ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ವಿರುದ್ಧದ ಅಕ್ರಮ ಭೂಕಬಳಿಕೆ ಆರೋಪ, ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ತಿದೆ. ತುಮಕೂರು ಜಿಲ್ಲೆಯಾದ್ಯಂತ ಹಲವು ಪ್ರತಿಭಟನೆಗಳು ನಡೀತಿದ್ದು, ಇದೀಗ ಕೆಆರ್ ಎಸ್ ಪಕ್ಷ ಕೂಡ ಅಖಾಡಕ್ಕೆ ಎಂಟ್ರಿ ಕೊಟ್ಟಿದೆ.
ಮಧುಗಿರಿ ತಾಲೂಕಿನ ತುಮ್ಮುಲು ಗ್ರಾಮ ವ್ಯಾಪ್ತಿಯಲ್ಲಿ, 40 ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಭೂಪರಿವರ್ತನೆ ಮಾಡಲಾಗಿದೆ. ಸಾವಿರಾರು ಕೋಟಿ ಬೆಲೆ ಬಾಳುವ ಭೂಮಿಯನ್ನು ದೋಚಲು ಡಿಸಿ ಸಹಾಯ ಮಾಡಿದ್ದಾರೆ ಅಂತಾ ಆರೋಪಿಸಲಾಗಿದೆ. ಪ್ರಕರಣದಲ್ಲಿ ಡಿಸಿ ಜೊತೆಗೆ ಎಡಿಸಿ, ಸರ್ಕಾರಿ ನೌಕರರು ಭಾಗಿಯಾಗಿದ್ದೂ, ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಜಿಲ್ಲಾಧಿಕಾರಿ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ. ಇದು ಕೇವಲ ಕೆಳಹಂತದ ಅಧಿಕಾರಿಗಳು ಸಹಿಗಳನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣವಲ್ಲ. ಬದಲಾಗಿ ತಮ್ಮ ಲಾಗಿನ್ ಐಡಿ ಕೊಟ್ಟು ಜಿಲ್ಲಾಧಿಕಾರಿಯೇ ಡಿಜಿಟಲ್ ಸಹಿ ಮಾಡಿಸಿದ್ದಾರೆ. ಅವರಿಂದಲೇ ಭೂಗಳ್ಳತನವಾಗಿದೆ. ಸರ್ಕಾರದ ಆಸ್ತಿ ಖಾಸಗಿ ವ್ಯಕ್ತಿ ಪಾಲಾಗಿದೆ. ನ್ಯಾಯಾಂಗ ತನಿಖೆ ಮಾಡಿ ವರದಿ ಬರುವ ತನಕ, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವ್ರನ್ನ ಅಮಾನತು ಮಾಡುವಂತೆ ಆಗ್ರಹಿಸಿದ್ರು.
ಅಕ್ರಮ ನಡೆದ ಬಗ್ಗೆ ಕಂದಾಯ ಸಚಿವ ಕೃಷ್ಣಬೇರೇಗೌಡ ಒಪ್ಪಿಕೊಂಡಿದ್ದಾರೆ. ಆದರೂ ಇದುವರೆಗೆ ಕ್ರಮ ಕೈಗೊಂಡಿಲ್ಲ. ಜಿ. ಪರಮೇಶ್ವರ್ ಇಡೀ ಜಿಲ್ಲೆಯನ್ನೇ ನಿಯಂತ್ರಿಸುತ್ತಿದ್ದಾರೆ. ಅಧಿಕಾರಿಗಳಿಗೆ ಪರಮೇಶ್ವರ್ ಕೃಪಾಕಟಾಕ್ಷವಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.