State News:
ಮೂರು ನದಿಗಳು ಸಂಗಮವಾಗುವ ಸ್ಥಳದಲ್ಲಿ ಮಹಾ ಕುಂಭಮೇಳವನ್ನು ಮಾಡುವುದರ ಮೂಲಕ ಈ ಭಾಗದ ಎಲ್ಲಾ ಜನರನ್ನು ಜಾಗೃತಗೊಳಿಸುವ ಕೆಲಸವಾಗಿದೆ. ಕೆ.ಆರ್.ಪೇಟೆಯಲ್ಲಿ ಧಾರ್ಮಿಕ ಚಟುವಟಿಕೆಗೆ ಹೊಸ ಸ್ವರೂಪವನ್ನು ನೀಡಲಾಗುತ್ತಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ವಿ. ಸುನೀಲ್ ಕುಮಾರ್ ಅವರು ತಿಳಿಸಿದರು.ಮಹಾಕುಂಭಮೇಳದ ಅಂಗವಾಗಿ ಕೆ.ಆರ್ ಪೇಟೆಯಲ್ಲಿ ನಡೆದ ಮಂಡ್ಯ ಜಿಲ್ಲೆಯ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ…
ಹಾಸನಾಂಬೆ ಮೊದಲ ದಿನದ ದರ್ಶನಕ್ಕೆ ಹರಿದು ಬಂತು ಭಕ್ತ ಸಾಗರ…!
ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಸಂಗಮ ನಿರ್ಮಾಣವಾಗಿರುವ ಹಿನ್ನೆಲೆ ಕುಂಭಮೇಳ ಕಾರ್ಯಕ್ರಮ ಮಾಡಿ ಈ ಸಂಗಮವನ್ನು ದೊಡ್ಡ ಪ್ರಮಾಣದಲ್ಲಿ ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ನಾಡಿನ ಸಾಧು ಸಂತರನ್ನು ಆಹ್ವಾನಿಸಿ ಕುಂಭಮೇಳದ ಮಹತ್ವವನ್ನು ತಿಳಿಸುವಂತಹ ಉತ್ತಮ ಕಾರ್ಯಕ್ರಮವನ್ನು ಡಾ.ನಾರಾಯಣಗೌಡ ಅವರು ಮಾಡುತ್ತಿದ್ದಾರೆ ಎಂದು ಹೇಳಿದರು.
ಭಾರತದ ಸಂಸ್ಕೃತಿ ನಿಂತಿರುವ ಧಾರ್ಮಿಕತೆಯ ತಳಅದಿಯಲ್ಲಿ. ಸಾಂಸ್ಕೃತಿಕವಾಗಿ ಭಾರತ ಶ್ರೀಮಂತ ವಾಗಿರುವ ಹಿನ್ನೆಲೆಯಲ್ಲಿ ಜಗತ್ತಿನ ಎಲ್ಲ ಜನರು ಭಾರತವನ್ನು ನೋಡಲು ಬರುತ್ತಾರೆ ಎಂದರು.ಭಾರತದಲ್ಲಿರುವ ಸಾಂಸ್ಕೃತಿಕ ಚಟುವಟಿಕೆಗಳು,ಧಾರ್ಮಿಕತೆಯ ಆಚರಣೆಗಳು, ನದಿ ಪರ್ವತವನ್ನು ಪೂಜಿಸುವ ಪದ್ಧತಿಗಳು ಇದೆ. ಬೇರೆ ದೇಶಗಳಲ್ಲಿ ಈ ರೀತಿಯ ಸಂಸ್ಕೃತಿಗಳು ಇಲ್ಲ ಆಗಾಗಿ ನಮ್ಮ ಭಾರತ ದೇಶವನ್ನು ಇತರೆ ದೇಶಗಳ ಗೌರವಿಸುತ್ತದೆ ಎಂದು ಹೇಳಿದರು.
ಇದನ್ನೂ ಓದಿ…
ಉಡುಪಿಯಲ್ಲಿ ನಾಗಭೈರವನ ಅಪರೂಪದ ಶಿಲ್ಪ ಪತ್ತೆ..!
ಭಾರತೀಯರಾದ ನಾವು ಪ್ರಕೃತಿಯನ್ನು ಪ್ರೀತಿಸುತ್ತೇವೆ, ಪೂಜಿಸುತ್ತೇವೆ, ಪ್ರಕೃತಿಯ ಜೊತೆ ಬೆಳೆಯುತ್ತೇವೆ ಎಂಬ ಉದ್ದೇಶದಿಂದ ಭಾರತವನ್ನು ಬೇರೆ ದೇಶದ ಜನರು ಪ್ರೀತಿಸಲು ಮೂಲ ಕಾರಣ ಎಂದರು.ಭಾರತವು ಸಾಂಸ್ಕೃತಿಕ ವೈಶಿಷ್ಟಗಳು,ಧಾರ್ಮಿಕ ಪರಂಪರೆಗಳು ಇವುಗಳನ್ನು ತಿಳಿಸುವಂತಹ ಪ್ರಯತ್ನವನ್ನು ಜಗತ್ತಿನ ಎಲ್ಲ ರಾಷ್ಟ್ರಗಳಿಗೆ ಮಾಡುತ್ತಿದ್ದೇವೆ. ಮೂರು ನದಿಗಳು ಒಂದು ನದಿಯಲ್ಲಿ ಸೇರುವ ಸ್ಥಳದಲ್ಲಿ ಕುಂಭಮೇಳ ಆಚರಣೆಯ ಧಾರ್ಮಿಕತೆಯ ವಾತಾವರಣ ಇದಾಗಿದೆ ಎಂದರು.
ಮೂರು ನದಿಗಳು ಸಂಗಮವಾಗುವ ತ್ರಿವೇಣಿ ಸಂಗಮವು ಕೆ.ಆರ್ ಪೇಟೆಯಲ್ಲಿ ಇರುವುದು ನಿಜಕ್ಕೂ ಪುಣ್ಯವಾಗಿದೆ. ಈ ಸಂಗಮವನ್ನು ಉಳಿಸಿ, ಇನ್ನಷ್ಟು ವಿಸ್ತರಿಸುತ್ತಾ ಬೆಳೆಸಿ ಕೊಂಡು ಹೋಗುವಂತಹ ಕೆಲಸವನ್ನು ಮಾಡೋಣ ಎಂದು ಹೇಳಿದರು.ಕುಂಭಮೇಳವನ್ನು ಗ್ರಾಮೀಣ ಭಾಗದಲ್ಲಿ ಮಾಡುವ ಮೂಲಕ ಧಾರ್ಮಿಕ ಆಚರಣೆಗಳು, ಸಾಂಸ್ಕೃತಿಕ ಹಿರಿಮೆಯನ್ನು ಹೆಚ್ಚು ಮಾಡುವ ಜೊತೆಯಲ್ಲಿ ಮನಸಿನೊಳಗಿರುವಂತಹ ಧಾರ್ಮಿಕ ಜಾಗೃತಿಯನ್ನು ಮಾಡುವ ಉತ್ತಮ ಪ್ರಯತ್ನ ಈ ಕಾರ್ಯಕ್ರಮಲ್ಲಿ ಮಾಡಲಾಗುತ್ತಿದೆ ಎಂದರು.
ಇದೆ ವೇಳೆ ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ಮಾತನಾಡಿ 9 ವರ್ಷದ ನಂತರ ಕುಂಭಮೇಳವನ್ನು ಮಾಡಲಾಗುತ್ತಿದೆ. ಮಧ್ಯಮ ಕುಟುಂಬ, ಬಡ ಕುಟುಂಬ ವಿದ್ಯಾವಂತರ ಪ್ರತಿನಿತ್ಯ ಮನೆಯಲ್ಲಿ ದೇವರನ್ನು ಪೂಜಿಸುವ ಸಂಸ್ಕಾರ ನಮ್ಮದು ಎಂದರು.ಮೂರು ನದಿಗಳು ಸೇರುವಂತಹ ಈ ಪವಿತ್ರ ಸ್ಥಳದಲ್ಲಿ ಬಂದಂತ ಮಲೆ ಮಹದೇಶ್ವರರು ಪಾದಸ್ಪರ್ಶ ಮಾಡಿರುವಂತಹ ಪುಣ್ಯ ವಾದ ಸ್ಥಳವಾಗಿದೆ ಎಂದರು.
ಇದನ್ನೂ ಓದಿ…
ನಾಡನ್ನು ಸುಭಿಕ್ಷಗೊಳಿಸಲು ಪ್ರಾರ್ಥನೆ- ಸಿಎಂ ಬೊಮ್ಮಾಯಿ
ಕುಂಭಮೇಳಕ್ಕೆ 40ಕ್ಕಿಂತ ಹೆಚ್ಚು ಮಠಾಧೀಶರು ಹೊರ ರಾಜ್ಯಗಳಿಂದ ಜಿಲ್ಲೆಗಳಿಂದ ಸಾಧುಸಂತರರು ಬರುವ ಪುಣ್ಯ ಸ್ಥಳವಾಗಿದೆ ಎಂದು ಕಾರ್ಯಕ್ರಮವನ್ನು ರೂಪಿಸಿ ಡಾ. ನಾರಾಯಣಗೌಡ ರವರ ನೇತೃತ್ವದಲ್ಲಿ ಕುಂಭಮೇಳ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದರು.ಮಹದೇಶ್ವರ ದೇವಸ್ಥಾನವನ್ನು ಪ್ರತಿಷ್ಠಾಪನೆ ಮಾಡಿದ ನಂತರ ಪ್ರತಿನಿತ್ಯ ಪೂಜೆ ಮಾಡಬೇಕು. ಶಾಶ್ವತವಾದ ಕಾರ್ಯಕ್ರಮವನ್ನು ರೂಪಿಸುವುದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ಜಿಲ್ಲೆಯ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳು ಸಾಕಷ್ಟು ಅನುದಾನವನ್ನು ನೀಡಿದ್ದಾರೆ. ಡಿಸೆಂಬರ್ ಜನವರಿ ತಿಂಗಳ ಒಳಗೆ ರಸ್ತೆಗಳ ಕಾಮಗಾರಿ ಮುಗಿಯುತ್ತದೆ. ಜಿಲ್ಲೆಯಲ್ಲಿ ಮೈಶುಗರ್ ಕಾರ್ಖಾನೆಯೂ ಉಳಿಯಬೇಕು ಇದರಿದ ರೈತರಿಗೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಪ್ರಾಮಾಣಿಕವಾದ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ರೇಷ್ಮೆ,ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ. ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿ.ಪಂ. ಸಿಇಒ ಶಾಂತ ಎಲ್. ಹುಲ್ಮನಿ, ಉಪವಿಭಾಗಾಧಿಕಾರಿ ಬಿ.ಸಿ ಶಿವಾನಂದಮೂರ್ತಿ, ತಹಶೀಲ್ದಾರ್ ರೂಪ ಮೂಡಾ ಅಧ್ಯಕ್ಷ ಶ್ರೀನಿವಾಸ್,ಆಳ್ವಾ ಸಂಸ್ಥೆಯ ಮುಖ್ಯಸ್ಥ ಮೋಹನ್ ಆಳ್ವಾ ಸೇರಿದಂತೆ ಇತರರು ಉಪಸ್ಥಿತರಿದ್ದರು.