- Advertisement -
ಸೊರಬ ಕ್ಷೇತ್ರದ ಶಾಸಕ ಹಾಗೂ ಕನ್ನಡ ಚಿತ್ರರಂಗದ ನಟ ಕುಮಾರ್ ಬಂಗಾರಪ್ಪ ಪುತ್ರಿ ನಿಶ್ಚಿತಾರ್ಥ ಅದ್ಧೂರಿಯಾಗಿ ನಿನ್ನೆ ನಡೆದಿದೆ.
ಕುಮಾರ್ ಬಂಗಾರಪ್ಪ ಪುತ್ರಿ ಲಾವಣ್ಯ ಹಾಗೂ ವಿಕ್ರಮಾದಿತ್ಯ ಉಂಗುರ ಬದಲಿಸಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಎರಡು ಕುಟುಂಬಸ್ಥರು ಭಾಗಿಯಾಗಿದ್ದರು. ಮಗಳ ನಿಶ್ಚಿತಾರ್ಥದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಕುಮಾರ್ ಬಂಗಾರಪ್ಪ, ನಿಮ್ಮೆಲ್ಲರ ಆಶಿರ್ವಾದ ಬಯಸುತ್ತೇನೆ. ನಮ್ಮ ಕುಟುಂಬದ ಮೇಲೆ ಹೇಗೆ ಅಭಿಮಾನ ಪ್ರೀತಿ ಇದೆಯೋ ಹಾಗೆಯೇ ಈ ನವ ಜೋಡಿಗಳ ಮೇಲೆ ನಿಮ್ಮೆಲ್ಲರ ಆಶಿರ್ವಾದ ಹಾಗೂ ಹಾರೈಕೆಗಳು ಸದಾ ಇರಲಿ ಎಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
- Advertisement -