ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಭಾರತ ವಿಜ್ರಂಭಿಸುತ್ತಿದೆ. ಇದೇ ವೇಳೆ ತಾರೆಯರು ಕೂಡಾ ದೇಶಾಭಿಮಾನ ಸಾರುತ್ತಿದ್ದಾರೆ.ಇದರ ಜೊತೆಗೆ ಕ್ರಾಂತಿ ಸಿನಿಮಾ ತಂಡ ಹೊಸದೊಂದು ಪೋಸ್ಟರ್ ರಿಲೀಸ್ ಮಾಡಿದ್ದು. ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿದೆ.
ಡಿ ಬಾಸ್ ಅಭಿನಯದ ವಿಭಿನ್ನ ಸಿನಿಮಾ ಅಭಿಮಾನಿಗಳ ಮುಂದೆ ಬರಲು ರೆಡಿಯಾಗಿದೆ.ಮೊದಲಿಗೆ ಕ್ರಾಂತಿ ಸಿನಿಮಾ ತಂಡ ಉಗ್ರ ರೂಪದ ದರ್ಶನ್ ಪೊಸ್ಟರ್ ರಿಲೀಸ್ ಮಾಡಿದ್ದು ಇದೀಗ ಸ್ವಲ್ಪ ಸೀರಿಯಸ್ ಲುಕ್ ನಲ್ಲಿ ದರ್ಶನ್ ನನ್ನು ಬಿಂಬಿಸಲಾಗಿದೆ.
ಹೌದು ವಿ ಹರಿಕೃಷ್ಣ ನಿರ್ದೇಶನದ ಈ ಸಿನಿಮಾದಲ್ಲಿ ಇಂದು ಆಗಸ್ಟ್ 15 ರಂದು ಬಿಡುಗಡೆಯಾದ ಪೋಸ್ಟರ್ ನಲ್ಲಿ ದರ್ಶನ್ ಪುಸ್ತಕ ಹಿಡಿದು ಕುಳಿತಿರುವುದು ನಿರೀಕ್ಷೆ ಮೂಡಿಸುತ್ತಿದೆ. ಒಂದೆಡೆ ರಘಡ್ ಉಕ್ ನ ಪೋಸ್ಟರ್ ಎಲ್ಲೆಡೆ ಹರಿದಾಡಿತ್ತು ಈಗ ಈ ಪೋಸ್ಟರ್ ಕಂಡು ದರ್ಶನ್ ದ್ವಿ ಪಾತ್ರದಲ್ಲಿ ಕಾಣಿಸುತ್ತಿದ್ದಾರೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ವಂದೇ ಮಾತರಂ ಹಾಡಿನಲ್ಲಿಲ್ಲ ದರ್ಶನ್,ಯಶ್: ಅಭಿಮಾನಿಗಳಿಂದ ಸರಕಾರಕ್ಕೆ ಪ್ರಶ್ನೆ




