Saturday, July 27, 2024

Latest Posts

‘ಕ್ರಾಂತಿ’ಗೆ ಅಭಿಮಾನಿಗಳ ಕಟೌಟ್…!

- Advertisement -

Film News:

ರ್ಷದ ಬಹುನಿರೀಕ್ಷಿತ ‘ಕ್ರಾಂತಿ’ ಚಿತ್ರಕ್ಕೆ ವಿ. ಹರಿಕೃಷ್ಣ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ. ಗಣರಾಜ್ಯೋತ್ಸವದ ದಿನ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಡಿ ಬಾಸ್ ಅಭಿಮಾನಿಗಳಂತೂ ಫಸ್ಟ್ ಡೇ ಫಸ್ಟ್ ಶೋ ನೋಡೊಕೆ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಹಲವು ತಿಂಗಳುಗಳಿಂದ ಅಭಿಮಾನಿಗಳು ‘ಕ್ರಾಂತಿ’ ಪ್ರಚಾರ ಮಾಡುತ್ತಿದ್ದಾರೆ. ರಿಲೀಸ್ ಡೇಟ್ ಹತ್ತಿರವಾದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ದರ್ಶನ್ ಸಿನಿಮಾ ಅಂದಮೇಲೆ ಥಿಯೇಟರ್‌ಗಳ ಮುಂದೆ ಕಟೌಟ್‌ಗಳ ಭರಾಟೆ ಕೂಡ ಜೋರಾಗಿಯೇ ಇರುತ್ತದೆ. ‘ಕ್ರಾಂತಿ’ ಚಿತ್ರಕ್ಕಾಗಿ ಅಭಿಮಾನಿಗಳು ಕೂಡ ಕಟೌಟ್ ಮಾಡಿಸುತ್ತಿದ್ದಾರೆ.

ಸಾಮಾನ್ಯವಾಗಿ ದರ್ಶನ್ ನಟನೆಯ ಸಿನಿಮಾಗಳಿಗೆ 55ರಿಂದ 60 ಕಟೌಟ್‌ಗಳು ನಿರ್ಮಾಣ ಆಗುತ್ತಿತ್ತು. ಆದರೆ ‘ಕ್ರಾಂತಿ’ ವಿಚಾರದಲ್ಲಿ ಆ ಸಂಖ್ಯೆ ಡಬಲ್ ಆಗುವ ಸುಳಿವು ಸಿಗುತ್ತಿದೆ. ಇನ್ನು ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರದ ಎದುರು ದೊಡ್ಡ ಕಟೌಟ್ ಎದ್ದು ನಿಲ್ಲಲಿದೆ.

ಮಲ್ಲೇಶ್ವರಂ ಕಟೌಟ್‌ ಅಂಗಡಿಯಲ್ಲಿ ಸಾಮಾನ್ಯವಾಗಿ ಕನ್ನಡ ಸಿನಿಮಾಗಳಿಗೆ ಕಟೌಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಕಟೌಟ್‌ ತಯಾರಕರಾದ ಆನಂದ್‌ ಹಾಗೂ ತಂಡದವರು ಹಗಲಿರುಳು ‘ಕ್ರಾಂತಿ’ ಕಟೌಟ್‌ಗಳ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಕಟೌಟ್‌ ನಿರ್ಮಾಣದ ಆರ್ಡರ್ ಹೆಚ್ಚಾಗುತ್ತಲೇ ಇದೆ . ಸಾಮಾನ್ಯವಾಗಿ ದರ್ಶನ್ ಸಿನಿಮಾಗಳಿಗೆ 55ರಿಂದ 60 ಕಟೌಟ್‌ ನಿರ್ಮಾಣ ಆಗುತ್ತಿತ್ತು. ಆದರೆ ಈ ಬಾರಿ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದಿದ್ದಾರೆ.

ಸಾಮಾನ್ಯವಾಗಿ ಚಿತ್ರದ ನಿರ್ಮಾಪಕರು ಕಟೌಟ್‌ಗಳನ್ನು ಮಾಡಿಸುತ್ತಾರೆ. ಈ ಬಾರಿ ಅಭಿಮಾನಿಗಳು ಕೂಡ ಕೈ ಜೋಡಿಸಿತ್ತು. ಕೆಲ ಊರುಗಳಿಗೆ ತಮ್ಮದೇ ಹಣದಿಂದ ಕಟೌಟ್ ಮಾಡಿಸಿಕೊಂಡು ಹೋಗಿ ಸಂಭ್ರಮಾಚರಣೆಗೆ ಮುಂದಾಗಿದ್ದಾರೆ. ಚಿತ್ರತಂಡ 50ರಿಂದ 60 ಕಟೌಟ್‌ಗೆ ಆರ್ಡರ್ ಕೊಟ್ಟಿದ್ದು, ಅಭಿಮಾನಿಗಳು 30 ಕಟೌಟ್‌ ಮಾಡಿಸುತ್ತಿರುವ ಅಂದಾಜಿದೆ. ಆನಂದ್ ಹೇಳುವ ಪ್ರಚಾರ ಅಭಿಮಾನಿ ಇನ್ನು ಆರ್ಡರ್ ಕೊಡುತ್ತಲೇ ಇದ್ದಾರೆ, ಈ ಸಂಖ್ಯೆ ಎಲ್ಲಿಗೆ ಹೋಗಿ ನಿಲ್ಲುತ್ತದೆ ಗೊತ್ತಿಲ್ಲ ಎಂದಿದ್ದಾರೆ. ಈಗಾಗಲೇ ದೂರದ ಊರುಗಳಿಗೆ ‘ಕ್ರಾಂತಿ’ ದರ್ಶನ್ ಕಟೌಟ್‌ಗಳು ರವಾನೆ ಆಗುತ್ತಿದೆ.

ಬಟ್ಟೆ ಸುದ್ದಿಗೆ ಟ್ರೋಲ್ ಆದ ಪಠಾಣ್ ವಿಲ್ಲನ್..!

ಜನವರಿ 24ಕ್ಕೆ ಕಬ್ಜ ಚಿತ್ರದ ಬಿಗ್ ಅನೌನ್ಸ್ ಮೆಂಟ್…!!!!

ಮಂಗ್ಲಿಗೆ ಇನ್ಮುಂದೆ ಸೈರನ್..!!!!

- Advertisement -

Latest Posts

Don't Miss