ಕರ್ನಾಟಕ ಟಿವಿ : ಜುಲೈ 2 ರಂದು ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಲಿದ್ದಾರೆ. ಈ ಕಾರ್ಯಕ್ರಮ ವಿಶ್ವದಾಖಲೆ ಮಾಡಲು ಡಿಕೆಶಿ ಪಣ ತಟ್ಟಿದ್ದಾರೆ. ವರ್ಚುವಲ್ ವ್ಯವಸ್ಥೆಯಲ್ಲಿ ಬಹುದೊಡ್ಡ ರ್ಯಾಲಿ ಇದಾಗಲಿದ್ದು ಡಿಕೆ ಶಿವಕುಮಾರ್ ತಂಡ ಸಕಲ ರೀತಿಯಲ್ಲೂ ಸಜ್ಜಾಗಿದೆ. ಈ ಕಾರ್ಯಕ್ರಮವನ್ನ ಜೂಮ್ ಆ್ಯಪ್ ಮೂಲಕ ದೇಶ, ವಿದೇಶಗಳಲ್ಲಿ ವೀಕ್ಷಣೆ ಮಾಡಲಿದ್ದಾರೆ. ಈಗಾಗಲೇ 10 ಸಾವಿರ ಲಿಂಕ್ ಗಳನ್ನ ಸಿದ್ದಪಡಿಸಿಕೊಳ್ಳಲಾಗಿದೆ.
ಒಂದು ರಾಷ್ಟ್ರೀಯ ಪಕ್ಷದ ಒಂದು ರಾಜ್ಯಾಧ್ಯಕ್ಷ ಪದಗ್ರಹಣ ಕಾರ್ಯಕ್ರಮ ವರ್ಚುವಲ್ ರ್ಯಾಲಿ ಮೂಲಕ ದೊಡ್ಡ ಮಟ್ಟದಲ್ಲಿ ನಡೀತಿರೋದು ಇದೆ ಮೊದಲ ಬಾರಿಗೆ. ಕೊರೊನಾಗೂ ಮೊದಲು ಮೈದಾನದಲ್ಲಿ ಜನ ಸೇರಿಸಿ ರ್ಯಾಲಿ ಮಾಡೋರು. ಕೊರೊನಾ ನಂತರದ ಬೃಹತ್ ವರ್ಚುವಲ್ ರ್ಯಾಲಿ ಇದಾಗಲಿದ್ದು ಬಹಳಷ್ಟು ಕುತೂಹಲ ಮೂಡಿಸಿದೆ. ವಿವಿಧ ರಾಜ್ಯಗಳ ಕಾಂಗ್ರೆಸ್ ಕಮಿಟಿಗಳಿಂದ ಜೂಮ್ ಲಿಂಕ್ ಕೊಡುವಂತೆ ಮನವಿ ಬಂದಿದೆಯಂತೆ.
7800 ಸ್ಥಳಗಳಲ್ಲಿ ಕಾರ್ಯಕರ್ತರಿಂದಲೂ ಪ್ರತಿಜ್ಞಾವಿಧಿ
ಇನ್ನು ಡಿಕೆ ಶಿವಕುಮಾರ್ ಪ್ರತಿಜ್ಞಾವಿಧಿ ಸ್ವೀಕಾರ ವೇಳೆಯೇ 7800 ಸ್ಥಳಗಳಲ್ಲಿ ಅಂದ್ರೆ ವಾರ್ಡ್ ಹಾಗೂ ಪಂಚಾಯ್ತಿ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ಅಧ್ಯಕ್ಷರ ಜೊತೆ ಕಾರ್ಯಕರ್ತರು ಪ್ರತಿಜ್ಞಾವಿಧಿ ಸ್ವೀಕಾರ ಮಾಡ್ತಿರೋದು ಇದೇ ಮೊದಲು.
16 ಸಾವಿರ ಯುವಕರಿಗೆ ತರಬೇತಿ
ಇನ್ನು ರಾಜ್ಯಾದ್ಯಂತ 16 ಸಾವಿರ ಯುವಕರಿಗೆ ಪಂಚಾಯ್ತಿ ಹಾಅಗೂ ವಾರ್ಡ್ ಮಟ್ಟದಲ್ಲಿ ತರಬೇತಿ ನೀಡಲಾಗಿದೆ. ಅವರನ್ನ ಡಿಜಿಟಲ್ ಯೂತ್ ಗಳೆಂದು ನೇಮಕ ಮಾಡಲಾಗಿದ್ದು ಅವರು ಪ್ರತಿಜ್ಞಾವಿಧಿಯನ್ನ ನೇರಪ್ರಸಾರ ಮಾಡಲಿದ್ದಾರೆ. ಅಗತ್ಯ ಟಿವಿ ಹಾಗೂ ಎಲ್ ಇಡಿಗಳ ಮೂಲಕ ಡಿಕೆಶಿ ಪದಗ್ರಹಣದ ನೇರಪ್ರಸಾರ ನಡೆಯಲಿದೆ.
ಸಂವಿಧಾನ ಪೀಠಿಕೆ ಓದಲಿರುವ ಡಿಕೆಶಿ & ಕಾರ್ಯಕರ್ತರು
ಇನ್ನು ಡಿಕೆಶಿ ಜೊತೆ ಪ್ರತಿಜ್ಞಾವಿಧಿ ಸ್ವೀಕಾರ ಮಾಡಲಿರುವ ಕಾರ್ಯಕರ್ತರು ಇದೇ ವೇಳೆ ಸಂವಿಧಾನ ಪೀಠಿಕೆ ಓದಲಿದ್ದಾರೆ. ರಾಜ್ಯದ 6024 ಗ್ರಾಮ ಪಂಚಾಯ್ತಿ ಸೇರಿದಂತೆ ನಗರಸಭೆ, ಪಟ್ಟಣ ಪಂಚಾಯ್ತಿ ಸೇರಿದಂತೆ ಒಟ್ಟು 7800 ಕಡೆ ಏಕ ಕಾಲದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಂಸದ ಡಿಕೆ ಸುರೇಶ್ ಉಸ್ತುವಾರಿಯನ್ನ ಹೊತ್ತಿದ್ದು ಕಳೆದ 2 ತಿಂಗಳಿನಿಂದ ಈ ಕಾರ್ಯಕ್ರಮದ ಸಿದ್ಧತೆ ನಡೆಸಲಾಗಿದೆ.
ಬ್ಲಾಕ್ ಮಟ್ಟದ ಉಸ್ತುವಾರಿಗಳಿಗೆ ಜಿಪಿಎಸ್ ಟ್ರ್ಯಾಕರ್
ಇನ್ನು ಕಾರ್ಯಕ್ರಮ ಯಶಸ್ವಿಗೊಳಿಸಲು ಬ್ಲಾಕ್ ಮಟ್ಟದಲ್ಲ ಉಸ್ತುವಾರಿಗಳನ್ನ ನೇಮಕ ಮಾಡಲಾಗಿದೆ, ಜೊತೆಗೆ ಬ್ಲಾಕ್ ಉಸ್ತುವಾರಿಗಳಿಗೆ ಜಿಪಿಎಸ್ ಚಿಪ್ ಹೊಂದಿರುವ ಕಾರ್ಡ್ ನೀಡಲಾಗಿದ್ದು ಉಸ್ತುವಾರಿಗಳನ್ನ ಟ್ರಾಕ್ ಮಾಡಲಾಗುತ್ತೆ..
ಶಿವಕುಮಾರ್, ಕರ್ನಾಟಕ ಟಿವಿ, ಬೆಂಗಳೂರು
