Sunday, May 26, 2024

Latest Posts

ಕುಮಾರಸ್ವಾಮಿಯವರ ನಾಲಿಗೆ ಯಾವಾಗ ಬೇಕಾದರೂ ಹೊರಳಾಡುತ್ತದೆ: ಶಾಸಕ ಪ್ರಸಾದ್ ಅಬ್ಬಯ್ಯ

- Advertisement -

Hubli Political news: ಹುಬ್ಬಳ್ಳಿ: ಕೆಲವು ಭೂಪರು, ಅನಂತಕುಮಾರ ಹೆಗಡೆ ಅಂತವರು ಸಂವಿಧಾನವನ್ನೇ ಬದಲಾವಣೆ ಮಾಡುವ ಹೇಳಿಕೆ ಕೊಡುತ್ತಾರೆ. ಅಂಬೇಡ್ಕರ್ ನೀಡಿದ ಸಂವಿಧಾನದಲ್ಲಿ ಸಂಸದರಾದವರು ಇದೀಗ ಅವರಿಗೆ ಅಗೌರವ ಸೂಚಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಕಿಡಿಕಾರಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಶೋಷಿತರು, ದಲಿತರು, ಹಿಂದೂಳಿದ ಜನಾಂಗವನ್ನು ತುಳಿಯುವ ಕೆಲಸಕ್ಕೆ ಮುಂದಾಗುತ್ತಿದ್ದು ಅದು ನಿಲ್ಲಬೇಕಾಗಿದೆ. ಇದೀಗ ಸಂವಿಧಾನ ಬದಲಾವಣೆ ಮಾಡಲು ಮುಂದಾಗಿರುವವರಿಗೆ ಸಂವಿಧಾನ ಅಂದ್ರೆ ಏನೂ? ಅಂಬೇಡ್ಕರ್ ಅಂದ್ರೆ ಏನೂ? ಈ ಬಗ್ಗೆ ಎನೂ ಗೊತ್ತಿಲ್ಲ, ಆದರೆ ಅವರೆಲ್ಲರೂ ಸಂಸದರಾಗಿರುವುದು ಸಂವಿಧಾನದ ಅಡಿಯಲ್ಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳಿಂದಲೇ ಎಲ್ಲೆಡೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಆದರೆ ಗ್ಯಾರಂಟಿಗಳಿಂದಲೇ ಮಹಿಳೆಯರು ಹಾದಿ ತಪ್ಪುತ್ತಿದ್ದಾರೆ ಎನ್ನುವ ಕುಮಾರಸ್ವಾಮಿ ಅವರ ಮಾತುಗಳು ಖಂಡನೀಯ, ಅವರ ನಾಲಿಗೆ ಯಾವಾಗ ಬೇಕಾದರೂ ಹೊಳಾಡುತ್ತದೆ ಎಂದು ಹರಿಹಾಯ್ದರು.

ಬಿಜೆಪಿ ಸರ್ಕಾರದ ಆಡಳಿತ ದಲಿತ ವಿರೋಧಿ ಬಡಜನ ವಿರೋಧಿ, ಈ ಸರ್ಕಾರದ ವಿರುದ್ಧ ಚುನಾವಣೆ ನಡೆಯಲಿದೆ ಎಂದರು. ಎಲ್ಲರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಉತ್ತಮ ಯೋಜನೆಗಳನ್ನು ಉತ್ತಮ ಆರ್ಥಿಕ ತಜ್ಞ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಆದರೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಗ್ಯಾರಂಟಿ ಸರ್ಕಾರ, ರಾಜ್ಯ ಸರ್ಕಾರ ದಿವಾಳಿಯಾಗಲಿದೆ. ಎಂದು ಹೇಳಿಕೆ ನೀಡಿದವರೇ ಇಂದು ಗ್ಯಾರಂಟಿಗಳನ್ನು ಕಾಫಿ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ಪ್ರಣಾಳಿಕೆಯನ್ನು ಲೇವಡಿ ಮಾಡಿದರು.

ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಪರ ಮತಯಾಚನೆ ಮಾಡಿದ ಹೂಡಿ ವಿಜಯ್

ಸ್ತ್ರೀವಾದದ ಬಗ್ಗೆ ನನಗೆ ನಂಬಿಕೆ ಇಲ್ಲ: ನಟಿ ನೂರಾ ಫತೇಹಿ

ಅಯೋಧ್ಯೆ ಮಂದಿರ ಮತ್ತು ರಾಮಲಲ್ಲಾ ಇರುವ ಬೆಳ್ಳಿ ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ಮೋದಿ..

- Advertisement -

Latest Posts

Don't Miss