ಮಂಡ್ಯ: ಶ್ರೀರಂಗಪಟ್ಟಣದ ಕೆ ಆರ್ ಎಸ್ ಬೃಂದಾವದಲ್ಲಿ ಚಿರತೆ ಕಾಣಿದ್ದರಿಂದ ಅಲ್ಲಿರುವ ಪ್ರವಾಸಿಗರು ಭಯಬೀತರಾಗಿ ಹೊರಗೆ ಓಡಿದರು. ಬೃಂದಾವನ ನೋಡಲು ಸಾವಿರಾರು ಜನ ಪ್ರವಾಸಿಗರು ಬಂದಿದ್ದರು, ಮೀನುಗಾರಿಕಾ ಅಕ್ವೇರಿಯಂ ಬಳಿಯ ರಾಯಲ್ ಆರ್ಕಿಡ್ ಹೋಟೆಲ್ ಕಡೆ ಚಿರತೆ ಹೋಗುತ್ತಿರುವುದನ್ನು ಅಲ್ಲಿಯ ಭದ್ರತಾ ಸಿಬ್ಬಂದಿ ನೋಡಿದ್ದಾರೆ. ತಕ್ಷಣ ಭಧ್ರತಾ ಸಿಬ್ಬಂದಿ ಪ್ರವಾಸಿಗರನ್ನು ಹೋರಗೆ ಕಳುಹಿಸಿದ್ದಾರೆ. 15 ದಿನಗಳಲ್ಲಿ ಬೃಂದಾವನದಲ್ಲಿ 3 ಸಲ ಚಿರತೆ ಕಾಣಿಸಿದೆ ಬೃಂದಾವನದ ಎರಡು ಕಡೆಯಲ್ಲಿ ಬೋನು ಇರಿಸಿದ್ದರೂ ಚಿರತೆ ಬೋನಿಗೆ ಬೀಳುತ್ತಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಬೇರೆ ಜಿಲ್ಲೆ, ರಾಜ್ಯಗಳಿಂದ ಲಕ್ಷಾಂತರ ಜನರು ಬೃಂದಾವನಕ್ಕೆ ಭೇಟಿ ನೀಡುತ್ತಾರೆ. ಚಿರತೆ ಕಾಣಿಸಿದ ಹಿನ್ನೆಲೆ ಪ್ರವಾಸಿಗರು ಅರಚುತ್ತಾ ಓಡಿ ಹೋಗುತ್ತಿದ್ದರು. ಎರಡು ಮೂರು ಸಲ ಚಿರತೆ ಕಾಣಿಸಿದ್ದು ತಿಳಿದಿದ್ದರೂ ಬೃಂದಾವನ ಬಂದ್ ಮಾಡಿಲ್ಲ, ಪ್ರವೇಶಕ್ಕೆ ಅವಕಾಶ ನೀಡಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚೆನ್ನೈ – ಮೈಸೂರು ನಡುವಿನ ಪ್ರಾಯೋಗಿಕ ‘ವಂದೇ ಭಾರತ್’ ರೈಲಿನ ಸಂಚಾರ ಪ್ರಾರಂಭ
ಅರಳಿ ಮರದ ಎಲೆಗಳ ರಸವನ್ನು ಬೆಳಗ್ಗೆ ಕುಡಿಯುವುದರಿಂದ ಆರೋಗ್ಯಕ್ಕೆ 5 ಅದ್ಭುತ ಪ್ರಯೋಜನಗಳಿವೆ