅಂತ ನಾನು ಹೇಳಲ್ಲ, ನಮಗೆ ಮಾಹಿತಿ ಇರೋ ಪ್ರಕಾರ ಮಾಗಡಿಯ ಅಭ್ಯರ್ಥಿಗಳು ಅವರು, ಕೆಲವರಿಗೆ ಸಮಸ್ಯೆ ಆಗಿದೆ, ಅದರಲ್ಲಿ ಒಬ್ಬರ ತಂದೆಗೆ ಪ್ಯಾರಾಲಿಸಿಸ್ ಆಗಿದೆ ಎಂದರು.
ಈ ವಿಚಾರ ತನಿಖೆಗೆ ಬಂದಾಗ ಮಂತ್ರಿಗಳೇ ಫೋನ್ ಮಾಡಿ ನಿಲ್ಲಿಸಿದ್ದಾರೆ ಅಂತಾ ಮಾಹಿತಿ ಇದೆ. ತನಿಖೆ ಪೂರ್ತಿ ಆಗದೇ ಪರೀಕ್ಷೆ ನಿಲ್ಲಿಸಿದ್ದಾರೆ, ಸಂಪೂರ್ಣ ಪ್ರಕರಣ ಲಿಟಿಗೇಷನ್ ಅತ್ತ ಸಾಗಿದೆ, ಹೀಗಾಗಿ ಪರೀಕ್ಷೆ ನಿಲ್ಲಿಸಿದ್ದಾರೆ. ಡಿ ಜಿ ಹಾಗೂ ಗೃಹ ಸಚಿವರು ಬೇರೆ ಬೇರೆ ಮಾಹಿತಿ ನೀಡಿದ್ದಾರೆ. ನನಗೆ ಮಾಹಿತಿ ಇರುವ ಪ್ರಕಾರ ಕೆಲವರ ಹೆಸರು ತನಿಖೆ ವೇಳೆ ಗೊತ್ತಾಗಿದೆ. ಆದರೆ ಸಿಐಡಿ ಯಾರ ಮನೆಗೆ ಹೋಗಿದ್ರು..? ಅವರ ತನಿಖೆ ಮಾಡಿದ್ರಾ? ನೋಡೋಣ ಸರ್ಕಾರ ಯಾರ ಯಾರ ರಕ್ಷಣೆ ಮಾಡ್ತಾರೆ ಅಂತಾ. ಸಿಎಂಗೆ ಬದ್ದತೆ ಇದ್ರೆ ನಿರ್ದಾಕ್ಷಣ್ಯ ಕೈಗೊಳ್ಳೋದೇ ಆಗಿದ್ರೆ, ಮೊದಲು ಕ್ರಮ ಕೈಗೊಳ್ಳಿ, ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಲಿ ಎಂದು ಹೇಳಿದರು.
ಸಿಎಂ ಇದರಲ್ಲಿ ಶಾಮಿಲಾಗಿದ್ದಾರೆ ಅಂತಾ ನಾನು ಹೇಳೋಲ್ಲ. ಕೆಲವರು ನನಗೆ ಫೋನ್ ಮಾಡಿ ಪಾಪಾ ಅವರು ಸಿಎಂ ಆಗಿ ಬಿಡ್ತಾ ಇದ್ರು, ನೀವು ಅವರ ಹೆಸರು ಹೇಳಿ ಹಾಳ್ ಮಾಡ್ತಾ ಇದಿರಾ ಅಂತಾ ಬಿಜೆಪಿಯವರೇ ಹೇಳ್ತಾ ಇದಾರೆ. ಅವರು ಸಿಎಂ ರೇಸ್ ನಲ್ಲಿ ಇದಾರೆ ಅಂತಾ ಕೆಲವರು ಬಿಜೆಪಿಯವರೇ ಹೇಳ್ತಾ ಇದಾರೆ ಎಂಬುದಾಗಿ ತಿಳಿಸಿದರು.



