ಆರ್.ಎಸ್.ಎಸ್.ಚಡ್ಡಿ ಸುಡ್ತೀವಿ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಹೇಳಿಕೆಗೆ ಕೆಎಸ್ ಈಶ್ವರಪ್ಪ ತಿರುಗೇಟನ್ನ ಕೊಟ್ಟಿದ್ದಾರೆ.
ಇಡೀ ದೇಶವನ್ನ, ಇಡೀ ಪ್ರಪಂಚವನ್ನ ಅಣ್ಣತಮ್ಮಂದಿರ ಭಾವನೆ ತರುವಂತೆ ಮಡುತ್ತಿರೋದು ಚಡ್ಡಿ, ಆರ್ ಎಸ.ಎಸ್.ನ ಚಡ್ಡಿ, ಇದ್ರು ಬಗ್ಗೆ ಹೆಚ್ಚಾಗಿ ಮಾತನಾಡಿದ್ರೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ತೊಂದರೆ ಕಾಂಗ್ರೆಸ್ ಅನುಭವಿಸುತ್ತೆ ಎಂತ ಕೆ ಎಸ್.ಈಶ್ವರಪ್ಪ ಸಿದ್ದರಾಮಯ್ಯನವರಿಗೆ ಎಚ್ಚರಿಕೆ ನೀಡಿದರು.
ಗೌರವ ಕೊಡುವುದಕ್ಕೆ ನನ್ನ ಮನಸ್ಸು ಒಪ್ಪುತ್ತಿಲ್ಲಾ,ಬಹು ವಚನ ಹೇಳೋಕೆ ಇಷ್ಟ ಇಲ್ಲಾ ಅದಕ್ಕಾಗಿಯೇ ಅವನು, ಅಂತ ಹತ್ತುಸಾರಿ ಹೇಳಿದ್ದೀನಿ ನೂರು ಸಾರಿ ಹೇಳ್ತೀನಿ.ಆರ್.ಎಸ್. ಎಸ್. ಚಡ್ಡಿಬಗ್ಗೆ ಇಷ್ಟು ಹಗುರವಾಗಿ ಮಾತಾಡಿದ್ರೆ ನಿನಗೆ ಗೌರವ ಕೊಡಬೇಕು ಅಂತ ನನಗಲ್ಲಾ, ರಸ್ತೆಯಲ್ಲಿ ಹೋಗೋ ನಾಯಿಗೂ ಗೌರವ ಕೊಡಬೇಕು ಅಂತ ಅನ್ಸಲ್ಲಾ.
ಆರ್.ಎಸ್.ಎಸ್.ಚಡ್ಡಿಸುದ್ದಿಗೆ ಬಂದರೆ ಹುಷಾರ್ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನವರಿಗೆ ಕೆ.ಎಸ್. ಈಶ್ವರಪ್ಪ ತಿರುಗೇಟನ್ನ ನೀಡಿದ್ದಾರೆ.
ಅಭಿಜಿತ್ ಕರ್ನಾಟಕ ಟಿವಿ ಬೆಂಗಳೂರು