Saturday, April 12, 2025

Latest Posts

Crocodile : ಕೃಷ್ಣಾ ನದಿ ತೀರದಲ್ಲಿ ಮೊಸಳೆಗಳ ದಂಡು :  ಆತಂಕದಲ್ಲಿ ಸ್ಥಳೀಯರು

- Advertisement -

Thelangana News : ರಾಜ್ಯದೆಲ್ಲೆಡೆ ಮಳೆ ಅಬ್ಬರಿಸಿ ಬೊಬ್ಬರಿಯುತ್ತಿದೆ. ಇತ್ತ ಮಳೆರಾಯ ರಾಯಚೂರು ಜಿಲ್ಲೆಯಲ್ಲೂ ಅಬ್ಬರಿಸಲು ಶುರು ಮಾಡಿದ್ದಾನೆ. ಮಾಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ಬಾಗಲಕೋಠೆಯ ಆಲಮಟ್ಟಿ ಜಲಾಶಯಕ್ಕೆ ನೀರು ಹರಿಬಿಡಲಾಗಿತ್ತು.

ಇದರ ಬೆನ್ನಲ್ಲೇ ಈಗ ಅಲ್ಲಿಂದ ಯಾದಗಿರಿಯ ಬಸವಸಾಗರ ಜಲಾಶಯಕ್ಕೆ ನೀರು ಬಿಡಲಾಗಿದೆ. ಬಸವಸಾಗರ ಜಲಾಶಯದಿಂದ ಹೆಚ್ಚುವರಿ ನೀರು ಬಿಡಲಾಗಿದ್ದು, ಜಿಲ್ಲೆಯ ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲ್ಲೂಕಿನ ವ್ಯಾಪ್ತಿ ಅಲರ್ಟ್ ಮಾಡಲಾಗಿದೆ. ಕೃಷ್ಣಾ ನದಿ ತಿರದ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಸಿಲು ಸೂಚಿಸಲಾಗಿದೆ.

ಈ ಮಧ್ಯೆ ರಾಯಚೂರು ತಾಲ್ಲೂಕಿನ ಆತ್ಕೂರು ಗ್ರಾಮದ ಕೃಷ್ಣಾ ನದಿ ತೀರದಲ್ಲಿ 20ಕ್ಕೂ ಹೆಚ್ಚು ಮೊಸಳೆಗಳ ದಂಡು ಒಂದೇ ಕಡೆ ಬಂದು ಕೂತಿವೆ. ಆ ವಿಡಿಯೋ ವೈರಲ್ ಆಗಿದೆ. ಆ ಪ್ರದೇಶದಲ್ಲಿ ಓಡಾಡದಂತೆ ಸೂಚಿಸಲಾಗಿದೆ. ಆತ್ಕೂರು ಬಳಿಯ ಕುರುಕವಕಲಾ ನಡುಗಡ್ಡೆ ಪ್ರದೇಶಕ್ಕೆ ಬ್ರಿಡ್ಜ್ ಇಲ್ಲದಿರುವುದರಿಂದ ಸಾಕಷ್ಟು ಸಮಸ್ಯೆ ಉಂಟಾಗಿದೆ ಎನ್ನಲಾಗುತ್ತಿದೆ.

ನದಿ ತೀರದಲ್ಲಿ ಜಮೀನು ಹೊಂದಿರುವ ರೈತರು ವ್ಯವಸಾಯಕ್ಕಾಗಿ ಇದೇ ಕೃಷ್ಣಾ ನದಿ ತೀರಕ್ಕೆ ಬರಬೇಕು. ನಿತ್ಯ ಜೀವ ಭಯದಲ್ಲೇ ಓಡಾಡುತ್ತಿದ್ದೇವೆ ಎನ್ನುತ್ತಾರೆ ಸ್ಥಳೀಯರು.

- Advertisement -

Latest Posts

Don't Miss