Sunday, September 8, 2024

Latest Posts

ಕೆಆರ್ ಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮಖಂಡರು ,ಕಾರ್ಯಕರ್ತರ ಅಮೃತ ಮಹೋತ್ಸವ ಜಾಥಾ

- Advertisement -

banglore:

KR PURAM: 75ರ ಸ್ವಾತಂತ್ರ್ಯ ಅಮೃತ ಮಹೋತ್ಸವೆ ದೇಶವೇ ಸಜ್ಜಾಗಿ ನಿಂತಿದೆ. ಎಲ್ಲೆಡೆ ಪಕ್ಷ ಪ್ರತಿಪಕ್ಷಗಳ ಜಾಥಾ ಸ್ವಾತಂತ್ರೋತ್ಸವಕ್ಕೆ ಮೆರುಗನ್ನು ತರುತ್ತಿದೆ. ಬೆಂಗಳೂರಿನ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ 75 ನೇ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಅಂಗವಾಗಿ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಷ್ಟ್ರ  ಧ್ವಜ ಹಿಡಿದು ಸಾರ್ವನಿಕರಲ್ಲಿ ಜಾಗೃತಿ ಮೂಡಿಸಲು ಜಾಥಾ ಹಮ್ಮಿಕೊಂಡಿದ್ದರು.

ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು 74 ವರ್ಷಗಳು ಪೂರೈಸಿ 75 ನೇ ವರ್ಷಕ್ಕೆ ಕಾಲಿರುಸುತ್ತಿರುವ ಸಂದರ್ಭದಲ್ಲಿ ದೇಶಾದ್ಯಂದ ಸಡಗರ ಸಂಭ್ರಮದಿಂದ 75 ನೇ ಸ್ವಾತಂತ್ರ್ಯೋತ್ಸವನ್ನು ಪ್ರತಿ ಮನೆಮನಗಳಲ್ಲಿ ಸ್ವಾತ್ರಂತ್ರ್ಯದ ಉತ್ಸವವಾಗಬೇಕು ಎಂದು ಪ್ರಧಾನಿ ನರೇಂದ್ರಮೋದಿಯ ಆಶಯವಾಗಿದ್ದು ಅದನ್ನು ಈಡೇರಿಸಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ [NALEEN KUMAR KATEEL]ತಿಳಿಸಿದರು.

ಬೆಂಗಳೂರಿನ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ 75 ನೇ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಅಂಗವಾಗಿ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಷ್ಟ್ರ  ಧ್ವಜ ಹಿಡಿದು ಸಾರ್ವನಿಕರಲ್ಲಿ ಜಾಗೃತಿ ಮೂಡಿಸಲು ಜಾತಾಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು  ಗಾಳಿ ಬೆಳಕು, ನೀರು ಸೇರಿಂದಂತೆ ಪ್ರಕೃತಿಯಲ್ಲಿ ದೇವರನ್ನ ಕಂಡ ಜಗತ್ತಿನ ಏಕಮಾತ್ರ ದೇಶ ನಮ್ಮ ಭಾರತ, ಸ್ವಾತಂತ್ರ್ಯಕ್ಕಾಗಿ ದುಡಿದ ಸಾವಿರಾರು ದೇಶಪ್ರೇಮಿಗಳ ಪಾತ್ರ ಮಹತ್ವದ್ದಾಗಿದೆ, ಅವರ ಶ್ರಮವನ್ನು ಪ್ರತಿಯೋಬ್ಬರಿಗೂ ತಲುಪಿಸಬೇಕು ಎಂದರು.

ಇನ್ನು ಕೆ.ಆರ್.ಪುರ ಕ್ಷೇತ್ರದ ವಿಜಿನಾಪುರ ಮಾರ್ಗವಾಗಿ ರಾಮಮೂರ್ತಿನಗರ, ಆನಂದಪುರ, ಟಿ.ಸಿ.ಪಾಳ್ಯದವರೆಗೂ ಸುಮಾರು 6 ಕಿ.ಮೀಟರ್ ವರೆಗೂ ನಡಿಗೆ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ನಂತರ ಮಾತನಾಡಿದ ಸಚಿವ ಬಿ.ಎ. ಬಸವರಾಜ ಕ್ಷೇತ್ರದ ಪ್ರತಿವಾರ್ಡ್ ಗೆ 5 ಸಾವಿರ ಧ್ವಜಗಳನ್ನು ನೀಡುವ ಮೂಲಕ ಕ್ಷೇತ್ರಕ್ಕೆ 51 ಸಾವಿರ ರಾಷ್ಟ್ರ ಧ್ವಜ ನೀಡಲಾಗುತ್ತಿದ್ದು ಪ್ರತಿ ಮನೆಯ ಮೇಲೆ ಧ್ವಜ ಹಾರಾಡಬೇಕೆಂಬ ಪ್ರಧಾನಿಗಳ ಆಶಯ ಈಡೇರಬೇಕು ಎಂದು ತಿಳಿಸಿದರು.

ಒಟ್ಟಾರೆ ರಾಷ್ಟ್ರದೆಲ್ಲೆಡೆ 75 ನೇ ಸ್ವಾತಂತ್ರ್ಯವನ್ನು ಸಡಗರ ಸಂಭ್ರಮದಿಂದ ಆಚರಿಸಲು ಸಕಲ ಸಿದ್ದತೆಗಳು ನಡೆದಿದ್ದು ಇದು ಹೊಸ ಮೈಲಿಗಲ್ಲಾಗಲಿದೆ.

- Advertisement -

Latest Posts

Don't Miss