devotional story:
ಕುಂಕುಮ ಹೆಣ್ಣುಮಕ್ಕಳ ಸಿಂಗಾರದ ವಸ್ತುಗಳಲ್ಲೊಂದು ಎನ್ನಬಹುದು ಯಾವ ಆಭರಣಗಳನ್ನು ತೊಡದಿದ್ದರೂ ಹಣೆಗೆ ಕುಂಕುಮವಿಟ್ಟರೆ ಸಾಕು ಸುಂದರವಾಗಿ ಶೋಭಿಸುತ್ತಾರೆ. ,ಎಷ್ಟೇ ಆಭರಣ ಹಾಕಿ ಅಲಂಕಾರ ಮಾಡಿಕೊಂಡರು ನೋಡುವುವರೆಲ್ಲರಿಗೂ ಮೊದಲು ಗಮನ ಸೆಳೆಯುವುದು ಹಣೆಯಲ್ಲಿರುವ ಕುಂಕುಮ. ಕುಂಕುಮವನ್ನು ಹಣೆಗೆ ಹಚ್ಚಿಕೊಳ್ಳುವುದರಿಂದ ನಮಗೆ ಬಹಳಷ್ಟು ಲಾಭಗಳಿವೆ ಎಂದು ಹಿಂದೂ ಧರ್ಮದಲ್ಲಿ ಹೇಳಲಾಗಿದೆ .ಕುಂಕುಮವು ಸೌಭಾಗ್ಯ ಮತ್ತು ಅದೃಷ್ಟದ ಸಂಕೇತವಾಗಿ ಪರಿಗಣಿಸುತ್ತರೆ, ಯಾವುದೇ ಪೂಜೆ ಅಥವಾ ಇನ್ನಿತರ ಶುಭ ಸಮಾರಂಭಗಳಲ್ಲಿ ಕುಂಕುಮವನ್ನು ವಿಶೇಷವಾಗಿ ಬಳಸಿಕೊಳ್ಳುತ್ತಾರೆ ಮತ್ತು ಪೂಜನೀಯ ಸ್ಥಾನವನ್ನು ನೀಡುತ್ತಾರೆ, ವಿವಾಹಿತ ಸ್ತ್ರೀಯರು ತಮ್ಮ ಕೆನ್ನೆಗೆ ಅರಿಶಿನ ಹಣೆಗೆ ಕುಂಕುಮದ ಸಿಂಧೂರವನ್ನಿಟ್ಟು ತಮ್ಮ ಮುತ್ತೈದೆತನವನ್ನು ಸಂಕೇತಿಸುತ್ತಾರೆ
ನಮ್ಮ ಭಾರತದಲ್ಲಿ ಕುಂಕುಮಕ್ಕೆ ಹೆಚ್ಚಿನ ಮಹತ್ವವಿದೆ ‘ಸಿಂಧೂರಮ್ ಸೌಂದರ್ಯ ಸಾಧನಂ’ ಎಂಬ ಮಾತೇ ಇದೆ ಸೌಂದರ್ಯದಲ್ಲಿ ಕುಂಕುಮಕ್ಕೆ ಅಷ್ಟು ಪ್ರಾಧಾನ್ಯತೆಯಿದೆ. ಹೆಣ್ಣುಮಕ್ಕಳನ್ನು ಸಂಬೋಧಿಸುವಾಗ ಚಿ। ಸೌ। ಹ। ಕುಂ। ಶೋ ಎಂದು ಬರೆಯುತ್ತಾರೆ. ಅದರ ವಿಸ್ತೃತ ರೂಪ ಚಿರಂಜೀವಿ ಸೌಭಾಗ್ಯವತಿ ಹರಿದ್ರಾ ಕುಂಕುಮ ಶೋಭಿತೇ ಎಂದಾಗಿದೆ.
ಕುಂಕುಮವನ್ನು ಹಚ್ಚಿಕೊಳ್ಳುವಾಗ ಎರಡು ಹುಬ್ಬುಗಳ ಮದ್ಯೆ ಇರುವ ಆಜ್ಞಾಚಕ್ರದ ಮೇಲೆ ಒತ್ತಡ ಬೀಳುತದ್ದೇ ಇದರಿಂದ ಮುಖದ ಮೇಲಿನ ಸ್ನಾಯುಗಳಿಗೆ ರಕ್ತ ಸಂಚಾರ ಸುಗಮವಾಗುತ್ತದೆ ಹಾಗು ಹಣೆಯಮೇಲಿನ ಸ್ನಾಯುಗಳ ಒತ್ತಡವು ಕಡಿಮೆಯಾಗಿ ಮುಖವು
ಪ್ರಕಾಶಮಾನವಾಗಿ ಕಾಂತಿಯಿಂದ ಹೊಳೆಯುವುದಕ್ಕೆ ಸಹಾಯ ಮಾಡುತ್ತದೆ .ಕೆಟ್ಟಶಕ್ತಿಗಳಿಗೆ ಆಜ್ಞಾಚಕ್ರದಿಂದ ಶರೀರದ ಒಳಗೆ ಸೇರಿಕೊಳ್ಳದಿರಲು ರಕ್ಷಣೆ ಮಾಡುತ್ತದೆ ,ಹೆಚ್ಚಿನ ಮಹಿಳೆಯರು ಕುಂಕುಮವನ್ನು ಧರಿಸುವ ಬದಲು ಪ್ಲಾಸ್ಟಿಕ್ ಬಿಂದಿಗಳನ್ನು ಬಳಸುತ್ತಾರೆ ಪ್ಲಾಸ್ಟಿಕ್ ಬಿಂದಿಯನ್ನು ಬಳಸುವುದರಿಂದ ನೀವು ನಿಮ್ಮ ಮೂರನೆ ಕಣ್ಣು ಅಂದರೆ ಆಜ್ಞಾಚಕ್ರ ಮುಚ್ಚಿದ್ದೀರಿ ಎನ್ನಬಹುದು .ಕುಂಕುಮ ಧರಿಸಿರುವ ಹೆಣ್ಣಿನ ಮುಖವನ್ನು ಯಾರಾದರು ನೋಡಿದಾಗ ಅವರ ಕಣ್ಣು ಅವಳ ಆ ಕುಂಕುಮದ ಮೇಲೆಯೇ ಕೇಂದ್ರೀಕೃತವಾಗುತ್ತೆ .
ಹಾಗಾದರೆ ದೇವಸ್ಥಾನ ಮತ್ತು ಪೂಜಾ ಸ್ಥಳಗಳಲ್ಲಿ ಕುಂಕುಮ, ಗಂಧ ಮತ್ತು ವಿಭೂತಿಯನ್ನು ಏಕೆ ಕೊಡುತ್ತಾರೆ ಎಂದು ಬಹಳ ಜನರಿಗೆ ತಿಳಿದಿರುವುದಿಲ್ಲ ಇದರ ಬಗ್ಗೆ ತಿಳ್ಕೊಳೋಣ ಬನ್ನಿ. ಕೆಲವು ವಸ್ತುಗಳಲ್ಲಿ ಅತಿ ಸುಲಭವಾಗಿ ಶಕ್ತಿಯನ್ನು ಹೀರಿಕೊಳ್ಳುವ ಸಾಮರ್ಥ್ಯವಿರುತ್ತದೆ ಇದರಲ್ಲಿ ಮೊದಲನೆಯದಾಗಿ ವಿಭೂತಿ. ಇದು ಅತೀ ಸೂಕ್ಷ್ಮವಾದ ವಸ್ತು ಎನ್ನಬಹುದು ವಿಭೂತಿಯಲ್ಲಿ ಅತಿ ಸುಲಭವಾಗಿ ಶಕ್ತಿಯನ್ನು ಸೇರಿಸಬಹುದು ಆದಕಾರಣ ದೇವಾಲಯದಲ್ಲಿ ವಿಭೂತಿಯನ್ನು ಕೊಡುತ್ತಾರೆ. ಎರಡನೆಯದಾಗಿ ಕುಂಕುಮ ಇದು ಕೂಡ ಅತಿ ಸುಲಭವಾಗಿ ಶಕ್ತಿಯನ್ನು ಹೀರಿಕೊಳ್ಳುವ ಗುಣವನ್ನು ಹೊಂದಿದೆ. ದೇವಾಲಯಗಳಲ್ಲಿ ಪಾಸಿಟಿವ್ ಶಕ್ತಿಶಾಲಿ ಕಂಪನಗಳು ಇರುತ್ತದೆ ಆದ್ದರಿಂದ ಕುಂಕುಮ ಶಕ್ತಿಯನ್ನು ಹೀರಿಕೊಳ್ಳಲೆಂದು ಗರ್ಭಗುಡಿಯಲ್ಲಿ ಸ್ವಲ್ಪ ಕಾಲ ಇಡಲಾಗುತ್ತದೆ ನಂತರ ದೇವಾಲಯಕ್ಕೆ ಬರುವ ಭಕ್ತರಿಗೆ ಇದನ್ನು ನೀಡಲಾಗುತ್ತದೆ. ಗಂಧವು ಕೂಡ ಸ್ವಲ್ಪಮಟ್ಟಿಗೆ ಶಕ್ತಿಯನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ .
ಹಾಗಾದರೆ ಯಾವ ಬೆರಳಿನಿಂದ ಕುಂಕುಮ ಹಚ್ಚಿಕೊಳ್ಳಬೇಕು ಎಂಬ ಗೊಂದಲ ಸಾಮಾನ್ಯವಾಗಿ ಎಲ್ಲರಲ್ಲಿಯೂ ಇರುತ್ತದೆ .
ಪುರುಷರು ತಮ್ಮ ಭ್ರೂಮಧ್ಯದಲ್ಲಿ ಮಧ್ಯದ ಬೆರಳಿನಿಂದ ಕುಂಕುಮದ ಉದ್ದ ತಿಲಕವನ್ನು ಹಚ್ಚಬೇಕು ಸ್ತ್ರೀಯರು ತಮಗೆ ಅನಾಮಿಕಾದಿಂದ (ಕಿರುಬೆರಳಿನ ಪಕ್ಕದ ಬೆರಳು) ಗೋಲಾಕಾರದ ಕುಂಕುಮವನ್ನು ಹಚ್ಚಬೇಕು ಎಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ.
ಪುರುಷರಲ್ಲಿ, ಸ್ತ್ರೀಯರಿರಲ್ಲಿ ಇತರರಿಗೆ ಕುಂಕಮವನ್ನು ಹಚ್ಚುವಾಗ ಮಧ್ಯದ ಬೆರಳನ್ನು ಉಪಯೋಗಿಸಬೇಕು ಏಕೆಂದರೆ ಇತರರನ್ನು ಸ್ಪರ್ಶಿಸುವಾಗ ಬೆರಳಿನ ಮೂಲಕ ಅವರಲ್ಲಿರುವ ಕೆಟ್ಟ ಶಕ್ತಿಗಳು ನಮ್ಮ ದೇಹದಲ್ಲಿ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ, ಆದುದರಿಂದ ತೇಜದ ಬಲವಿರುವ ಮಧ್ಯಮಾವನ್ನು ಉಪಯೋಗಿಸಿ ತಮ್ಮ ದೇಹದ ರಕ್ಷಣೆಯನ್ನು ಮಾಡಿಕೊಳ್ಳಬೇಕು .
ಉತ್ತರ ಭಾರತದಲ್ಲಿ ಬೈತಲೆಯ ಭಾಗದಲ್ಲಿ ಕುಂಕುಮವನ್ನು ಹಚ್ಚಿಕೊಳ್ಳುತ್ತಾರೆ ಉತ್ತರ ಭಾರತದಲ್ಲಿ ಮದುವೆಯಾದ ಸ್ತ್ರೀಯರು ಮಾತ್ರ ಕುಂಕುಮ ಹಚ್ಚಿಕೊಳ್ಳುವ ಸಂಪ್ರದಾಯವಿದೆ ಆದರೆ ದಕ್ಷಿಣ ಭಾರತದಲ್ಲಿ ಮದುವೆಯಾದ ಸ್ತ್ರೀಯರು ಮಾತ್ರವಲ್ಲದೆ ಎಲ್ಲಾ ಹೆಣ್ಣುಮಕ್ಕಳು ಸಾಮಾನ್ಯವಾಗಿ ಕುಂಕುಮವನ್ನಿಡುತ್ತಾರೆ. ಹಾಗಾದರೆ ನೀವು ಹಣೆಗೆ ಕುಂಕುಮವನ್ನು ಹಚ್ಚಿ ಅದರಿಂದ ಆಗುವ ಉಪಯೋಗಗಳನ್ನು ಪಡೆಯಿರಿ .
ಪ್ರತಿನಿತ್ಯ ಮನೆಯಲ್ಲಿ ಪೂಜೆ ಮಾಡುವಾಗ ಈ ವಿಷಯಗಳ ಬಗ್ಗೆ ಎಚ್ಚರವಹಿಸಿ..!