ತುಮಕೂರಿನ ಮಧುಗಿರಿಯಲ್ಲಿ ಬೈಕ್ ಗೆ KSRTC ಬಸ್ ಡಿಕ್ಕಿ: ದಂಪತಿಗಳಿಬ್ಬರು ಸ್ಥಳದಲ್ಲೇ ಸಾವು

ತುಮಕೂರು : ಕೆ ಎಸ್ ಆರ್ ಟಿ ಸಿ ಬಸ್ಸು ಮತ್ತು ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ ಸ್ಥಳದಲ್ಲೇ ಇಬ್ಬರು ದಂಪತಿಗಳು ಸಾವನ್ನಪ್ಪಿರುವ ಘಟನೆ, ತುಮಕೂರಿನ ಮಧುಗಿರಿಯಲ್ಲಿ ನಡೆದಿದೆ.

ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಕೆರೆಗಳ ಪಾಳ್ಯ ಗ್ರಾಮದ ಸಿಮೆಂಟ್ ಇಟ್ಟಿಗೆ ಫ್ಯಾಕ್ಟರಿ ಬಳಿ ಘಟನೆ ನಡೆದಿದ್ದು, ತಾಲ್ಲೂಕಿನ ಗೊಂದಿಹಳ್ಳಿ ಗ್ರಾಮದ ಸಾಂಬಶಿವಯ್ಯ (70)ವರ್ಷ ಶಂಕರಮ್ಮ( 60) ವರ್ಷ ಮೃತ ದಂಪತಿಗಳಾಗಿದ್ದಾರೆ.

ಮಧುಗಿರಿಯಿಂದ ತುಮಕೂರು ಕಡೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಓವರ್ ಟೇಕ್ ಮಾಡಲು ಹೋಗಿ ಎದುರುಗಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರು ದಂಪತಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ

ಈ ಸಂಬಂಧ ಮಧುಗಿರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author