Kundapura News : ಕೊಲ್ಲೂರು ಅರಿಸಿನಗುಂಡಿ ಜಲಪಾತ ವೀಕ್ಷಣೆ ಸಂದರ್ಭ ಭಾನುವಾರ ಕಾಲು ಜಾರಿ ಬಿದ್ದು ನೀರುಪಾಲಾದ ಯವಕ ಇನ್ನೂ ಪತ್ತೆಯಾಗಿಲ್ಲ. ಶಿಬಮೊಗ್ಗ ಜಿಲ್ಲೆ ಭದ್ರಾವತಿಯ ಶರತ್ ಕುಮಾರ್ (23) ನೀರುಪಾಲಾದ ಯುವಕ.
ಶರತ್ ಕೊಲ್ಲೂರಿಗೆ ಸ್ನೇಹಿತ ಗುರುರಾಜ್ ಜೊತೆ ಕಾರಿನಲ್ಲಿ ಬಂದಿದ್ದ ಅರಶಿನಗುಂಡಿ ಜಲಪಾತಕ್ಕೆ ತೆರಳಿದ್ದರು. ಬಂಡೆಕಲ್ಲಿನ ಮೇಲೆ ನಿಂತು ಜಲಪಾತದಿಂದ ನೀರು ಧುಮ್ಮಿಕ್ಕುವ ದೃಶ್ಯ ನೋಡುತ್ತಿದ್ದ ವೇಳೆ ಅವಘಡ ಸಂಭವಿಸಿದೆ.
ಪತ್ತೆ ಮಾಡುವ ಕಾರ್ಯ ಆರನೇ ದಿನವಾದ ಶುಕ್ರವಾರವೂ ವಿಫಲಗೊಂಡಿದೆ. ಘಟ್ಟ ಪ್ರದೆಶದಲ್ಲಿ ವಿಪರೀತ ಮಳೆಯಾಗಿದ್ದರಿಂದ ರಭಸದಲ್ಲಿ ತುಂಬಿ ಹರಿಯುತ್ತಿದ್ದ ಸೌಪರ್ಣಿಕಾ ನದಿಗೆ ಬಿದ್ದ ತಕ್ಷಣವೇ ಶರತ್ ನಾಪತ್ತೆಯಾಗಿದ್ದ. ಬಳಿಕ ಪ್ರಸಿದ್ಧ ಮುಳುಗುತಜ್ಞ ಈಶ್ವರ್ ಮಲ್ಪೆ, ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಮೊದಲಾದವರೆಲ್ಲ ಶರತ್ ಗಾಗಿ ಹುಡುಕಾಟ ನಡೆಸಿ ಹಿಂತಿರುಗಿದ್ದಾರೆ.
ಗುರುವಾರ ಅಗ್ನಿಶಾಮಕದಳ ಹಾಗೂ ಎನ್.ಡಿಆರ್.ಎಫ್ ತಂಡ ಅರಿಶಿನಗುಂಡಿ ಫಾಲ್ಸ್ ನಲ್ಲಿ ಡ್ರೋಣ್ ಬಳಸಿ ಹುಡುಕಾಟ ನಡೆಸಿದೆ. ಶುಕ್ರವಾರವೂ ಹುಡುಕಾಟ ಮುಂದುವರೆಸಲಾಗಿದ್ದು ಯಾವುದೇ ಪ್ರಯೋಜನ ಸಿಕ್ಕಿಲ್ಲ.
Moharam : ಹುಬ್ಬಳ್ಳಿಯ ಬಿಡನಾಳ ಗ್ರಾಮದಲ್ಲಿ ಭಾವೈಕ್ಯತೆಯ ಮೊಹರಂ: ಸೌಹಾರ್ದತೆಗೆ ಸಾಕ್ಷಿಯಾದ ಹಬ್ಬ..!
Reels : ರೀಲ್ಸ್ ಮಾಡಲು ಹೋಗಿ ಜೀವಕ್ಕೆ ಕುತ್ತು ತಂದುಕೊಂಡ ಯುವಕ: ಸಾವು ಬದುಕಿನ ನಡುವೆ ಹೋರಾಟ