Saturday, July 27, 2024

Latest Posts

ಪಕ್ಷೇತರವಾಗಿ ಸ್ಪರ್ಧೆ ಹಿನ್ನೆಲೆ, ಬಿಜೆಪಿಯಿಂದ 6 ವರ್ಷಗಳ ಕಾಲ ಈಶ್ವರಪ್ಪ ಉಚ್ಚಾಟನೆ.

- Advertisement -

Political News: ಪಕ್ಷೇತರವಾಗಿ ಲೋಕಸಭೆ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿರುವ ಕೆ.ಎಸ್.ಈಶ್ವರಪ್ಪ ನಾಮಪತ್ರ ವಾಪಸ್ ಪಡೆಯದಿದ್ದಲ್ಲಿ, ಅವರನನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸುವುದಾಗಿ, ಬಿಜೆಪಿ ಎಚ್ಚರಿಕೆ ನೀಡಿತ್ತು. ಆದರೆ ಎಚ್ಚರಿಕೆಗೆ ಓಗೊಡದೇ ಈಶ್ವರಪ್ಪ ಪಕ್ಷೇತರವಾಗಿ ಸ್ಪರ್ಧಿಸಲೇಬೇಕು ಎಂದು ತೀರ್ಮಾನಿಸಿದ್ದು, ನಾಮಪತ್ರ ವಾಪಸ್ ತೆಗೆದುಕೊಳ್ಳಲಿಲ್ಲ. ಈ ಕಾರಣಕ್ಕೆ ಈಶ್ವರಪ್ಪ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಲಾಗಿದೆ.

ಕೆ.ಎಸ್.ಈಶ್ವರಪ್ಪ ತಮ್ಮ ಮಗನಿಗೆ ಹಾವೇರಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಟಿಕೇಟ್ ಬಯಸಿದ್ದರು. ಆದರೆ ಅವರ ಮಗನಿಗೆ ಟಿಕೇಟ್ ಸಿಗದೇ, ಮತ್ತೊಮ್ಮೆ ಮಾಜಿ ಸಿಎಂ ಬೊಮ್ಮಾಯಿ ಅವರಿಗೆ ಲೋಕಸಭೆಯ ಟಿಕೇಟ್ ಸಿಕ್ಕಿದೆ. ಹಾಗಾಗಿ ಕೋಪಗೊಂಡಿರುವ ಈಶ್ವರಪ್ಪ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಹರಿಹಾಯ್ದಿದ್ದು, ನಾನು ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ. ಅಪ್ಪ ಮಕ್ಕಳ ವಿರುದ್ಧ ನನ್ನ ಸ್ಪರ್ಧೆ. ನಾನು ಗೆದ್ದರೆ ಬಿಜೆಪಿಗೆ ನನ್ನ ಬೆಂಬಲವಿರುತ್ತದೆ. ಮೋದಿಗೆ ನಾನು ಸಪೋರ್ಟ್ ಮಾಡುತ್ತೇನೆ ಎಂದಿದ್ದರು.

ಹಾಗಾಗಿ ಈಶ್ವರಪ್ಪ ಅವರಿಗೆ ನಾಮಪತ್ರ ವಾಪಸ್ ಪಡೆಯಬೇಕು ಎಂದು ಎಚ್ಚರಿಕೆ ನೀಡಲಾಗಿತ್ತು. ಆದರೆ ಬಿಜೆಪಿ ಹೈಕಮಾಂಡ್ ಮಾತಿಗೆ ಒಪ್ಪದ ಈಶ್ವರಪ್ಪರನ್ನು 6 ವರ್ಷಗಳ ಕಾಲ ಬಿಜೆಪಿಯಿಂದ ಉಚ್ಛಾಟಿಸಲಾಗಿದೆ.

ನೇಹಾ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಕೇಸ್: ಕ್ಷುಲ್ಲಕ ವಿಚಾರಕ್ಕೆ ಯುವತಿ ಮೇಲೆ ಹಲ್ಲೆ..

ರೈತರಿಗೆ ಸಿಗಬೇಕಿದ್ದ ನ್ಯಾಯ ಕೊಡಿಸುವುದರಲ್ಲಿ ನಮ್ಮ ಹೋರಾಟಕ್ಕೆ ಸಿಕ್ಕ ಮೊದಲ ಹಂತದ ಜಯ: ಸಿಎಂ ಸಿದ್ದರಾಮಯ್ಯ

ಕುಂದಗೋಳ: ಅತಿಥಿ ಶಿಕ್ಷಕಿಯನ್ನೇ ಅಪಹರಿಸಿದ ಯುವಕ, ಠಾಣೆಗೆ ದೂರು

- Advertisement -

Latest Posts

Don't Miss