ಗಂಧದಗುಡಿಯಲ್ಲಿ ಸಿನಿಮೋತ್ಸವದ ಸಂಭ್ರಮ ಶುರುವಾಗಿದೆ. ಇಂದು ಒಂದೇ ದಿನ ನಾಲ್ಕು ಸಿನಿಮಾಗಳು ತೆರೆಗಪ್ಪಳಿಸಿದ್ದು, ಮೊದಲ ಲಯಕ್ಕೆ ಕನ್ನಡ ಚಿತ್ರ ಮರಳುತ್ತಿದೆ. ಚೀನಿ ವೈರಸ್ ನಿಂದ ಬಣಗುಡ್ತಿದ್ದ ಚಿತ್ರಮಂದಿರಗಳಲ್ಲಿ ಈಗ ಕಟೌಟ್, ಹಾರ-ತುರಾಯಿ, ಸಿಳ್ಳೆ-ಚಪ್ಪಾಳೆ ಎಲ್ಲವೂ ಶುರುವಾಗ್ತಿದೆ. ಸದ್ಯ ಕನ್ನಡ ಸಿನಿಮಾದಲ್ಲಿ ಸ್ಟಾರ್ ಹೀರೋಗಳ ಸಿನಿಮಾಗಳ ಸುಗ್ಗಿ ಆರಂಭವಾಗ್ತಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬೆಳ್ಳಿಪರದೆಯ ಮೇಲೆ ಅಬ್ಬರಿಸಿ ಕೇಕೇ ಹಾಕೋದಿಕ್ಕೆ ರೆಡಿಯಾಗಿವೆ. ಈ ಪೈಕಿ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಬಿಲ್ಡ್ ಮಾಡಿರುವ ಸಿನಿಮಾ ಪೊಗರು.
ಧ್ರುವ ಸರ್ಜಾ ಹಾಗೂ ನಂದ ಕಿಶೋರ್ ಕಾಂಬಿನೇಷನ ಪೊಗರು ತೆರೆಮೇಲೆ ಪೊಗರಿಸಂ ತೋರಿಸಲು ರೆಡಿಯಾಗಿದೆ. ಇದೇ ತಿಂಗಳ 19ರಂದು ಅದ್ಧೂರಿಯಾಗಿ ತೆರೆಗೆ ಅಪ್ಪಳಿಸ್ತಿದೆ. ಈಗಾಗ್ಲೇ ಪೋಸ್ಟರ್, ಡೈಲಾಗ್ ಟೀಸರ್, ಸಾಂಗ್ ಎಲ್ಲಾ ಹಂತದಲ್ಲಿ ಬೇಜಾನ್ ಹವಾ ಸೃಷ್ಟಿಸಿರುವ ಪೊಗರು ಸಿನಿಮಾವನ್ನು ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ ವಿತರಣೆ ಮಾಡ್ತಿದೆ. ರಾಜ್ಯಾದ್ಯಂತ ಭರ್ಜರಿ ಹುಡ್ಗನ ಪೊಗರು ಸಿನಿಮಾವನ್ನು ಅದ್ಧೂರಿಯಾಗಿ ತೆರೆಗೆ ತರುವ ಜವಾಬ್ದಾರಿ ಹೊತ್ತುಕೊಂಡಿದೆ.
ಇನ್ನೂ ಸಿನಿಮಾದಲ್ಲಿ ಫರ್ ದ ಫಸ್ಟ್ ಟೈಮ್ ಪೊಗರು ಹುಡ್ಗನಿಗೆ ಜೋಡಿಯಾಗಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟಿಸಿದ್ದು, ನಂದಕಿಶೋರ್ ನಿರ್ದೇಶನ, ಬಿ.ಕೆ.ಗಂಗಾಧರ್ ನಿರ್ಮಾಣದ ಪೊಗರು ಸಿನಿಮಾ ಕನ್ನಡ ಜೊತೆಗೆ ತೆಲುಗಿನಲ್ಲಿಯೂ ರಿಲೀಸ್ ಆಗ್ತಿದೆ.