Friday, November 22, 2024

Latest Posts

ಬಿಜೆಪಿ ಕಾರ್ಯಕರ್ತರು ನೀಡಿದ ಚಡ್ಡಿಯನ್ನು ಮೋದಿಗೆ ರವಾನಿಸುತ್ತೇವೆ- ಉಗ್ರಪ್ಪ

- Advertisement -

ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಂಸದ, ಕೆಪಿಸಿಸಿ ಉಪಾಧ್ಯಕ್ಷ ಉಗ್ರಪ್ಪ ಇಂದು ಸುದ್ದಿಗೋಷ್ಠಿಯನ್ನು ನಡೆಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿ, ಅಂದು ದೇವೆಗೌಡ್ರು ಪ್ರದಾನಿ ಆಗಿದ್ದು ಕಾಂಗ್ರೆಸ್ ಬೆಂಬಲದಿಂದ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವಾಗಲೂ ಕೂಡ ಕಾಂಗ್ರೆಸ್ ಪಕ್ಷದ ಬೆಂಬಲ ಇತ್ತು ಎಂದು ಉಗ್ರಪ್ಪ ಹೇಳಿದ್ದಾರೆ.

ಚಡ್ಡಿ ವಿಚಾರದ ಬಗ್ಗೆ ಉಗ್ರಪ್ಪ ಏನಂದ್ರು:

ಬಿಜೆಪಿ ಪಕ್ಷದವರು ಬಚ್ಚಲಮನೆಯ ಚಡ್ಡಿ ಹೊರುವಂತದ್ದು ಸರಿಯಲ್ಲ, ಹಿಂದುಳಿದ ವರ್ಗದ ನಾಯಕ ನಾರಾಯಣ ಸ್ವಾಮಿ ಮೂಲಕ ಚಡ್ಡಿ ಹೊರಸಿದ್ದು ಎಷ್ಟು ಸರಿ? ಶ್ರೇಣಿಕೃತ ವ್ಯವಸ್ಥೆಯಲ್ಲಿ ಬಚ್ಚಲ ಮನೆಯ ಚಡ್ಡಿ ಹೊರೆಸಿದ್ದು ಆರ್ಟಿಕಲ್ 17 ರ ಪ್ರಕಾರ ಅಪಚಾರ ಆಗಿದೆ ಎಂದು ಉಗ್ರಪ್ಪ ಬಿಜೆಪಿ ವಿರುದ್ದ ಚಾಟಿಯನ್ನು ಬೀಸಿದರು.

ಒಂದೇ ವರ್ಗದವರನ್ನು ಸೇರಿಸಿಕೊಂಡು ಆರ್.ಎಸ್.ಎಸ್ ಕಾರ್ಯಕರ್ತರನ್ನಾಗಿ ಮಾಡಿದ್ದಾರೆ. ಆರ್.ಎಸ್.ಎಸ್ ಕಛೇರಿಯಲ್ಲಿ ಅಂಬೇಡ್ಕರ್ ಪೋಟೊ ಹಾಕಿದ್ದೀರಾ. ಆದರೇ ಕಾಂಗ್ರೆಸ್ ಪಕ್ಷ ಎಲ್ಲರು ಭಾರತಾಂಬೆಯರು ಎಂದು ತೋರಿಸುತ್ತಿದೆ. ಕಾಮಧಹನ ಮಾಡುವ ಹಾಗೆ ಚಡ್ಡಿಯನ್ನು ಸುಡುತ್ತೇವೆ ಎಂದು ಉಗ್ರಪ್ಪ ಆಕ್ರೋಶವನ್ನು ಹೊರ ಹಾಕಿದರು.

ಆರ್.ಎಸ್.ಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ವಿಕೃತ ಭಾವನೆಯಿಂದ ಚಡ್ಡಿಯನ್ನು ತಂದಿದ್ದಾರೆ, ನಾವು ಆ ಚಡ್ಡಿಯನ್ನು ಪ್ರಧಾನ ಮಂತ್ರಿ ಮೋದಿಗೆ ರವಾನಿಸುತ್ತೇವೆ ಎಂದು ಹೇಳಿದರು.

ಪಠ್ಯ ಪುಸ್ತಕದ ಪರಿಷ್ಕರಣ ಸಂದರ್ಭದಲ್ಲಿ ದೇಶದ ಪರಂಪರೆಗೆ ಅಪಮಾನ ಮಾಡಿದ್ದಾರೆ. ರಾಷ್ಟ್ರಕವಿ ಕುವೆಂಪು, ವಿಶ್ವಗುರು ಬಸವಣ್ಣನವರ ‌ಬಗ್ಗೆ ಪಠ್ಯಪುಸ್ತಕದಲ್ಲಿ ತಿರುಚಿದ್ದಾರೆ. ಕಳೆದ ವರ್ಷದ ಮಾದರಿಯಂತೆ ಈ ವರ್ಷವೂ ಕೂಡ ಪಠ್ಯ ಪುಸ್ತಕ ಬಿಡುಗಡೆಯಾಗಬೇಕು ಎಂದು ಮಾಜಿ ಸಂಸದ, ಕೆಪಿಸಿಸಿ ಉಪಾಧ್ಯಕ್ಷ ಉಗ್ರಪ್ಪ ತಿಳಿಸಿದರು.

ಅಭಿಜಿತ್ ಕರ್ನಾಟಕ ಟಿವಿ ಬೆಂಗಳೂರು.

- Advertisement -

Latest Posts

Don't Miss