Thursday, December 12, 2024

Latest Posts

ತ್ರಿವೇಣಿ ಸಂಗಮ ಕೆ ಆರ್ ಪೇಟೆಯಲ್ಲಿ 4 ದಿನ ಮಹಾ ಕುಂಭ ಮೇಳ

- Advertisement -

State News:

ಕೆ.ಆರ್.ಪೇಟೆಯ ಅಂಬಿಗರಹಳ್ಳಿಯಲ್ಲಿ ಅಕ್ಟೋಬರ್‌ 13 ರಿಂದ 16 ರವರೆಗೆ  ಕುಂಭ ಮೇಳ ನಡೆಯಲಿದೆ. ಲಕ್ಮಣ ತೀರ್ಥ, ಹೇಮಾವತಿ ಹಾಗೂ ಕಾವೇರಿ ಮೂರು ನದಿಗಳು‌ ಸೇರಿರುವ ತ್ರಿವೇಣಿ ಸಂಗಮಕ್ಕೆ ಮಹದೇಶ್ವರ ಬಂದು ಹೋಗಿದ್ದರು ಎಂದು ಹಿರಿಕರು ಹೇಳುತ್ತಾರೆ. ಈ ತ್ರಿವೇಣಿ ಸಂಗಮದಲ್ಲಿ ನಡೆಯುವ ಪುಣ್ಯಸ್ನಾನ.

ಅ.13 ರಂದು ತ್ರಿವೇಣಿ ಸಂಗಮದಲ್ಲಿ ಮಹದೇಶ್ವರ ದೇಸ್ಥಾನದ ಉದ್ಘಾಟನೆ ನಡೆಯಲಿದೆ. ಅ.14 ರಂದು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು, ಅ.16 ರಂದು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳು, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ 35 ರಿಂದ 40 ಸಮುದಾಯದ ವಿವಿಧ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ.
ಜ್ಯೋತಿ ಯಾತ್ರೆಯನ್ನು ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಮೂರು ಜಿಲ್ಲೆಯಲ್ಲಿ ನಡೆಯಲಿದೆ. ಭಗವಂತನ ಯಾತ್ರೆಯನ್ನು ಜನರಿಗೆ ಶಾಂತಿ, ಸುಖ, ಆರೋಗ್ಯ ನೀಡಲಿ ಎಂದು ನಡೆಸಲಾಗುತ್ತಿದೆ.
ಮಹಾ ಕುಂಭಮೇಳ ಕಾರ್ಯಕ್ರಮದಲ್ಲಿ ಸಾಧುಸಂತರು, ಸ್ವಾಮೀಜಿಗಳು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಉತ್ತರ ಪ್ರದೇಶದ ಮುಖ್ಯ ಮಂತ್ರಿಗಳು ಹಾಗೂ ಇನ್ನಿತರ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬರುವಂತಹ ಭಕ್ತಾಧಿಗಳಿಗೆ ಊಟೋಪಚಾರದ ವ್ಯವಸ್ಥೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

ಚಾಲಕರೇ ಹುಷಾರ್…! ಮದ್ಯಾಹ್ನ ನಂತರ ಆಟೋ ರೋಡಿಗಿಳಿದ್ರೆ ಸೀಜ್..!

ದೈವಾಧೀನವಾದ ‘ದೇವರ ಮೊಸಳೆ’ …!

ಕರ್ನಾಟಕ ಟಿವಿ ಸಹಯೋಗದೊಂದಿಗೆ ಬ್ಯಾಟರಾಯನಪುರದಲ್ಲಿ ಅದ್ಧೂರಿ ದಸರಾ ಮಹೋತ್ಸವ..

- Advertisement -

Latest Posts

Don't Miss