Sunday, December 22, 2024

Latest Posts

ಸರಕಾರದ ಧೋರಣೆ ಖಂಡಿಸಿ ಬೀದಿಗಿಳಿಯಲು ಸಜ್ಜಾದ ಸಾರಿಗೆ ನೌಕರರು

- Advertisement -

Banglore News:

ಆರು ವರ್ಷ ಕಳೆದರೂ ವೇತನ ಹೆಚ್ಚಳ ಮಾಡದ ಸರಕಾರದ ಧೋರಣೆ ಖಂಡಿಸಿ ಬೀದಿಗಿಳಿಯಲು ಸಾರಿಗೆ ನೌಕರರು ತೀರ್ಮಾನ ಮಾಡಿದ್ದಾರೆ. ಸರಕಾರದ ಗಮನ ಸೆಳೆಯಲು ಬೃಹತ್‌ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದ್ದು, ಅನಂತ ಸುಬ್ಬರಾವ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಗೆ ಸಾರಿಗೆ ಇಲಾಖೆಯಿಂದ ತೀವ್ರ ವಿರೋಧ ಇದ್ದು, ಸಾರಿಗೆ ನೌಕರರಿಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡಲಾಗಿದೆ. ಸಾರಿಗೆ ನಿಗಮದ ಕರ್ತವ್ಯಕ್ಕೆ ಗೈರಾದರೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಪ್ರತಿಭಟನೆಯಲ್ಲಿ ಭಾಗಿಯಾಗದೆ ಕರ್ತವ್ಯಕ್ಕೆ ಹಾಜರಾಗಲು ಎಲ್ಲಾ ಸಾರಿಗೆ ಸಿಬ್ಬಂದಿಗೆ ವಿಭಾಗೀಯ ಡಿಸಿಗಳಿಂದ ಎಚ್ಚರಿಕೆಯ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಕೋಲಾರದಲ್ಲಿ ಕೈ ನಾಯಕರು..!

ಸುಳ್ಳುರಾಮಯ್ಯ ಎಂಬ ಹೆಸರೇ ಅವರಿಗೆ ಸೂಕ್ತ: ಸಿ.ಟಿ.ರವಿ

“ಒಂದು ಸಲ ಅಲ್ಲ ನೂರು ಸಲ ಬಂದ್ರೂ ಏನು ಆಗಲ್ಲ”: ಸಿದ್ದರಾಮಯ್ಯ

- Advertisement -

Latest Posts

Don't Miss