State News:
ಅಕ್ಟೋಬರ್ 15ರಂದು ಬೆಳಿಗ್ಗೆ 6 ರಿಂದ 9 ಗಂಟೆವರೆಗೆ ಕಳಸ ಪೂಜೆ, ಗಣಪತಿ, ನವಗ್ರಹ, ಮೃತ್ಯುಂಜಯ ಮತ್ತು ಸಹಸ್ರ, ಮೋದಕ ಹೋಮ ನಡೆಯಲಿದೆ.ಬೆಳಿಗ್ಗೆ 9.30 ರಿಂದ 11:30 ಗಂಟೆವರೆಗೆ ಎಂ.ಎನ್.ಪಿ ರತ್ನಂ ಮತ್ತು ತಂಡದವರಿಂದ ಸಾಕ್ಸೋಫೋನ್ ಕಾರ್ಯಕ್ರಮ, ರವಿ ಶಿವಕುಮಾರ್ ಮತ್ತು ತಂಡ ಗಂಧರ್ವ ಮ್ಯೂಸಿಕ್ ಅಕಾಡೆಮಿ, ಕೆ.ಆರ್ ಪೇಟೆ ರವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರುಗಲಿದೆ.
ಬೆಳಗ್ಗೆ 11:30 ರಿಂದ 1:30ರವರೆಗೆ ಧಾರ್ಮಿಕ ಸಮ್ಮೇಳನ, ಮಧ್ಯಾಹ್ನ 2:30 ರಿಂದ 5 ಗಂಟೆಯವರೆಗೆ ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಸಂಜೆ 4 ರಿಂದ 5 ಗಂಟೆಯವರೆಗೆ ಶ್ರೀ ಮಹದೇಶ್ವರ, ಶ್ರೀ ಸಂಗಮೇಶ್ವರ, ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರರಿಗೆ ಏಕಾದಶ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಜಾನೆ ಮತ್ತು ಮಂಗಳಾರತಿ ಕಾರ್ಯಕ್ರಮ ನಡೆಯಲಿದೆ.
ಸಂಜೆ 5 ರಿಂದ 6:30 ಗಂಟೆಯವರೆಗೆ ಶ್ರೀ ಮಲೆ ಮಹದೇಶ್ವರ ಜೀವನ ಚರಿತ್ರೆ ಕುರಿತು ನಾಟಕ ಪ್ರದರ್ಶನ, ಸಂಜೆ 6:30 ರಿಂದ 7 ಗಂಟೆವರೆಗೆ ವಾರಣಾಸಿಯ ಕಾಶಿಯ ಮಾದರಿಯಲ್ಲಿ ಕಾವೇರಿ ನದಿಯ ತ್ರಿವೇಣಿ ಸಂಗಮದಲ್ಲಿ ವಿಶೇಷ ಗಂಗಾರತಿ, ಸಂಜೆ 7 ರಿಂದ 7.30 ಗಂಟೆವರೆಗೆ ವಿಶೇಷ ಲೇಸರ್ ಶೋ, ಸಂಜೆ 7 ರಿಂದ 9-30 ಗಂಟೆವರೆಗೆ ಜೆ ಎಸ್ ಎಸ್ ಸಂಸ್ಥೆಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇದನ್ನೂ ಓದಿ….ಹಾಸನಾಂಬೆ ದೇಗುಲದ ಬಾಗಿಲು ಓಪನ್ ಆಯಿತು…!
ಮಹಾ ಕುಂಭಮೇಳದ ಧಾರ್ಮಿಕ ಸಭೆಯು ಅ.15 ರಂದು ಬೆಳಿಗ್ಗೆ 11ಗಂಟೆಗೆ ಜರುಗಲಿದ್ದು, ಧಾರ್ಮಿಕ ಸಭೆಯಲ್ಲಿ ಆದಿ ಚುಂಚನಗಿರಿ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಬೆಂಗಳೂರು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ
ಶ್ರೀ ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮೀಜಿ, ಹಾಸನ ಜಿಲ್ಲೆಯ ಕೋಡಿಮಠದ ಶ್ರೀ ಶ್ರೀ ನಿ.ಪ್ರ.ಸ್ವ.ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ, ಕಾಗಿನೆಲೆ ಕನಕಗುರು ಪೀಠ ಶ್ರೀ ಶ್ರೀ ಶಿವಾನಂದಪುರಿ ಸ್ವಾಮೀಜಿ, ಬೇಬಿ ಮಠ ಮತ್ತು ಚಂದ್ರವನ ಆಶ್ರಮ ಶ್ರೀ ಶ್ರೀ ಡಾ. ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಶ್ರೀ ಮಲೆ ಮಹದೇಶ್ವರ ಬೆಟ್ಟ ಸುಕ್ಷೇತ್ರ ಶ್ರೀ ಸಾಲೂರು ಬ್ರಹನ್ಮಠ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಬೋವಿ ಗುರುಪೀಠ ಶ್ರೀ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ಆರ್ಯ ಈಡಿಗ ಮಹಾಸಂಸ್ಥಾನ ಮಠದ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿ, ಆದಿ ಜಾಂಬವ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಷಡಕ್ಷರಮುನಿ ಸ್ವಾಮೀಜಿ, ಶ್ರೀ ವಾಲ್ಮೀಕಿ ಮಹಾಸಂಸ್ಥಾನ ಮಠದ ಪ್ರಸನ್ನಾನಂದ ಸ್ವಾಮೀಜಿ, ವಿಶ್ವಬ್ರಹ್ಮ ಮಹಾ ಪೀಠದ ಶ್ರೀ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ, ಶ್ರೀ ಭಗೀರಥ ಉಪ್ಪಾರ ಪೀಠ ಶ್ರೀ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಕೈಲಾಸ ಆಶ್ರಮ ಶ್ರೀ ತಿರುಚಿ ಮಹಾಸಂಸ್ಥಾನ ಮಠ ಶ್ರೀ ಶ್ರೀ ಜಯೇಂದ್ರ ಪುರಿ ಸ್ವಾಮೀಜಿ, ಎಡತೊರೆ ಯೋಗಾನಂದೇಶ್ವರ ಮಠ ಶ್ರೀ ಶ್ರೀ ಶಂಕರ ಭಾರತಿ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಶ್ರೀ ಬಾಳೆಹೊನ್ನೂರು ಶಾಖಾಮಠ ಶ್ರೀ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಹಾಗೂ ಮಹಾಸಂಸ್ಥಾನ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ರವರು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ.ಇದನ್ನೂ ಓದಿ….ಸಮುದ್ರ ಮಂಥನದ ವೇಳೆ ಸಿಕ್ಕ 14 ರತ್ನಗಳ ಬಗ್ಗೆ ಮಾಹಿತಿ..
ಧಾರ್ಮಿಕ ಸಭೆಯನ್ನು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ರವರು ಉದ್ಘಾಟನೆಯನ್ನು ಮಾಡಲಿದ್ದಾರೆ.ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡೆ ಸಚಿವರಾದ ಡಾ. ನಾರಾಯಣಗೌಡ ರವರು ಅಧ್ಯಕ್ಷತೆ ವಹಿಸಲಿದ್ದಾರೆ.ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ ಸೋಮಶೇಖರ್ ರವರು ಘನ ಉಪಸ್ಥಿತಿ ವಹಿಸಲಿದ್ದಾರೆ.ವಿಶೇಷ ಆಹ್ವಾನಿತರಾಗಿ ಮಾಜಿ ಮುಖ್ಯಮಂತ್ರಿಗಳಾದ ಎಚ್. ಡಿ ಕುಮಾರಸ್ವಾಮಿ ರವರು
ಆಗಮಿಸಲಿದ್ದಾರೆ.