ಬೆಂಗಳೂರು: ಹಲವು ಹಬ್ಬಗಳಲ್ಲಿ ಕುಂದಾಪುರ ಕನ್ನಡ ಹಬ್ಬವು ಒಂದು ಎಲ್ಲಾ ಹಬ್ಬಗಳಂತೆ ಈ ಹಬ್ಬವನ್ನು ಸಹ ವಿಜೃಂಬಣೆಯಿಂದ ಆಚರಣೆ ಮಾಡಲಾಗುತ್ತದೆ. ಇನ್ನು ಇದೇ ತಿಂಗಳು ಜುಲೈ 23 ರಂದು ಕುಂದಾಪುರ ಕನ್ನಡ ಹಬ್ಬ ಆಚರಣೆ ಮಾಡುತಿದ್ದು ಈ ಹಬ್ಬಕ್ಕೆ ನಟ ರಿಷಭ್ ಶೆಟ್ಟಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ ಎಂದು ಕುಂದಾಪುರ ಕನ್ನಡ ಬೆಂಗಳೂರು ಅಧ್ಯಕ್ಷ ದೀಪಕ್ ಶೇಟ್ಟಿ ಹೇಳಿದ್ದಾರೆ.
ಐದನೇ ಕುಂದಾಪುರ ಕನ್ನಡ ಹಬ್ಬ ಬೆಂಗಳೂರಿನ ಅತ್ತಿಗುಪ್ಪೆಯಲ್ಲಿರವ ಬಂಟರ ಭವನದಲ್ಲಿ ಜುಲೈ 23 ರಂದು ನಡೆಯಲಿದೆ. ಇನ್ನು ಈ ಏದನೆ ಬಾರಿಗೆ ಕುಂದಾಪುರ ಕನ್ನಡ ಹಬ್ಬ ಆಯೋಜನೆ ಆಗುತ್ತಿದೆ. ಜುಲೈ 23 ರಂದು ಬೆಳಿಗ್ಗೆ 9 ಗಂಟೆಗೆ ನಡೆಯುವ ಈ ಹಬ್ಬಕ್ಕೆ ನಟ ರಿಷಬ್ ಶೆಟ್ಟಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರಾದ ಕಿರಣನ ಕೊಡ್ಗಿ ಮತ್ತು ಗುರುರಾಜ್ ಗಂಟಿಹೊಳೆ ಉಪಸ್ಥಿತರಿರಲಿದ್ದಾರೆ.
ಕುಂದಗನ್ನಡಿಗರ ಅಪರೂಪದ ಸಮ್ಮಿಲನಕ್ಕೆ ವೇದಿಕೆ ಕಲ್ಪಿಸಲಾಗಿದೆ ಎಂದು ಹೇಳಿದ ದೀಪಕ್ ಶೆಟ್ಟಿ, ಯಕ್ಷಗಾನ, ಹಾಡು, ನೃತ್ಯ, ಮಾತಿನ ಚಾವಡಿ, ಖಾದ್ಯ ವೈವಿದ್ಯ, ನಾಟಕ ಕಾರ್ಯಕ್ರಮಗಳು, ಗ್ರಾಮೀಣ ಆಟೋಟ ಸ್ಪರ್ಧೆಗಳು ನಡೆಯಲಿವೆ. ಚಿತ್ರರಂಗ ತಾರೆಗಳು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗೂ ನೀಡಲಿದ್ದಾರೆ.
Police : ಪೊಲೀಸರಿಗೆ ಇಲ್ಲ ರಕ್ಷಣೆ…! ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ..?!

