ಚಾಲಕನ ನಿಯಂತ್ರಣ ತಪ್ಪಿ ಮೆಟ್ರೋ ಪಿಲ್ಲರ್ ಗೆ KSRTC ಬಸ್ ಡಿಕ್ಕಿ: ಐವರ ಸ್ಥಿತಿ ಗಂಭೀರ, 21 ಮಂದಿಗೆ ಗಾಯ

ಬೆಂಗಳೂರು: ಮಡಿಕೇರಿಯಿಂದ ಬೆಂಗಳೂರಿಗೆ ಬರುತ್ತಿದ್ದಂತ ಕೆ ಎಸ್ ಆರ್ ಟಿ ಸಿ ಬಸ್, ಇಂದು ಬೆಂಗಳೂರು ವಿವಿ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮೆಟ್ರೋ ಪಿಲ್ಲರ್ ಗೆ ಡಿಕ್ಕಿಯಾಗಿದೆ. ಇದರಿಂದಾಗಿ ಐವರು ಗಂಭೀರ ಗಾಯಗೊಂಡು, 21 ಮಂದಿ ಸಣ್ಣಪುಟ್ಟ ಗಾಯಗಳಾಗಿರೋ ಘಟನೆ ನಡೆದಿದೆ.

ಕಳೆದ ರಾತ್ರಿ ಮಡಿಕೇರಿಯಿಂದ ಹೊರಟಂತ ಕೆ ಎಸ್ ಆರ್ ಟಿ ಸಿ ಬಸ್, ಕಂಗೇರಿ ಬಿಟ್ಟು ಬೆಂಗಳೂರು ವಿವಿ ಸಮೀಪ ಬಂದಾಗ, ಚಾಲಕ ಸ್ಟೇರಿಂಗ್ ನಿಯಂತ್ರಣ ಕಳೆದುಕೊಂಡಿದ್ದಾರೆ. ಈ ಪರಿಣಾಮ ಮೆಟ್ರೋ ಪಿಲ್ಲರ್ ಕಂಬಕ್ಕೆ ಬಸ್ ಡಿಕ್ಕಿಯಾಗಿದೆ. ಹೀಗಾಗಿ ಬಸ್ ಚಾಲಕನಿಗೆ ಸ್ಟೇರಿಂಗ್ ಹೊಟ್ಟೆಗೆ ಹೊಕ್ಕು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರೊಂದಿಗೆ ಬಸ್ ಡಿಕ್ಕಿಯಾದ ರಬಸಕ್ಕೆ ನಾಲ್ವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇನ್ನೂ ಗಂಭೀರವಾಗಿ ಗಾಯಗೊಂಡಿರುವಂತ ಚಾಲಕ ಕಂ ನಿರ್ವಾಹಕನನ್ನು ಬಿಜೆಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಿ, ಇನ್ನುಳಿದಂತ ಪ್ರಯಾಣಿಕರು ಕೆಂಗೇರಿಯ ಖಾಸಗಿ ಆಸ್ಪತ್ರೆ, ಮತ್ತೆ ಕೆಲವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

About The Author