ಚಂಪಾ ಷಷ್ಠಿ ಪ್ರಯುಕ್ತ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಜೃಂಭಣೆಯ ಭ್ರಹ್ಮರಥೋತ್ಸವ

ಮಂಗಳೂರು: ಇಂದು ಚಂಪಾ ಷಷ್ಠಿ ಪ್ರಯುಕ್ತ ಕರ್ನಾಟಕದ ಪ್ರಸಿದ್ಧ ಯಾತ್ರಾಸ್ಥಳ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬ್ರಹ್ಮರಥೋತ್ಸವ ನಡೆಯಿತು. ಸುಬ್ರಹ್ಮಣ್ಯ ಸ್ವಾಮಿ ರಥಬೀದಿಯಲ್ಲಿ ಸಂಚರಿಸಿದ್ದನ್ನು ನೋಡಲು ಲಕ್ಷಾಂತರ ಜನರು ಆಗಮಿಸಿದ್ದರು. ಮೊದಲು ಉಮಾಮಹೇಶ್ವರ ದೇವರು ಕುಳಿತ ಚಿಕ್ಕ ರಥೋತ್ಸವ ನೆರವೇರಿತು ನಂತರ ಚಂಪಾಷಷ್ಠಿ ಮಹಾರಥೋತ್ಸವ ನಡೆಯಿತು. ಬೆಳಿಗ್ಗೆ 7.05ರ ವೃಶ್ಚಿಕ ಲಗ್ನದಲ್ಲಿ  ದೇವರ ವಿಗ್ರಹಗಳ ಬ್ರಹ್ಮರಥೋತ್ಸವ ನೆರವೇರಿತು. ಸಂಭ್ರಮದಿಂದ ಭಕ್ತರು ಆಗಮಿಸಿ ಮಹಾರಥೋತ್ಸವನ್ನು ಕಣ್ತುಂಬಿಕೊಂಡರು.

ಅಮೃತಸರದಲ್ಲಿ ಮತ್ತೊಂದು ಪಾಕ್ ಡ್ರೋನ್ ಅನ್ನು ಹೊಡೆದುರುಳಿಸಿದೆ ಬಿಎಸ್ಎಫ್ ಪಡೆ

ನಾಗಕ್ಷೇತ್ರವಾದ ಕುಕ್ಕೆಯಲ್ಲಿ ಇಂದು ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಅಭಿಷೇಕ ಮತ್ತು ಪೋಜಾಲಂಕಾರಗಳನ್ನು ಮಾಡಲಾಯಿತು. ರಥೋತ್ಸವದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆಗೆ 49 ಪಿಎಸ್ಐ, 14 ಇನ್ಸ್ ಪೆಕ್ಟರ್, 16 ಎಸಿಪಿ, 158 ಎಎಸ್ಐ, 148 ಹೆಡ್ ಕಾನ್ಸ್ ಸ್ಟೇಬಲ್, 236 ಪಿಸಿ, 22 ಹೋಂಗಾರ್ಡ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಇನ್ನುಚಂಪಾಷಷ್ಠಿಯಲ್ಲಿ ಭಾಗಿಯಾಗಲು ಬೇರೆಡೆಯಿಂದ ಸಾಕಷ್ಟು ಭಕ್ತರು ಆಗಮಿಸಿದ್ದರು. ವಿದ್ಯುತ್ ದೀಪಾಲಂಕಾರದಿಂದ ದೇವಸ್ಥಾನ ಕಂಗೊಳಿಸುತ್ತಿತ್ತು.

ಬ್ರಿಟಿಷ್ ಮೌಲ್ಯಗಳು ಮತ್ತು ಹಿತಾಸಕ್ತಿಗಳಿಗೆ ಚೀನಾ ವ್ಯವಸ್ಥಿತ ಸವಾಲನ್ನು ಒಡ್ಡುತ್ತದೆ : ಯುಕೆ ಪ್ರಾಧಾನಿ ರಿಷಿ ಸುನಕ್

ಬಿಬಿಎಂಪಿ ಕಸದ ಲಾರಿಗೆ ಇಬ್ಬರು ಬೈಕ್ ಸವಾರರು ಬಲಿ

About The Author