Tuesday, April 15, 2025

Latest Posts

Rain : ಕುಂದಾಪುರ : ಭಾರೀ ಮಳೆಗೆ ಅಪಾರ ಹಾನಿ, ಕೃಷಿ ನಾಶ, ಮನೆಗೆ ಹಾನಿ..!

- Advertisement -

Kundapura News : ಬಿರುಗಾಳಿ ಸಮೇತ ಬುಧವಾರ ಬೆಳಗಿನ ಜಾವ ಸುರಿದ ಬಿರುಗಾಳಿ ಮಳೆಗೆ  ಉಳ್ಳೂರು ಬಳಿ ಅಪಾರ ಹಾನಿ ಸಂಭವಿಸಿದೆ. ಏಳು ಮನೆಗಳಿಗೆ ಹಾನಿ ಉಂಟಾಗಿದ್ದು, ಒಂದೂವರೆ ಸಾವಿರಕ್ಕೂ ಅಧಿಕ ಅಡಕೆ ಹಾಗೂ ತೆಂಗಿನ ಮರಗಳು ಧರೆಗುರುಳಿದೆ.

ಜಯಕರ ಶೆಟ್ಟಿ ಮನೆಗೆ ಹಾನಿಯಾಗಿದ್ದು 2 ಲಕ್ಷ ನಷ್ಟವಾಗಿದೆ.  ಪಾರ್ವತಿ ಶೆಡ್ತಿ ಮನೆಗೆ ಹಾನಿಯಾಗಿದ್ದು, 25 ಸಾವಿರ,  ಸುಮತಿ ಶೆಡ್ತಿ  50 ಸಾವಿರ, ರತ್ನಾಕರ ಶೆಟ್ಟಿ ಮನೆಗೆ ಹಾನಿಯಾಗಿದ್ದು 20 ನಷ್ಟ ಉಂಟಾಗಿದೆ. ಕೃಷಿ ತೋಟದಲ್ಲಿನ ಫಸಲು ಭರಿತ ಅಡಕೆ- ತೆಂಗು ಮರಗಳು ನೆಲಕಚ್ಚಿದ್ದು, ಅಪಾರ ನಷ್ಟ ಸಂಭವಿಸಿದೆ.

ಸುಧಾಕರ ಶೆಟ್ಟಿ ಅವರ 225 ಅಡಿಕೆ ಮರ, ಶಂಕರ ಶೆಟ್ಟಿ 150, ಮಹಾಬಲ ನಾಯ್ಕರ 40, ಉದಯ ಪೂಜಾರಿ ತೋಟದ 15 ಮರ, ವನಜ ಆಚಾರ್ತಿಯವರ 35, ರತ್ನ ಆಚಾರಿ 75, ಲಕ್ಷ್ಮೀನಾರಾಯಣ ಆಚಾರಿ 25, ಕೃಷ್ಣ ಆಚಾರಿ 20, ಪಾರ್ವತಿ ಶೆಟ್ಟಿ 25, ಸಂಪಿಗೇಡಿ ನಾರಾಯಣ ಶೆಟ್ಟಿ 125 ಅಡಿಕೆ ಹಾಗೂ 4 ತೆಂಗಿನ ಮರ, ಸುಮತಿ ಶೆಡ್ತಿ 200 ಅಡಕೆ ಮರ, ರತ್ನಾಕರ ಶೆಟ್ಟಿ200 ಅಡಕೆ, ದಿವಾಕರ ಶೆಟ್ಟಿ 220 ಮರ ಹಾಗೂ ಕಲಾವತಿ ಶೆಟ್ಟಿ 250 ಅಡಕೆ ಮರಗಳು ಗಾಳಿಗೆ ಮುರಿದು ಬಿದ್ದಿವೆ.  1600ಕ್ಕೂ ಅಧಿಕ ಅಡಕೆ ಮರ ಹಾಗೂ ನಾಲ್ಕು ತೆಂಗಿನ ಮರಗಳು ಧರೆಗುರುಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಸಕ ಗುರುರಾಜ್  ಗಂಟಿಹೊಳೆ, ಕುಂದಾಪುರ ತಹಸೀಲ್ದಾರ್ ಶೋಭಾ ಲಕ್ಷ್ಮಿ, ಕಂದಾಯ ನಿರೀಕ್ಷಕ ರಾಘವೇಂದ್ರ ಡಿ., ಉಳ್ಳೂರು ಗ್ರಾಮ ಕರಣಿಕ ಕಿರಣ್. ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಹೆಬ್ಬಾರ್ , ಪಿಡಿಒ ಶ್ರೀಧರ್ ಕಾಮತ್. ಸಂಜೀವ ಶೆಟ್ಟಿ ಸಂಪಿಗೇಡಿ, ರೋಹಿತ್ ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Grama Panchayath : ಚಿಕ್ಕಬೀಚನಹಳ್ಳಿ ಗ್ರಾಮಪಂಚಾಯಿತಿ ಚುನಾವಣೆ ಯಲ್ಲಿಅವಿರೋಧ ಆಯ್ಕೆ

Grama Panchayath : ಶಿರಗುಪ್ಪಿ ಗ್ರಾಮ ಪಂಚಾಯಿತಿ ಬಿಜೆಪಿ ತೆಕ್ಕೆಗೆ : ನೂತನ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ..!

Eshwar Khandre : ಕೇಂದ್ರದ ಮೇಲೆ ಒತ್ತಡ ಹೇರಿ ಕಸ್ತೂರಿ ರಂಗನ್ ವರದಿ ರದ್ದುಪಡಿಸಲು ಬಿಜೆಪಿಗೆ ಸವಾಲು: ಈಶ್ವರ್ ಖಂಡ್ರೆ

 

- Advertisement -

Latest Posts

Don't Miss